AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wooden City: ಈ ನಗರವನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದೆ; ಇದರ ವಿಶೇಷತೆ ಏನು ಗೊತ್ತಾ?

ಒಂದಕ್ಕೊಂದು ಪೈಫೋಟಿ ನೀಡುವಂತೆ ಅನೇಕ ಲಕ್ಷಾಂತರ ಗಗನಚುಂಬಿ ಕಟ್ಟಡಗಳು ಸ್ಥಾಪಿತವಾಗುತ್ತಿದೆ. ಈ ಎಲ್ಲಾ ಕಟ್ಟಡಗಳು ಕಾಂಕ್ರೀಟ್ನಿಂದ ಮಾಡಲ್ಪಟ್ಟಿದ್ದರೆ, ಇತ್ತೀಚಿಗೆ ಸಂಪೂರ್ಣವಾಗಿ ಮರದಿಂದ ನಿರ್ಮಾಣಗೊಳ್ಳುತ್ತಿರುವ ಅನೇಕ ಕಟ್ಟಡಗಳನ್ನು ಹೊಂದಿರುವ ಒಂದು ಸುಂದರವಾದ ನಗರದ ಬಗ್ಗೆ ಸುದ್ದಿ ಭಾರೀ ವೈರಲ್​​ ಆಗುತ್ತಿದೆ.

Wooden City: ಈ ನಗರವನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದೆ; ಇದರ ವಿಶೇಷತೆ ಏನು ಗೊತ್ತಾ?
Worlds largest wood city
ಅಕ್ಷತಾ ವರ್ಕಾಡಿ
|

Updated on:Nov 25, 2023 | 12:33 PM

Share

ಆಧುನೀಕರಣಕ್ಕೆ ತಕ್ಕಂತೆ ಜಗತ್ತಿನಲ್ಲಿ ಒಂದಕ್ಕೊಂದು ಪೈಫೋಟಿ ನೀಡುವಂತೆ ಅನೇಕ  ಗಗನಚುಂಬಿ ಕಟ್ಟಡಗಳು ಸ್ಥಾಪಿತವಾಗುತ್ತಿದೆ. ಈ ಎಲ್ಲಾ ಕಟ್ಟಡಗಳು ಕಾಂಕ್ರೀಟ್ನಿಂದ ಮಾಡಲ್ಪಟ್ಟಿದ್ದರೆ, ಇತ್ತೀಚಿಗೆ ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾದ ಅನೇಕ ಕಟ್ಟಡಗಳನ್ನು ಹೊಂದಿರುವ ಒಂದು ಸುಂದರವಾದ ನಗರದ ಬಗ್ಗೆ ಸುದ್ದಿ ಭಾರೀ ವೈರಲ್​​ ಆಗುತ್ತಿದೆ. ಇಲ್ಲಿಯವರೆಗೆ ನೀವು ಮರದಿಂದ ಮಾಡಿದ ಅನೇಕ ವಸ್ತುಗಳನ್ನು ನೋಡಿರುತ್ತೀರಿ. ಆದರೆ ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ನಲ್ಲಿ ವಿಶ್ವದ ಮೊದಲ ಮರದ ನಗರ ನಿರ್ಮಾಣವಾಗುತ್ತಿರುವುದು ನಿಮಗೆ ಗೊತ್ತೇ? ಡ್ಯಾನಿಶ್ ಸ್ಟುಡಿಯೋ ಹೆನ್ನಿಂಗ್ ಲಾರ್ಸೆನ್ ಮತ್ತು ಸ್ವೀಡಿಷ್ ವೈಟ್ ಆರ್ಕಿಟೆಕ್ಟರ್ ಈ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಹೆನ್ನಿಂಗ್ ಲಾರ್ಸೆನ್ ಇದು ವಿಶ್ವದ ಅತಿದೊಡ್ಡ ಮರದ ನಗರವಾಗಲಿದೆ ಎಂದು ಹೇಳಿಕೊಂಡಿದೆ.

ಈ ಐಡಿಯಾ ಹೇಗೆ ಬಂತು?

ಸಂಪೂರ್ಣವಾಗಿ ಮರದಿಂದ ಕಟ್ಟಿದ ಕಾಲೇಜೊಂದರ ನಿರ್ಮಾಣದ ನಂತರ ಸ್ವೀಡನ್​​ನ ವಾಸ್ತುಶಿಲ್ಪಿಗಳಿಗೆ ಒಂದು ಆಲೋಚನೆ ಬಂದಿತ್ತು. ಸಂಪೂರ್ಣವಾಗಿ ಮರದಿಂದ ಕಾಲೇಜು ಕಟ್ಟಬಹುದಾದರೆ ಇಡೀ ನಗರ ಕಟ್ಟಲು ಏಕೆ ಸಾಧ್ಯವಿಲ್ಲವೆಂದು. ಇದರ ನಂತರವೇ ವಾಸ್ತುಶಿಲ್ಪಿ ಈ ಮರದ ನಗರವನ್ನು ನಿರ್ಮಿಸಲು ನಿರ್ಧರಿಸಿದರು. ಸ್ಟಾಕ್‌ಹೋಮ್‌ನ ಆಗ್ನೇಯ ಭಾಗದಲ್ಲಿ ನಿರ್ಮಾಣವಾಗಲಿರುವ ಈ ನಗರವು 250,000 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರಗೊಳ್ಳಲಿದೆ ಎಂದು ಡೆವಲಪರ್ ಆಟ್ರಿಯಮ್ ಲುಂಗ್‌ಬರ್ಗ್ ಹೇಳಿದ್ದಾರೆ. ಇದರಲ್ಲಿ 7,000 ಕಚೇರಿಗಳಿದ್ದು, ಜನರು ವಾಸಿಸಲು 2000 ಮನೆಗಳನ್ನು ನಿರ್ಮಿಸಲಾಗುವುದು.

ಇದನ್ನೂ ಓದಿ: ಪುಟ್ಟ ಬಾಲಕಿಯರಿಬ್ಬರ ಪ್ರಾಣ ತೆಗೆದ ಕಣ್ಣಾಮುಚ್ಚಾಲೆ ಆಟ ; ಏನಿದು ಘಟನೆ?

ಬಿಲ್ಡರ್ ಪ್ರಕಾರ, ಈ ಸ್ಥಳದಲ್ಲಿ ಈಗಾಗಲೇ 400 ಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ತಂತ್ರಜ್ಞಾನ ಬೆಳವಣೆಗೆ ಆದ ಮೇಲೂ ಕೂಡ ಮರದಿಂದ ನಗರವನ್ನು ಏಕೆ ನಿರ್ಮಿಸಬೇಕು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಉಕ್ಕಿಗಿಂತ ಮರವು ನಿಧಾನವಾಗಿ ಉರಿಯುತ್ತದೆ ಮತ್ತು ಮರವನ್ನು ಬೆಂಕಿಯಿಂದ ನಂದಿಸಲು ಸುಲಭ.ಆದ್ದರಿಂದ ಇದು ಹೆಚ್ಚು ಸುರಕ್ಷಿತವಾಗಿದೆ ಎಂದು ಎಂಜಿನಿಯರ್‌ಗಳು ಹೇಳುತ್ತಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:29 pm, Sat, 25 November 23