Personality Test: ನಿಮ್ಮ ಮುಖದ ಆಕಾರ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಜೀವನದಲ್ಲಿ ನೀವು ಎದುರಿಸಿದ ಸಮಸ್ಯೆಗಳನ್ನ ಸಹಿತ ನಿಮ್ಮ ಗುಣಗಳನ್ನು ಮುಖದ ಆಕೃತಿ ನೋಡಿ ತಿಳಿದುಕೊಳ್ಳಬಹುದು ಎಂದು ಜೀನ್ ಹಾನರ್ ಹೆಸರಿನ ಪ್ರಖ್ಯಾತ ಫೇಸ್ ರೀಡಿಂಗ್ ಎಕ್ಸಪರ್ಟ್ ಹೇಳಿದ್ದಾರೆ. ಹಾಗಾದ್ರೆ ನಿಮ್ಮ ಮುಖ ಯಾವ ಆಕಾರದಲ್ಲಿದೆ? ನಿಮ್ಮ ವ್ಯಕ್ತಿತ್ವ ಮತ್ತು ಗುಣಗಳೇನು ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳಿ.

Personality Test: ನಿಮ್ಮ ಮುಖದ ಆಕಾರ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಮುಖದ ಆಕಾರ

Updated on: Jul 19, 2024 | 2:03 PM

ಮುಖ ಚಹರೆ, ಹಾವ-ಭಾವಗಳನ್ನ ನೋಡಿ ನಿಮ್ಮ ಆಲೋಚನೆಗಳನ್ನು ಹೇಳೋ ಫೇಸ್ ರೀರ‍್ಗಳು ಪ್ರಪಂಚದ ಮೂಲೆ ಮೂಲೆಯಲ್ಲೂ ಇದ್ದಾರೆ. ಜೀವನದಲ್ಲಿ ನೀವು ಎದುರಿಸಿದ ಸಮಸ್ಯೆಗಳನ್ನ ಸಹಿತ ನಿಮ್ಮ ಗುಣಗಳನ್ನು ಮುಖದ ಆಕೃತಿ ನೋಡಿ ತಿಳಿದುಕೊಳ್ಳಬಹುದು ಎಂದು ಜೀನ್ ಹಾನರ್ ಹೆಸರಿನ ಪ್ರಖ್ಯಾತ ಫೇಸ್ ರೀಡಿಂಗ್ ಎಕ್ಸಪರ್ಟ್ ಹೇಳಿದ್ದಾರೆ. ಈ ಮೇಲೆ ನೀಡಿರುವ ಚಿತ್ರದಲ್ಲಿ ನಿಮ್ಮ ಮುಖ ಯಾವ ರೀತಿ ಆಕಾರವನ್ನು ಹೊಂದಿದೆ ಎಂಬ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ.

ಅಂಡಾಕಾರ:

ನಿಮ್ಮ ಮುಖ ಎನಾದ್ರೂ ಮೊಟ್ಟೆಯ ಆಕಾರದಲ್ಲಿದ್ದರೆ ನೀವು ದಯಾಮಯಿಗಳು. ನೀವು ಜನರನ್ನು ಕರುಣೆಯಿಂದ ಕಾಣುತ್ತೀರಿ ಮತ್ತು ವ್ಯಕ್ತಿಗಳಿಗೆ ಪ್ರಾಮುಖ್ಯತೆ ನೀಡುತ್ತೀರಿ ಎಂಬ ಅರ್ಥವನ್ನು ನೀಡುತ್ತದೆ. ಇದಲ್ಲದೇ ಇತರರು ಹೇಳಿದ ಮಾತುಗಳನ್ನ ಕೇಳುತ್ತಾ ಅವರನ್ನು ಸುಲಭವಾಗಿ ನಂಬುವ ಸ್ವಭಾವ ನಿಮ್ಮದು. ಈ ಅಮಾಯಕತ್ವದ ಕಾರಣಕ್ಕಾಗಿಯೇ ಅತ್ಯಂತ ಸುಲಭವಾಗಿ ಮೋಸ ಹೋಗ್ತೀರಿ ಎಂದು ಹೇಳಲಾಗಿದೆ.

ಚೌಕಾಕಾರ:

ಚೌಕಾಕಾರದ ಮುಖ ಉಳ್ಳವರು ಅತ್ಯಂತ ಕ್ರಿಯೇಟಿವಾಗಿ ಆಲೋಚಿಸುತ್ತಾರೆ. ಸಾಮಾಜಿಕವಾಗಿ ಒಳಗೊಳ್ಳುವ ಮತ್ತು ಸದೃಢವಾದ ಮನಸ್ಥಿತಿ ಹೊಂದಿರುತ್ತಾರೆ. ನಾಯಕತ್ವದ ಗುಣಗಳು ಅತ್ಯಂತ ಅಧಿಕವಾಗಿದ್ದು ಪ್ರತೀ ವಿಷಯವನ್ನು ಆಳವಾಗಿ ಯೋಚಿಸುವ ಸಾಮರ್ಥ್ಯ ನಿಮ್ಮದಾಗಿರಿತ್ತದೆ ಎಂದು ಹೇಳಲಾಗಿದೆ.

ಕೋಲಾಕಾರ:

ಉದ್ದನೆಯ, ಕೋಲಾಕಾರದ ಮುಖ ಉಳ್ಳವರು ಅತ್ಯಂತ ಬುದ್ಧಿವಂತರು. ಇವರ ಐಕ್ಯೂ ಮಟ್ಟ ಇತರರಿಗಿಂತ ಅಧಿಕವಾಗಿರುತ್ತದೆ. ಎಂತಹವರನ್ನಾದರೂ ಬಹು ಬೇಗನೆ ಆಕರ್ಷಿಸುವ ಶಕ್ತಿ ನಿಮಗಿರುತ್ತದೆ.

ದುಂಡಾಕಾರ:

ದುಂಡಾದ ಮುಖ ಉಳ್ಳವರು ಅತ್ಯಂತ ಚುರುಕಾಗಿರುತ್ತಾರೆ. ಸ್ಪರ್ಧಾತ್ಮಕ ಮನೋಭಾವವುಳ್ಳ ನಿಮಗೆ ಬುದ್ಧಿಮಟ್ಟ ಅಧಿಕವಾಗಿರುತ್ತದೆ. ಎಷ್ಟೇ ಒತ್ತಡಗಳಿದ್ದರೂ ಸಮಾಧಾನದಿಂದ ಕೆಲಸ ನಿರ್ವಹಿಸುವ ಚಾಕಚಕ್ಯತೆ ನಿಮ್ಮದಾಗಿರುತ್ತದೆ.

ಲೇಖನ: ದರ್ಶಿನಿ ತಿಪ್ಪಾರೆಡ್ಡಿ

ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ

ಎಸ್. ಡಿ. ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ – ಉಜಿರೆ

Published On - 1:56 pm, Fri, 19 July 24

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us