
ಭಾರತ ಕೃಷಿ (agriculture ) ಪ್ರಧಾನವಾದ ದೇಶ. ಇತ್ತೀಚೆಗಿನ ದಿನಗಳಲ್ಲಿ ಸ್ವ ಆಸಕ್ತಿಯಿಂದ ಕೃಷಿಯತ್ತ ಮುಖ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಈಗಾಗಲೇ ಈ ಕೃಷಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ರೈತರು ಕೃಷಿ ಸಂಬಂಧಿ ಕೆಲಸಗಳಿಗೆ ಆಧುನಿಕ ಯಂತ್ರ (mechine) ಗಳನ್ನೆ ಅವಲಂಬಿಸಿಕೊಂಡಿದ್ದಾರೆ. ಈ ಹಿಂದೆಯೆಲ್ಲಾ ಉಳುಮೆ ಮಾಡಲು ಎತ್ತು , ಕೋಣಗಳನ್ನು ಬಳಸಲಾಗುತ್ತಿತ್ತು. ಆದರೆ ಇದೀಗ ಸಾಂಪ್ರದಾಯಿಕ ವಿಧಾನದಿಂದ ಉಳುಮೆ ಮಾಡುವ ಬದಲು ಟ್ಯಾಕ್ಟರ್ (tractor)ಗಳನ್ನೇ ಹೆಚ್ಚಿನವರು ನೆಚ್ಚಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಇನ್ನು ಅಪ್ಡೇಟ್ ಆಗಿದ್ದು ಆಟೋ (auto) ಬಳಸಿ ಗದ್ದೆಯನ್ನು ಉಳುಮೆ ಮಾಡಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.
sajid hussain 786r ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಗದ್ದೆ ಉಳುಮೆ ಮಾಡಲು ಆಟೋವನ್ನು ಬಳಸಿಕೊಂಡಿರುವುದನ್ನು ನೋಡಬಹುದು. ಇಲ್ಲಿ ಆಟೋದ ಹಿಂಭಾಗಕ್ಕೆ ಹಲಗೆಯನ್ನು ಕಟ್ಟಲಾಗಿದ್ದು, ಈ ವ್ಯಕ್ತಿಯೊಬ್ಬನು ಆಟೋವನ್ನು ಓಡಿಸುತ್ತಿದ್ದಾನೆ. ಹಲಗೆಯನ್ನು ಕಟ್ಟಲಾಗಿರುವ ಕಾರಣ ಗದ್ದೆಯ ಮಣ್ಣು ಸಮತಟ್ಟಾಗುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ : Viral : ರೀಲ್ಸ್ ಹುಚ್ಚಿಗೆ ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಮಹಿಳೆ, ವಿಡಿಯೋ ವೈರಲ್
ಈ ವಿಡಿಯೋ ಈಗಾಗಲೇ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಒಬ್ಬ ಬಳಕೆದಾರರು, ‘ಮನುಷ್ಯನು ಬುದ್ಧಿವಂತ ಎನ್ನುವುದೇನೋ ನಿಜ. ಆದರೆ ಇಷ್ಟು ಬುದ್ಧಿವಂತನೆಂದು ತಿಳಿದಿರಲಿಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಗದ್ದೆ ಉಳುಮೆ ಮಾಡಲು ಹೊಸ ಟೆಕ್ನಾಲಜಿ ಬಂತು’ ಎಂದಿದ್ದಾರೆ. ಮತ್ತೊಬ್ಬರು, ‘ಇದು ರೈತನ ಕೆಲಸವನ್ನು ಮತ್ತಷ್ಟು ವೇಗದಾಯಕವಾಗಿ ಮಾಡುತ್ತದೆ. ಈ ರೀತಿ ಐಡಿಯಾ ಬುದ್ಧಿವಂತರಿಗೆ ಮಾತ್ರ ಬರಲು ಸಾಧ್ಯ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ