ಪಾಶ್ಚಿಮಾತ್ಯ ಹಾಡುಗಳು ಹಾಗೂ ಭಾರತೀಯ ಸಿನಿಮಾ ಗೀತೆಗಳ ಮಿಶ್ರಣದ ಮ್ಯಾಶಪ್ ಗೀತೆಗಳು ಕೇಳಲು ಹೊಸತನದ ಅನುಭವವನ್ನು ನೀಡುತ್ತದೆ. ಮ್ಯಾಶಪ್ ಎನ್ನುವುದು ಒಂದು ಹೊಸ ಹಾಡನ್ನು ರಚಿಸಲು ಎರಡು ಅಥವಾ ಅದಕ್ಕಿಂತ ಹೆಚ್ಚು ವಿಭಿನ್ನ ಹಾಡುಗಳ ಅಂಶವನ್ನು ಮಿಶ್ರಣ ಮಾಡುವ ಮೂಲಕ ರಚಿಸಲಾದ ಸಂಗೀತದ ಟ್ರ್ಯಾಕ್ ಆಗಿದೆ. ಈ ಮ್ಯಾಶಪ್ ಗೀತೆಗಳು ಎಂದಿಗೂ ಮಾಸದ ಸಂಗೀತದ ಒಂದು ಟ್ರೆಂಡ್ ಅಂತಾನೇ ಹೇಳಬಹುದು. ಪ್ರಸ್ತುತ ಪೀಪಲ್ (ಐ ವಿಲ್ ಬೀನ್ ಡ್ರಿಂಕಿಗ್ ಮೋರ್ ಆಲ್ಕೋಹಾಲ್) ಮತ್ತು ಹಿಂದಿಯ ನೈನೋವಾ ನೇ ಎಂಬ ಈ ಎರಡು ಹಾಡುಗಳ ಸಂಯೋಜನೆಯ ಮ್ಯಾಶಪ್ ಗೀತೆ ಭಾರಿ ಸದ್ದು ಮಾಡುತ್ತಿದ್ದು, ಮೂಲತಃ ಇದನ್ನು ಸಂಗೀತ ಸಂಯೋಜಕ ಯಶ್ ರಾಜ್ ಮುಖಾಟೆ ಎಂಬವರು ರಚಿಸಿದ್ದಾರೆ. ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಎಲ್ಲಾ ಕಡೆ ಈ ವೈರಲ್ ಮ್ಯಾಶಪ್ ಗೀತೆಯದ್ದೇ ಹವಾ. ಇದೀಗ ಈ ಮ್ಯಾಶಪ್ ಗೀತೆಯನ್ನು ಅಮೇರಿಕಾದ ಅವಳಿ ಸಹೋದರಿಯರಾದ ಕಿರಣ್ ಮತ್ತು ನಿವಿ ಎಂಬುವವರು ಹಾಡಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿಯರ ಸುಮಧುರ ಕಂಠಕ್ಕೆ ನಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.
ಈ ವೀಡಿಯೋವನ್ನು ಕಿರಣ್ -ನಿವಿ (@kiranandnivi) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕಿರಣ್ ಮತ್ತು ನಿವಿ ಹಾಡುವುದನ್ನು ಹಾಗೂ ಸಂಗೀತಗಾರ ಕಮಲಕಿರಣ್ ವಿಂಜಮುರಿ ಅವರು ಪಿಟೀಲು ನುಡಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
&
ಇದನ್ನೂ ಓದಿ: Viral News: ಪತಿಯ ಹೆಸರನ್ನೇ ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಮಹಿಳೆ; ವಿಡಿಯೋ ವೈರಲ್
ವೀಡಿಯೋವನ್ನು ಮೇ 19 ರಂದು ಪೋಸ್ಟ್ ಮಾಡಲಾಗಿದ್ದು, ಈವರೆಗೆ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 212 K ಲೈಕ್ಸ್ಗಳನ್ನು ಹಾಗೂ ಸಾವಿರಾರು ಕಮೆಂಟ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ತುಂಬಾ ಚೆನ್ನಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ಹಾಡು ನಿಜವಾಗಿಯೂ ತುಂಬಾ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಹಾಡನ್ನು ಪದೇ ಪದೇ ಕೇಳಬೇಕೆಂದೆನಿಸುತ್ತದೆ’ ಎಂದು ಕಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: