Viral Video: ಮೆಟ್ರೋದಲ್ಲಿ ಯುವಕನ ವಿಚಿತ್ರ ಡಾನ್ಸ್  ನೋಡಿ ಪ್ರಯಾಣಿಕರು ಸುಸ್ತೋ ಸುಸ್ತು

ಇತ್ತೀಚಿಗಂತೂ ಈ ರೈಲಿನಲ್ಲಿ ಹಾಗೂ ಮೆಟ್ರೋದಲ್ಲಿ ರೀಲ್ಸ್ ಮಾಡುವವರ ಕಾಟ ತುಂಬಾನೇ ಹೆಚ್ಚಾಗಿದೆ.  ಸಾರ್ವಜನಿಕರು ಪ್ರಯಾಣಿಸುವಂತಹ  ಸ್ಥಳಗಳಲ್ಲಿ  ಈ  ರೀತಿಯ ವರ್ತನೆ ಸರಿಯಲ್ಲ ಎಂದರೂ, ಕೆಲವೊಬ್ಬರೂ ಪದೇ ಪದೇ ಇಂತಹ ಹುಚ್ಚಾಟಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ  ಪ್ರಯಾಣಿಕರಿಂದ ತುಂಬಿದ್ದ ಮೆಟ್ರೋ ರೈಲಿನಲ್ಲಿ ಚಿತ್ರವಿಚಿತ್ರ ಡಾನ್ಸ್ ಸ್ಟೆಪ್ಸ್ ಹಾಕುತ್ತಾ ರೀಲ್ಸ್ ಮಾಡಿದ್ದು,  ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

Viral Video: ಮೆಟ್ರೋದಲ್ಲಿ ಯುವಕನ ವಿಚಿತ್ರ ಡಾನ್ಸ್  ನೋಡಿ ಪ್ರಯಾಣಿಕರು ಸುಸ್ತೋ ಸುಸ್ತು
ವೈರಲ್​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Dec 15, 2023 | 3:46 PM

ಇತ್ತೀಚಿಗಂತೂ ಜನರು ರೀಲ್ಸ್ ಹುಚ್ಚಿಗಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಸಲುವಾಗಿ ಎಂತಹ ಸಾಹಸಕ್ಕೂ ಬೇಕಾದರೂ ಕೈ ಹಾಕುತ್ತಾರೆ.  ಅದರಲ್ಲೂ ಈಗೀಗ ಹೆಚ್ಚಾಗಿ ಯುವಕರು ಮತ್ತು ಯುವತಿಯರು ರೈಲು ಮತ್ತು ಮೆಟ್ರೋದಲ್ಲಿ ರೀಲ್ಸ್ ವಿಡಿಯೋ ಮಾಡುವಂತಹ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾರೆ. ಅದೆಷ್ಟೋ ಜನ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  ಸಾರ್ವಜನಿಕರು ಪ್ರಯಾಣಿಸುವಂತಹ  ಸ್ಥಳಗಳಲ್ಲಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರೂ,  ಮೆಟ್ರೋ ಅಧಿಕಾರಿಗಳು ರೀಲ್ಸ್ ಮಾಡುವವರಿಗೆ ಕಟ್ಟುನಿಟ್ಟಾದ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೂ, ಮೆಟ್ರೋದಲ್ಲಿ ಹಾಗೂ ರೈಲಿನಲ್ಲಿ  ರೀಲ್ಸ್ ಮಾಡುವವರ ಹುಚ್ಚಾಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ.  ಇಲ್ಲೊಬ್ಬ ಯುವಕ ಅದೇ ರೀತಿ ಮೆಟ್ರೋದಲ್ಲಿ ಸೊಂಟ ಬಳುಕಿಸುತ್ತಾ ನೃತ್ಯ ಮಾಡಿದ್ದಾನೆ. ಇದೀಗ ಈತನ ಡಾನ್ಸ್ ವಿಡಿಯೋ  ವೈರಲ್ ಆಗಿದ್ದು, ನಿನ್ನ ಡ್ಯಾನ್ಸ್ ಚೆನ್ನಾಗಿದೆ, ಆದ್ರೆ ಈ ಪ್ರತಿಭೆಯನ್ನು  ಮತ್ತೊಮ್ಮೆ ಪ್ರದರ್ಶಿಸಬೇಡ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಈ ವಿಡಿಯೋವನು ಸತ್ಯ ದೇವ್ ನಿಶಾದ್  (mr_hobbit_) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯುವಕನೊಬ್ಬ, ಪ್ರಯಾಣಿಕರಿಂದ ತುಂಬಿದ್ದ ಮೆಟ್ರೋ ರೈಲಿನಲ್ಲಿ ನೃತ್ಯ ಮಾಡಿವುದುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ವಿಡಿಯೋದಲ್ಲಿ ಯುವಕನೊಬ್ಬ ಪ್ರಯಾಣಿಕರಿಂದ ತುಂಬಿದ್ದ ಮೆಟ್ರೋ ರೈಲಿನಲ್ಲಿ ಇತ್ತೀಚಿಗೆ ಭಾರೀ ವೈರಲ್ ಆಗಿರುವ ʼಟುಮಕ್ ಟುಮಕ್ʼ ಹಾಡಿಗೆ ಚಿತ್ರವಿಚಿತ್ರ ಡಾನ್ಸ್ ಸ್ಟೆಪ್ಸ್ ಹಾಕುತ್ತಾ, ರೀಲ್ಸ್ ಮಾಡುವುದನ್ನು ಕಾಣಬಹುದು. ಈ ಯುವಕ ಹುಚ್ಚಾಟಕ್ಕೆ ಸಹ ಪ್ರಯಾಣಿಕರು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಇದನ್ನೂ ಓದಿ: ಬನ್ನಿ.. ಬನ್ನಿ.. ಟಾಮ್ ಮತ್ತು ಜೆರ್ರಿ ಭಾರತಕ್ಕೆ ಬಂದಿದ್ದಾರಂತೆ; ಯಾವೆಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ರು ಗೊತ್ತಾ? 

ಡಿಸೆಂಬರ್ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  451K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಷ್ಟು ಜನರ ಮಧ್ಯೆ ಈ ರೀತಿ  ಡಾನ್ಸ್ ಮಾಡಿದ ಈತನ ಆತ್ಮವಿಶ್ವಾಸಕ್ಕೆ ಮೆಚ್ಚಲೇಬೇಕುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹುಡುಗಿಯರಿಗಿಂತ ಈ ಯುವಕನೇ ತುಂಬಾ ಅದ್ಭುತವಾಗಿ ಡಾನ್ಸ್ ಮಾಡಿದ್ದಾನೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ʼನಿನ್ನ ಡ್ಯಾನ್ಸ್ ಏನೋ ತುಂಬಾ ಚೆನ್ನಾಗಿದೆ,  ಆದ್ರೆ ಈ ಪ್ರತಿಭೆಯನ್ನು ದಯವಿಟ್ಟು  ಮತ್ತೊಮ್ಮೆ ಪ್ರದರ್ಶಿಸಬೇಡʼ ಎಂದು ಕಾಲೆಳೆದಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Published On - 3:44 pm, Fri, 15 December 23