Viral Video : ಆಡುಆನೆಯ ನುಂಗಿ, ಗೋಡೆ ಸುಣ್ಣಾವ ನುಂಗಿ, ಆಡಲು ಬಂದಾ ಪಾತರದವಳಾ ಮದ್ದಳೆ ನುಂಗಿತ್ತಾ ನೋಡವ್ವಾ ತಂಗಿ, ಕೋಡಗನ್ನ ಕೋಳಿ ನುಂಗಿತ್ತಾ… ಶರೀಫರ ಈ ತತ್ವಪದ ನಿಮ್ಮ ನೆನಪಿಗೆ ಬಂದಿರಲು ಸಾಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಡೇರೆಹೂವಿನ ಪುಟ್ಟಪುಟ್ಟ ಎಸಳುಗಳನ್ನೇ ಗೂಡುಗಳಂತೆ ಮಾಡಿಕೊಂಡಿವೆ ಈ ಪುಟಾಣಿ ಕಪ್ಪೆಗಳು. ನೆಟ್ಟಿಗರಂತೂ ಕುತೂಹಲದಿಂದ ಖುಷಿಯಿಂದ ಈ ವಿಡಿಯೋ ನೋಡುತ್ತಲೇ ಇದ್ದಾರೆ. ಒಮ್ಮೆ ನೋಡಿದ ನೀವು ಮತ್ತೆ ನೋಡುವುದು ಗ್ಯಾರಂಟಿ!
ಈ ವಿಡಿಯೋ ಅನ್ನು ಕಳೆದ ತಿಂಗಳು ಪೋಸ್ಟ್ ಮಾಡಲಾಗಿದೆ. ಈತನಕ 8 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 3 ಲಕ್ಷಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಜನರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಎಂಥ ಮುದ್ದಾಗಿದೆ ಈ ವಿಡಿಯೋ. ನನಗಂತೂ ಹುಚ್ಚು ಹಿಡಿಯುತ್ತಿದೆ ಇದನ್ನು ನೋಡುತ್ತಿದ್ದಂತೆ ಎಂದಿದ್ದಾರೆ ಒಬ್ಬರು. ಆಹಾ ಪ್ರಕೃತಿಯ ಈ ಅದ್ಭುತ ಎಂಥ ಚೆಂದ ಎಂದಿದ್ದಾರೆ ಇನ್ನೂ ಒಬ್ಬರು. ಓಹ್ ಎರಡು ದಿನಗಳ ಹಿಂದೆ ಈ ವಿಡಿಯೋ ನೋಡಿದ್ದೆ. ಈಗ ಐದನೇ ಬಾರಿ ಇದನ್ನು ಮತ್ತೆ ನೋಡುತ್ತಿದ್ದೇನೆ ಎಂದಿದ್ದಾರೆ ಮಗದೊಬ್ಬರು.
ಎಲ್ಲವೂ ಆನ್ಲೈನ್ಮಯವಾಗಿರುವ ಜಗತ್ತಿನಲ್ಲಿ ಇಂಥ ವಿಡಿಯೋಗಳು ಖುಷಿ ಕೊಡುತ್ತವೆ ನಿಜ. ಆದರೆ ಇದನ್ನು ನೋಡಲು ಮತ್ತೂ ನಾವು ಮೊರೆಹೋಗುವುದು ಆನ್ಲೈನ್ಅನ್ನೇ! ಎಂಥ ವಿಪರ್ಯಾಸ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:27 pm, Mon, 31 October 22