Skyscraper Day 2022: ವಿಶ್ವ ಗಗನಚುಂಬಿ ಕಟ್ಟಡಗಳ ದಿನ: ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಏನು ಗೊತ್ತಾ?
ವಿಶ್ವ ಗಗನಚುಂಬಿ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 3 ರಂದು ಲೂಯಿಸ್ ಎಚ್. ಸುಲ್ಲಿವಾನ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ.
ಒಂದು ಕಟ್ಟಡ (building) ದಲ್ಲಿ ನಾಲ್ಕು, ಹತ್ತು, ಇಪ್ಪತ್ತಕ್ಕಿಂತ ಜಾಸ್ತಿ ಮಹಡಿಗಳನ್ನು ಹೊಂದಿರುವಂತಹ ಕಟ್ಟಡಗಳನ್ನು ನಾವು ಬಹುಮಹಡಿ ಕಟ್ಟಡಗಳು ಎಂದು ಕರೆಯುತ್ತೆವೆ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದಂತೆ ಇಂಥಹ ಬಹುಮಹಡಿ ಕಟ್ಟಡಗಳ ಅಗತ್ಯ ಜನರಿಗೆ ಹೆಚ್ಚುತ್ತಿದೆ. ಭೂಮಿ ಬೆಲೆ ಗಗನಕ್ಕೇರುತ್ತಿರುವ ಈ ಸಮಯದಲ್ಲಿ ಜನರಿಗೆ ಮನೆ ಕಟ್ಟಲು ಒಂದು ಅಡಿ ಭೂಮಿ ಸಿಗುವುದೂ ಕಷ್ಟವಾಗುತ್ತಿದೆ. ಹಿಗಾಗಿ ಬಹುಮಹಡಿ ಕಟ್ಟಡಗಳು, ಅನೇಕ ಮಹಡಿಗಳ ಅಪಾರ್ಟ್‌ಮೆಂಟ್‌ಗಳು ವರದಾನವಾಗಿವೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಿದ್ದು, ಸಿವಿಲ್ ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು 30, 40 ಮತ್ತು ಅದಕ್ಕಿಂತ ಹೆಚ್ಚಿನ ಮಹಡಿಗಳುಳ್ಳ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇಂಥ ಕಟ್ಟಡಗಳನ್ನು ಗಗನಚುಂಬಿ (Skyscraper) ಕಟ್ಟಡಗಳು ಅಥವಾ ಸ್ಕೈಸ್ಕ್ರೇಪರ್ ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 3ರಂದು ಗಗನಚುಂಬಿ ಕಟ್ಟಡಗಳ ದಿನ ಅಥವಾ ಸ್ಕೈಸ್ಕ್ರೇಪರ್ ಡೇ (Skyscraper Day 2022) ಎಂದು ಎಲ್ಲೆಡೆ ಆಚರಿಸಲಾಗುತ್ತದೆ.
ಸ್ಕೈಸ್ಕ್ರೇಪರ್ ಡೇ ಇತಿಹಾಸ:
ವಿಶ್ವ ಗಗನಚುಂಬಿ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 3 ರಂದು ಲೂಯಿಸ್ ಎಚ್. ಸುಲ್ಲಿವಾನ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ. ಲೂಯಿಸ್ ಎಚ್. ಸುಲ್ಲಿವಾನ್ ಅವರು ವಿಶ್ವಾದ್ಯಂತ ಪ್ರಸಿದ್ಧ ಕಟ್ಟಡಗಳಾದ ಮಿಸೌರಿಯ ವೈನ್‌ರೈಟ್ ಕಟ್ಟಡ, ನ್ಯೂಯಾರ್ಕ್ ನಗರದ ಬೇಯಾರ್ಡ್-ಕಾಂಡಿಕ್ಟ್ ಕಟ್ಟಡ ಮತ್ತು ಚಿಕಾಗೋದಲ್ಲಿನ ಕ್ರೌಸ್ ಮ್ಯೂಸಿಕ್ ಸ್ಟೋರ್‌ಗಳ ತಯಾರಿಕೆಗೆ ಮುಖ್ಯ ವಾಸ್ತುಶಿಲ್ಪಿಯಾಗಿದ್ದವರು. ಮೊದಲ ವಿಶ್ವ ಗಗನಚುಂಬಿ ಕಟ್ಟಡವನ್ನು 1885 ರಲ್ಲಿ ಯುಎಸ್ಎ (USA) ನ ಚಿಕಾಗೋದಲ್ಲಿ ನಿರ್ಮಿಸಲಾಯಿತು. ಇದು 138 ಅಡಿ ಬೃಹತ್ ಕಟ್ಟಡವಾಗಿದ್ದು, ಅದನ್ನು “ಹೋಮ್ ಇನ್ಶೂರೆನ್ಸ್ ಬಿಲ್ಡಿಂಗ್” ಎಂದು ಕರೆಯಲಾಗುತ್ತದೆ.
ಸ್ಕೈಸ್ಕ್ರೇಪರ್ ಡೇ ಮಹತ್ವ:
ಆಧುನಿಕ ಯುಗದಲ್ಲಿ, 150 ಮೀಟರ್ ಎತ್ತರವಿರುವ ಪ್ರತಿಯೊಂದು ಕಟ್ಟಡವನ್ನು ಗಗನಚುಂಬಿ ಕಟ್ಟಡ ಎಂದು ವರ್ಗೀಕರಿಸಲಾಗಿದೆ. ಆದ್ದರಿಂದ, ದೊಡ್ಡ ನಗರಗಳಲ್ಲಿ ವಾಸಿಸುವ ಜನರು ತಮ್ಮ ಸುತ್ತಲೂ ಗಗನಚುಂಬಿ ಕಟ್ಟಡಗಳನ್ನು ನಿಸ್ಸಂದೇಹವಾಗಿ ಕಾಣಬಹುದಾಗಿದೆ. ವೈವಿಧ್ಯಮಯ ಜನಸಂಖ್ಯೆಯೊಂದಿಗೆ ನಾವು ವಾಸಿಸುವ ಕಾರಣದಿಂದಾಗಿ ಈ ದಿನದ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ. ಈ ಕಟ್ಟಡಗಳು ಬಹಳ ಅವಶ್ಯಕವಾಗಿವೆ. ಏಕೆಂದರೆ ಅವುಗಳು ತಮ್ಮೊಳಗೆ ವಿವಿಧ ರೀತಿಯ ಸಮೂಹಗಳಿಗೆ ಅವಕಾಶ ಕಲ್ಪಿಸಿದ್ದು, ಮತ್ತು ಹೆಚ್ಚಿನ ಕಾರ್ಮಿಕರಿಗೆ ಕೆಲಸದ ಅವಕಾಶಗಳನ್ನು ನೀಡಿವೆ.
ವಿಶ್ವ ಗಗನಚುಂಬಿ ಕಟ್ಟಡಗಳ ದಿನವು ಗಗನಚುಂಬಿ ಕಟ್ಟಡಗಳನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ತಮ್ಮ ಎಲ್ಲಾ ಶ್ರಮವನ್ನು ಹಾಕುವ ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳ ಪ್ರಯತ್ನವನ್ನು ನಮಗೆ ನೆನಪಿಸುವುದಾಗಿದೆ. ಆದ್ದರಿಂದ, ಈ ದಿನದಂದು, ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲು ಸಲಹೆ ನೀಡಲಾಗುತ್ತಿದೆ.
ಥೀಮ್ ಏನು?
ಈ ದಿನದ ಆಚರಣೆಯಲ್ಲಿ ಜನರು ಭಾಗವಹಿಸಲು ಸಾರ್ವಜನಿಕರ ಗಮನವನ್ನು ಸೆಳೆಯಲು ಪ್ರತಿ ವರ್ಷವೂ ವಿಭಿನ್ನ ಥೀಮ್‌ನೊಂದಿಗೆ ಸಂಯೋಜಿಸಲಾಗುತ್ತದೆ. ಆದರೆ, ಈ ವರ್ಷದ ಥೀಮ್ ಇನ್ನೂ ಪ್ರಕಟವಾಗಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.