ಮೆಣಸಿನಕಾಯಿಯಿಲ್ಲದೆ ಅಡುಗೆ ಪೂರ್ಣವಾಗಲು ಸಾಧ್ಯವೇ. ಅದರಲ್ಲೂ ನಮ್ಮ ದೇಶದ ಜನರು ಮಸಾಲೆಯುಕ್ತ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಈ ಕಾರಣಕ್ಕಾಗಿಯೇ ಮೆಣಸಿನಕಾಯಿಯ ಕೃಷಿಯನ್ನು ಇಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಹಲವು ಜಾತಿಗಳ ಮೆಣಸಿನಕಾಯಿಗಳಿವೆ. ಕೆಲವೊಂದು ಮೆಣಸಿನಕಾಯಿ ಖಾರವಾಗಿದ್ದರೆ, ಇನ್ನೂ ಕೆಲವು ಮೆಣಸಿನಕಾಯಿ ಖಾರವಿರುವುದಿಲ್ಲ. ಆದರೆ ವಿಶ್ವದ ಅತೀ ಖಾರವನ್ನು ಹೊಂದಿರುವ ಮೆಣಸಿನಕಾಯಿ ಯಾವುದೆಂದು ನಿಮಗೆ ಗೊತ್ತಾ? ಸಾಮಾನ್ಯವಾಗಿ ನಾವು ಅಡುಗೆಗೆ ಬಳಸುವ ಮೆಣಸುಗಳನ್ನೇ ಹೆಚ್ಚಿನವರು ಅತೀ ಖಾರದ ಮೆಣಸು ಎಂದು ಭಾವಿಸುತ್ತಾರೆ. ಆದರೆ ಇದಕ್ಕಿಂತ ಸಾವಿರಪಟ್ಟು ಖಾರದ ಮೆಣಸಿನಕಾಯಿಯೊಂದಿದೆ. ಇದೀಗ ಈ ಮೆಣಸು ವಿಶ್ವದ ಅತೀ ಖಾರಯುಕ್ತ ಮೆಣಸು ಎಂಬ ವಿಶ್ವ ದಾಖಲೆಯನ್ನು ಮಾಡಿದೆ. ಅಷ್ಟಕ್ಕೂ ಈ ಮೆಣಸಿನಕಾಯಿ ಯಾವುದು ಅದನ್ನು ಎಲ್ಲಿ ಬೆಳೆಯಲಾಗುತ್ತದೆ ಎಂಬುದನ್ನು ನೋಡೋಣ.
ಕೆರೊಲಿನಾ ರೀಪರ್ ಅತೀ ಹೆಚ್ಚು ಖಾರವನ್ನು ಹೊಂದಿರುವ ಮೆಣಸು ಎಂದು ಹಲವರು ಭಾವಿಸಿದ್ದಾರೆ, ಆದರೆ ಈ ದಾಖಲೆಯನ್ನು ಪೆಪ್ಪರ್ ಎಕ್ಸ್ ಎಂಬ ಮೆಣಸು ತನ್ನದಾಗಿಸಿಕೊಂಡಿದೆ. ಹೌದು ಈ ಹಿಂದೆ 2013 ರಲ್ಲಿ ಕೆರೊಲಿನಾ ರೀಪರ್ ಪೆಪ್ಪರ್ ವಿಶ್ವದ ಅತೀ ಖಾರದ ಮೆಣಸು ಎಂಬ ವಿಶ್ವ ದಾಖಲೆಯನ್ನು ಮಾಡಿತ್ತು. ಮೆಣಸಿನಕಾಯಿಗಳ ಖಾರದ ಪ್ರಮಾಣವನ್ನು ಸ್ಕೋವಿಲ್ಲೆ ಹೀಟ್ ಯೂನಿಟ್ಸ್ (SHU) ಯಂತ್ರದಲ್ಲಿ ಅಳೆಯಲಾಗುತ್ತದೆ. ಅದರಲ್ಲಿ ರೀಪರ್ ಪೆಪ್ಪರ್ ಸುಮಾರು 1.64 ಮಿಲಿಯನ್ SHU ಪ್ರಮಾಣದ ಖಾರವನ್ನು ಹೊಂದಿದೆ. ಆದರೆ ಪೆಪ್ಪರ್ ಎಕ್ಸ್ 2.69 ಮಿಲಿಯನ್ SHU ಪ್ರಮಾಣದ ಖಾರವನ್ನು ಹೊಂದಿದ್ದು, ಅತೀ ಖಾರದ ಮೆಣಸು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಇದೀಗ ತನ್ನದಾಗಿಸಿದೆ.
ಇದನ್ನೂ ಓದಿ: ಅಪಘಾತದಲ್ಲಿ ವ್ಯಕ್ತಿ ಸಾವು, ತನಿಖೆ ವೇಳೆ ಬಯಲಾಯ್ತು ಕೊಲೆ ವಿಚಾರ
ಆಕಾರದಲ್ಲಿ ಕ್ಯಾಪ್ಸಿಕಂನಂತೆ ಕಾಣುವ ಸಣ್ಣ ಗಾತ್ರದ ಪೆಪ್ಪರ್ ಎಕ್ಸ್ ಮೆಣಸನ್ನು ಬೆಳೆದವರು ಅಮೇರಿಕಾದ ಪುಕರ್ಬಟ್ ಪೆಪ್ಪರ್ ಕಂಪೆನಿಯ ಮಾಲೀಕ ಹಾಗೂ ಸಂಸ್ಥಾಪಕ ಎಡ್ ಕರಿ ಎಂಬವರು. ಈ ಮೊದಲು ವಿಶ್ವದಾಖಲೆಯನ್ನು ಮಾಡಿದ ಕೆರೊಲಿನಾ ರೀಪರ್ ಮೆಣಸನ್ನು ಕೂಡಾ ಇವರೇ ಬೆಳೆದಿದ್ದು, ಇದೀಗ ತಮ್ಮ ದಾಖಲೆನ್ನು ತಾವೇ ಮುರಿದಿದ್ದಾರೆ. ಈ ಪೆಪ್ಪರ್ ಎಕ್ಸ್ ತಳಿಯನ್ನು ಬೆಳೆಯಲು ಎಡ್ ಕರಿ ಅವರು ಕಳೆದ ಹಲವು ವರ್ಷಗಳಿಂದ ಮೆಣಸಿನಕಾಯಿಗಳ ಕ್ರಾಸ್ ಬ್ರೀಡಿಂಗ್ ಮಾಡಿ, ಅಂತಿಮವಾಗಿ ಈ ಒಂದು ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ