Viral Video: ರೈಲಿನಲ್ಲಿ ಹೀಗೊಂದು ದೊಡ್ಡಕೂಸಿನ ಜೋಳಿಗೆ; ಬುದ್ಧಿವಂತನಿಗೆ ಜಯವಾಲಿ ಎಂದ ನೆಟ್ಟಿಗರು

|

Updated on: Sep 25, 2023 | 11:34 AM

Indian Railway: ರೈಲಿನಲ್ಲಿ ಕಾಲಿಡಲೂ ಜಾಗವಿಲ್ಲ. ಆದರೆ ರಾತ್ರಿಯಿಡೀ ಪ್ರಯಾಣಿಸಬೇಕು. ನಿಲ್ಲಲು ಕೂರಲು ಜಾಗವಿಲ್ಲವೆಂದಮೇಲೆ ಮಲಗುವುದೆಲ್ಲಿ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಕ ಹೀಗೆ ಇಲ್ಲಿ ಮಲಗಬೇಕು ಎಂದು ಜೋಳಿಗೆ ತಂತ್ರವನ್ನು ತೋರಿಸಿಕೊಟ್ಟಿದ್ದಾನೆ. ಇದನ್ನು ನೋಡಿದ ಅನೇಕ ನೆಟ್ಟಿಗರು ತಮಾಷೆಯಿಂದ ಪ್ರತಿಕ್ರಿಯಿಸಿದ್ದಾರೆ.

Viral Video: ರೈಲಿನಲ್ಲಿ ಹೀಗೊಂದು ದೊಡ್ಡಕೂಸಿನ ಜೋಳಿಗೆ; ಬುದ್ಧಿವಂತನಿಗೆ ಜಯವಾಲಿ ಎಂದ ನೆಟ್ಟಿಗರು
ರೈಲಿನಲ್ಲಿ ಜೋಳಿಗೆಯಂತೆ ಬೆಡ್​ಶೀಟ್ ಕಟ್ಟಿಕೊಂಡು ಮಲಗಿದ ಯುವಕ
Follow us on

Train : ಈ ರೈಲಿನಲ್ಲಿ ಕಾಲಿಡಲೂ ಜಾಗವಿಲ್ಲ. ಜಾಗವಿದ್ದಲ್ಲೆಲ್ಲ ಜನರು ಮುದುರಿಕೊಂಡು ನಿದ್ರೆ ಹೋಗಿದ್ದಾರೆ. ಹೀಗಿದ್ದಾಗ ಯುವಕನೊಬ್ಬ ಉಪಾಯಗಾಣದೆ ಹೊಸ ತಂತ್ರವನ್ನು ಹೂಡಿದ್ದಾನೆ. ಅದು ಜೋಳಿಗೆ ತಂತ್ರ. ಯುವಕ ಬೆಡ್​ಶೀಟ್​ ಅನ್ನು ರೈಲಿನ (Indian Railway) ಎರಡೂ ಸೀಟ್​ಗಳಿಗೆ ಕಟ್ಟಿ ಒಂದು ದೊಡ್ಡ ಜೋಳಿಗೆ ತಯಾರಿಸಿದ್ದಾನೆ. ಆಮೇಲೆ ಮಗುವಿನಂತೆ ಆ ಜೋಳಿಗೆಯಲ್ಲಿ ಆರಾಮಾಗಿ ಮಲಗಿದ್ದಾನೆ. ನೆಟ್ಟಿಗರು ಈ ವಿಡಿಯೋ ನೋಡಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಖಾತೆದಾರ ಹತೀಮ್ ಇಸ್ಮಾಯಿಲ್ ಎನ್ನುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಗಿನ್ನೀಸ್​ ವಿಶ್ವದಾಖಲೆ; ನಿಂಜಾ ಪ್ರಶಸ್ತಿ ಪಡೆದ 71 ವರ್ಷದ ಹಿರಿಯ ಮಹಿಳೆ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎರಡು ತಿಂಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 10 ಮಿಲಿಯನ್​ ಜನರು ನೋಡಿದ್ದಾರೆ. ಲಕ್ಷಾಂತರ ಜನರು ಪ್ರತಿಕ್ರಿಯಿಸಿದ್ದಾರೆ. ಮಲಯಾಳದಲ್ಲಿ ಈ ವಿಡಿಯೋಗೆ ಕ್ಯಾಪ್ಷನ್​ ಬರೆಯಲಾಗಿದೆ; ಒಂದು ಲೋಕಲ್ ಪ್ರಯಾಣ.

ರೈಲಿನಲ್ಲಿ ದೊಡ್ಡಕೂಸಿನ ಜೋಳಿಗೆ

ಈ ತಮ್ಮ ತನ್ನ ಮೆದುಳನ್ನು ಶೇ. 200 ಉಪಯೋಗಿಸಿಕೊಂಡಿದ್ದಾನೆ ಎಂದು ಒಬ್ಬರು. ನಿನಗೆ ಸಲ್ಯೂಟ್​ ಬ್ರೋ ಎಂದು ಮತ್ತೊಬ್ಬರು. ಟ್ರೇನಿಗಿಂತಲೂ ಈತ ತನ್ನ ಬೆಡ್​ಶೀಟ್ ಅನ್ನು ಹೆಚ್ಚು ನಂಬುತ್ತಾನೆ ಎಂದು ಇನ್ನೊಬ್ಬರು. ಬೆಡ್​ಶೀಟ್​ನಲ್ಲಿ ತೂಗಾಡಿಕೊಂಡಿರುವ ಮಗುವಿನಂತೆ ನಾನೂ ಇರಬೇಕು ಎಂದಿದ್ದಾರೆ ಇನ್ನೂ ಒಬ್ಬರು. ಇಷ್ಟು ಗಟ್ಟಿಯಾಗಿರುವ ಈ ಬೆಡ್​ಶೀಟ್ ಯಾವ ಕಂಪೆನಿಯದು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಕಂಡೀರಾ ಚೀನಾದ ಈ ಬಾಲಬಾಣಸಿಗನ; ಅಚ್ಚರಿಗೊಂಡ ನೆಟ್ಟಿಗರು

ತಿರುಪತಿಯಲ್ಲಿಯೂ ನನ್ನ ಅನುಭವವೂ ಇದೇ ಆಗಿತ್ತು ಎಂದಿದ್ದಾರೆ ಒಬ್ಬರು. ಇದು ಇಂಡಿಯನ್ ರೈಲ್ವೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವಾ? ಎಂದು ಇನ್ನೊಬ್ಬರು. ಉತ್ತರ ಭಾರತದ ರೈಲುಗಳಲ್ಲಿ ಇಂಥ ದೃಶ್ಯಗಳು ಸರ್ವೇ ಸಾಮಾನ್ಯ ಎಂದು ಮತ್ತೊಬ್ಬರು. ನಿಜಕ್ಕೂ ಪ್ರವಾಸದ ಅವಿಸ್ಮರಣೀಯ ಕ್ಷಣ ಎಂದಿದ್ದಾರೆ ಮಗದೊಬ್ಬರು. ನಮ್ಮ ಭಾರತೀಯ ರೈಲ್ವೆ ಇಲಾಖೆಯೂ ಹೀಗೆಯೇ ಮಲಗಿದೆ ಎಚ್ಚರಿಸುವವರಾರು? ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:33 am, Mon, 25 September 23