ಕಂಠ ಮಟ್ಟ ಕುಡಿದು ತಪ್ಪು ಹೆಜ್ಜೆ ಹಾಕುವ, ಬಾಯಿಗೆ ಬಂದಂತೆ ಮಾತಾಡುವ, ಹೊರಳಾಡುವ ನಾನಾ ಭಂಗಿಗಳಜನರನ್ನು ನೀವು ಆಗಾಗ್ಗೆ ನೋಡಿರುತ್ತೀರಿ. ಆದರೆ ನಾಯಿಯೊಂದು (Pet Dog) ಮದ್ಯ ಸೇವಿಸಿ ನಶೆಯಲ್ಲಿ (vodka Alcohol) ನಾನಾ ರೀತಿಯ ಕಸರತ್ತು ನಡೆಸಿದ ಪ್ರಸಂಗ ಕೇಳಿದ್ದೀರಾ, ನೋಡಿದ್ದೀರಾ? ಸದ್ಯ ಅಂತಹ ನಾಯಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದನ್ನು ನೋಡಿದ ಜನರು ತುಂಬಾ ಆಶ್ಚರ್ಯ ಪಡುತ್ತಿದ್ದಾರೆ. ವೈರಲ್ ಆಗಿರುವ ವೀಡಿಯೊ ಕ್ಲಿಪ್‌ನಲ್ಲಿ, ನಾಯಿಯು ಮನುಷ್ಯರಂತೆ ಮದ್ಯದ ಅಮಲಿನಲ್ಲಿ ತಂದನಾನಾ ಮಾಡಿರುವ ನಾಯಿಪಾಡು ಪ್ರಸಂಗ ಕಂಡುಬಂದಿದೆ.
ಈ ವಿಡಿಯೋ ಅಮೆರಿಕದ ನ್ಯೂಜೆರ್ಸಿಯದ್ದಾಗಿದೆ (New jersey, USA). ಹೋಮ್ ಹೋಸ್ಟ್ ಮೇರಿ ಅವರು ಕೆಲಸದ ಮೇಲೆ ಮನೆಯಿಂದ ಹೊರಗೆ ಹೋದಾಗ ಅವರ ಸಾಕು ನಾಯಿ ಜಾಕ್, ಸಂಪೂರ್ಣ ವೋಡ್ಕಾ ಬಾಟಲಿಯನ್ನು ಕುಡಿದುಬಿಟ್ಟಿದೆ. ಇದಾದ ಬಳಿಕ ನಾಯಿಯ ಸ್ಥಿತಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಬಹುದು. ಕೊನೆಗೆ ಜಾಕ್‌ನ ಸ್ಥಿತಿ ಹದಗೆಟ್ಟಿದ್ದರಿಂದ ಅದನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಮೇರಿ ಹೇಳಿದ್ದಾರೆ.
ಮೇರಿ ಮನೆಗೆ ಹಿಂದಿರುಗಿದ ತಕ್ಷಣ, ಜ್ಯಾಕ್ ಮದ್ಯ ಕುಡಿದಂತೆ ನನಗೆ ಭಾಸವಾಯಿತು. ಅದೇ ಸಮಯದಲ್ಲಿ ಕೌಂಟರ್ ಮೇಲೆ ವೋಡ್ಕಾ ಬಾಟಲಿ ಖಾಲಿಯಾಗಿತ್ತು. ಆಗ ಅಲ್ಲಿಯೇ ಖಾಲಿ ಬಾಟಲಿ ನೆಲದ ಮೇಲೆ ಉರುಳಿ ಬಿದ್ದಿರುವುದು ಕಂಡಿತು. ಜೊತೆಗೆ ನಾಯಿ ಉರುಳಾಡುತ್ತಿರುವುದು, ನಾನಾ ರೀತಿಯ ಕಸರತ್ತು ನಡೆಸುತ್ತಿರುವುದು ಕೊನೆಗೆ ಅದರ ಪರಿಸ್ಥಿತಿ ವಿಷಮಗೊಂಡಾಗ ಅದನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೆಲ್ಲಾ ವೀಡಿಯೊದಲ್ಲಿ ಕಂಡುಬರುತ್ತದೆ.
Coming home to a drunk dog would be hella funny 😂😂😂 pic.twitter.com/IZn6PfaBb7
— Bosco Prime! 👑 (@iwakangu) November 19, 2023
ಕುಡಿದ ನಂತರ ಜಾಕ್‌ನ ಸ್ಥಿತಿಯನ್ನು ನೋಡಿ, ಮೇರಿ ಮೊದಲು ನಗಾಡಲು ಪ್ರಾರಂಭಿಸಿದರು. ಆದರೆ ಜಾಕ್ ಅತಿಯಾಗಿ ಕುಡಿದ ನಂತರ ಅದರ ಸ್ಥಿತಿಯ ಬಗ್ಗೆ ಅವರು ತುಂಬಾ ಚಿಂತಿತಳಾದರು. ಕೂಡಲೇ ಸಾಕು ನಾಯಿ ಶುಶ್ರೂಷಣೆ ಕೇಂದ್ರದ ಸಹಾಯವಾಣಿಗೆ ಕರೆ ಮಾಡಿ ಪಶು ವೈದ್ಯರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೇರಿ ಹೇಳಿದಂತೆ, ಜಾಕ್ ರಾತ್ರಿಯಿಡೀ ವೈದ್ಯರ ಆರೈಕೆಯಲ್ಲಿ ಇರಬೇಕಾಯಿತು. ಈಗ ಜಾಕ್‌ನ ಸ್ಥಿತಿ ಸುಧಾರಿಸಿದೆ.
ಇದೇ ವಿಚಾರವಾಗಿ ಮಾತನಾಡಿರುವ ರಾಷ್ಟ್ರೀಯ ಪ್ರಾಣಿ ಕೇಂದ್ರದ ಮುಖ್ಯಸ್ಥರು… ನಾಯಿ ಮದ್ಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ ಹಾಗೂ ದೇಹದ ಉಷ್ಣತೆಯಲ್ಲಿ ಅಪಾಯಕಾರಿ ಕುಸಿತ ಉಂಟಾಗಬಹುದು ಎಂದು ತಿಳಿಸಿರುವುದಾಗಿ ನ್ಯೂಸ್ ವೀಕ್ ಹೇಳಿದೆ. ಅದೇ ಸಮಯದಲ್ಲಿ, ತೀವ್ರವಾಗಿ ಅಮಲೇರಿದ ಪ್ರಾಣಿಗಳು ಉಸಿರಾಟದ ವೈಫಲ್ಯ ಮತ್ತು ಮೂರ್ಛೆಯಿಂದ ಬಳಲುತ್ತವೆ ಎಂದು ಎಚ್ಚರಿಸಿದ್ದಾರೆ.