ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ, ಪಕ್ಷಿಗಳ ವಿಡಿಯೋ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ನೆಟ್ಟಿಗರನ್ನು ಆಕರ್ಷಿಸುತ್ತವೆ. ಪ್ರಾಣಿಗಳ ನಡುವೆ ಹೊಡೆದಾಟ ಆಡುವುದನ್ನು ನೊಡಿದ್ದೇವೆ, ಪಕ್ಷಿಗಳು ಕಚ್ಚಿಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಪ್ರಾಣಿ ಮತ್ತು ಪಕ್ಷಿ ಹೊಡೆದಾಟ ನಡೆಸುವುದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲೊಂದು ನವಿಲು (Peacock ) ಮತ್ತು ಮೇಕೆ (Goat) ಯ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಐಪಿಎಸ್ (IPS) ಅಧಿಕಾರಿ ದಿಪಾಂಶು ಕಬ್ರಾ (Dipanshu Kabra) ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಕ್ಕೆ ನಿಮ್ಮ ಬಲದ ಬಗ್ಗೆ ನಿಮಗೆ ನಂಬಿಕೆಯಿರಲಿ ದೇವರು ಎಲ್ಲರಲ್ಲೂ ಹೋರಾಡುವ ಗುಣವನ್ನು ನೀಡಿರುತ್ತಾನೆ ಎಂದು ಕ್ಯಾಪ್ಷನ್ ನೀಡಿದ್ದಾರೆ.
अपनी सामर्थ्य पर हमेशा भरोसा करें,
ईश्वर ने सभी को मुसीबतों से टकराने योग्य बनाया है.#सुप्रभात pic.twitter.com/AgD9lxC4OQ— Dipanshu Kabra (@ipskabra) February 28, 2022
ವಿಡಿಯೋದಲ್ಲಿ ಬಿಳಿ ಬಣ್ಣದ ಮೇಕೆಯ ಮೇಲೆ ನವಿಲು ಮೇಲೆ ದಾಳಿ ಮಾಡಲು ಯತ್ನಿಸಿದೆ. ಇದರಿಂದ ಮೇಕೆ ತಪ್ಪಿಸಿಕೊಂಡಿದೆ, ಮೂರು ಬಾರಿ ನವಿಲು ಮೇಕೆಯ ಮೇಲೆ ಹಾರಲು ಯತ್ನಿಸಿದಾಗಲೂ ಮೇಕೆ ತಪ್ಪಿಸಿಕೊಂಡಿದೆ. ಇದು ನೋಡಲು ತಮಾಷೆಯಾಗಿದ್ದರೂ, ಎಲ್ಲರಲ್ಲೂ ಒಂದು ಸುಪ್ತ ಶಕ್ತಿ ಅಡಗಿರುತ್ತದೆ ಎನ್ನುವುದನ್ನು ಹೇಳುವಂತಿದೆ.
ವೈರಲ್ ಆದ ವಿಡಿಯೋ, 16 ಸಾವಿರ ವೀಕ್ಷಣೆ ಪಡೆದಿದ್ದು 2 ಸಾವಿರಕ್ಕೂ ಹೆಚ್ಚು ರೀಟ್ವೀಟ್ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ ಬಳಕೆದಾರರೊಬ್ಬರು ಎಂತಹ ಅದ್ಭುತ ಯುದ್ಧ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ಬೆಂಗಾಳಿ ಆವೃತ್ತಿಯಲ್ಲಿ ಶ್ರೀವಲ್ಲಿ ಹಾಡು: ಉಷಾ ಉತ್ತಪ್ ಕಂಠಕ್ಕೆ ಅಭಿಮಾನಿಗಳು ಫಿದಾ