ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿಯ ಹೊಟ್ಟೆ ಸೀಳಿ ಹೊರ ಬಂದ ಈಲ್ ಮೀನು, ಕ್ಯಾಮೆರಾದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ

ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಅತ್ಯದ್ಭುತ ಕ್ಷಣವನ್ನು ಸೆರೆ ಹಿಡಿಯುತ್ತಾರೆ. ಕ್ಯಾಮೆರಾದಲ್ಲಿ ಸೆರೆ ಹಿಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಆಕಾಶದಲ್ಲಿ ಹಾರುವ ಹೆರಾನ್ ಹಕ್ಕಿಯ ಹೊಟ್ಟೆಯನ್ನು ಸೀಳಿ ಈಲ್ ಮೀನು ಹೊರ ಬಂದಿದೆ. ಈ ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿಯ ಹೊಟ್ಟೆ ಸೀಳಿ ಹೊರ ಬಂದ ಈಲ್ ಮೀನು, ಕ್ಯಾಮೆರಾದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ
ವೈರಲ್​​ ಫೋಟೋ
Edited By:

Updated on: Apr 17, 2025 | 3:33 PM

ಈ ಸೃಷ್ಟಿಯ ನಿಯಮವನ್ನು ಯಾರು ಕೂಡ ಮೀರಲಾಗದು, ಪ್ರತಿಯೊಂದು ಜೀವಿಯೂ ತನ್ನ ಹೊಟ್ಟೆ ತುಬಿಸಿಕೊಳ್ಳಲು ಇನ್ನೊಂದು ಜೀವಿಯನ್ನು ಅವಲಂಬಿಸಲೇ ಬೇಕು. ಹೀಗಾಗಿ ಪಕ್ಷಿ (birds) ಗಳು ಸಹಜವಾಗಿ ಹುಳ ಹುಪ್ಪಟೆ, ಕೀಟ ಸೇರಿದಂತೆ ಮೀನುಗಳನ್ನು ಬೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ಪ್ರಾಣಿ ಪಕ್ಷಿಗಳು ಬೇಟೆಯಾಡುವ ಅಪರೂಪದ ಕ್ಷಣದ ಫೋಟೋ (photo) ಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಹೆರಾನ್ ಹಕ್ಕಿ (heron bird ) ಯೊಂದು ಈಲ್ ಮೀನ (eel fish) ನ್ನು ತಿಂದು ಆಕಾಶಕ್ಕೆ ಹಾರಿದ್ದು, ಆದರೆ ಈ ಮೀನು ಹಕ್ಕಿಯ ಹೊಟ್ಟೆಯನ್ನು ಸೀಳಿ ಹೊರ ಬಂದಿರುವ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಬಳಕೆದಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Nature is Amazing ಹೆಸರಿನ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋದೊಂದಿಗೆ ಹೆರಾನ್ ಹಕ್ಕಿಯೊಂದು ಆಕಾಶದಲ್ಲಿ ಹಾರುತ್ತಿರವಾಗಲೇ ಈಲ್ ಮೀನೊಂದು ಅದರ ಹೊಟ್ಟೆ ಸೀಳಿ ಹೊರ ಬಂದ ಅದ್ಭುತ ಕ್ಷಣವನ್ನು ಛಾಯಾಗ್ರಾಹಕರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಹೌದು, ಈ ಫೋಟೋದಲ್ಲಿ ಹಕ್ಕಿ ತನ್ನ ಎರಡು ಕಾಲುಗಳನ್ನು ಹಿಂದಕ್ಕೆ ಎತ್ತಿ ಆಕಾಶದಲ್ಲಿ ಹಾರುತ್ತಿದೆ. ಈ ವೇಳೆಯಲ್ಲಿ ಅದರ ಹೊಟ್ಟೆಯನ್ನು ಸೀಳಿ ಈಲ್ ಮೀನು ಹೊರಬರುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ : ಟಾಯ್ಲೆಟ್ ಪೇಪರ್ ಮೇಲೆ ರಾಜೀನಾಮೆ ಪತ್ರ ಬರೆದು ಉದ್ಯೋಗ ತೊರೆದ ಮಹಿಳೆ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ವೊಂದು 35.8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಅದ್ಭುತ ಕ್ಷಣ ನೋಡಿ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಈ ಫೋಟೋವನ್ನು ನೋಡಿದ ಮೇಲೂ ನಂಬಲು ಅಸಾಧ್ಯವೆನಿಸುತ್ತಿದೆ. ಹಕ್ಕಿ ಹೊಟ್ಟೆ ಸೇರಿದ್ದರೂ ಮೀನಿಗೆ ಬದುಕಬೇಕೆಂಬ ಆಸೆ ಎಷ್ಟಿದೆ ಎಂದು ಇದು ತೋರಿಸುತ್ತಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ನಂಬಲು ಆಸಾಧ್ಯವೆನಿಸಿದರೂ ಕೆಲವೊಂದನ್ನು ನಂಬಲೇಬೇಕಾಗುತ್ತದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ಈ ಅದ್ಭುತ ದೃಶ್ಯ ಸೆರೆ ಹಿಡಿದ ಕ್ಯಾಮೆರಾ ಮ್ಯಾನ್ ಗೆ ನನ್ನದೊಂದು ಸೆಲ್ಯೂಟ್ ‘ ಎಂದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ