ಅತ್ತೆ ಜತೆಗೆ ಮಲಗಿದ್ದ ಅಳಿಯ, ಮಗಳ ಗಂಡನಿಂದ ಮಗು ಪಡೆದ ತಾಯಿ
ಸಂಬಂಧಗಳು ಆರೋಗ್ಯಕರವಾಗಿರಬೇಕು. ಅದು ಅಮ್ಮ - ಮಗ, ಅತ್ತೆ - ಅಳಿಯ, ಸೊಸೆ-ಮಾವ ಹೀಗೆ ಇದೆಲ್ಲ ಒಂದು ಅದ್ಭುತ ಸಂಬಂಧಗಳು ಆಗಿರುತ್ತದೆ. ಈ ಸಂಬಂಧಕ್ಕೆ ಅಕ್ರಮ ಎಂಬ ಸಂಬಂಧ ಸೇರಿಕೊಂಡರೆ, ಆ ಸಂಸಾರ ನಾಶ ಖಂಡಿತ. ಇಲ್ಲೊಂದು ಇಂತಹದೇ ಘಟನೆ ನಡೆದಿದೆ. ಮಗಳ ಗಂಡನ ಜತೆಗೆ ತಾಯಿ ಸಂಬಂಧ ಹೊಂದಿದ್ದು, ಮಗಳಿಗೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಇದೀಗ ಈ ವಿಚಾರದ ಬಗ್ಗೆ ಮಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ತಾಯಿ ಮಗಳ ಗಂಡ ಜತೆಗೆ ಹಾಸಿಗೆ ಹಂಚಿಕೊಂಡಿದ್ದು, ಇದರ ಜತೆಗೆ ಇನ್ನೊಂದು ಶಾಕಿಂಗ್ ವಿಚಾರ ಕೂಡ ಹಂಚಿಕೊಂಡಿದ್ದಾರೆ . ಆ ಬಗ್ಗೆ ಇಲ್ಲಿದೆ ನೋಡಿ.

ಕೆಲವೊಂದು ಸಂಬಂಧಗಳು (relationship) ಎಷ್ಟು ಕ್ರೂರವಾಗಿರುತ್ತದೆ. ನಮ್ಮಲ್ಲಿರುವ ಆಸೆಗಳೇ ನಮ್ಮ ಸಂಬಂಧವನ್ನು ಹಾಳು ಮಾಡುತ್ತದೆ. ಈ ಸಂಬಂಧಗಳ ಮೇಲೆ ಗೌರವವನ್ನು ಮರೆತು ಈಗಿನ ಜನ ಬದುಕುತ್ತಿದ್ದಾರೆ ಎಂದು ಅನ್ನಿಸುತ್ತದೆ. ಇದಕ್ಕೆ ನಮ್ಮ ಸಮಾಜದಲ್ಲಿ ನಡೆಯುವ ಅಸಹ್ಯ ಸಂಬಂಧಗಳ ಪ್ರಕರಣಗಳು, ಹೌದು ಮಾವನ ಜತೆಗೆ ಸೊಸೆಗೆ ಅಕ್ರಮ ಸಂಬಂಧ, (Illicit relationship) ಮಗಳ ಜತೆಗೆ ತಂದೆ ಸಂಬಂಧ, ಅಳಿಯ ಜತೆಗೆ ಅತ್ತೆ ಸಂಬಂಧ, ಹೀಗೆ ಅಕ್ರಮ ಸಂಬಂಧಗಳ ಪದಗಳಿಗೆ ಹುಟ್ಟು ನೀಡುವುದು ಈ ಸಂಬಂಧಗಳಿರುಬಹುದು. ತನ್ನನ್ನು ನಂಬಿದವರಿಗೆ ಮೋಸ ಮಾಡಲು ಹೇಗೆ ಸಾಧ್ಯ ಎಂಬ ನೆನಪು ಕೂಡ ಈ ಸಂಬಂಧಗಳನ್ನು ಬೆಳೆಸುವಾಗ ಬರುವುದಿಲ್ಲವೇ. ಇಂತಹದೇ ಘಟನೆಯೊಂದರ ಬಗ್ಗೆ ಮಹಿಳೆಯೊಬ್ಬಳು redditನಲ್ಲಿ ಹಂಚಿಕೊಂಡಿದ್ದಾಳೆ. ಮಗಳ ಗಂಡನ ಜತೆಗೆ ತಾಯಿ ಇಂತಹ ಕೆಟ್ಟ ಸಂಬಂಧಗಳನ್ನು ಹೊಂದಿರಲು ಸಾಧ್ಯವೇ ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ.
ಆಕೆಯ ಸಂತೋಷದ ಸಂಸಾರಕ್ಕೆ ಒಂದು ದೊಡ್ಡ ಅಘಾತ ಕಾದಿತ್ತು. ಆಕೆಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುತ್ತಾರೆ. ತಾನು ಮದುವೆಯಾದವರು ಕೂಡ ಚಿಕ್ಕವಯಸ್ಸಿನ ವ್ಯಕ್ತಿ, ಅವರಿಬ್ಬರಿಗೂ ಅದು ತಿಳಿಯದ ವಯಸ್ಸು, ಅಂದರೆ ಅಸು-ಪಾಸು ಒಂದು 14 -15 ವರ್ಷವಾಗಿರಬಹುದು. ಆ ಸಮಯದಲ್ಲಿ ಈ ಇಬ್ಬರಿಗೂ ಮದುವೆ ಆಗುತ್ತದೆ. ಮಗಳು 18ನೇ ವಯಸ್ಸಿನಲ್ಲಿ ಗರ್ಭಿಣಿ ಕೂಡ ಆಗುತ್ತಾಳೆ. ಈ ವೇಳೆ ತನ್ನ ತಾಯಿ ಮನೆಗೆ ಹೋಗಬೇಕಿತ್ತು. ಆದರೆ ತಾಯಿ ಮನೆಯವರು ಆಕೆಯ ಆರೈಕೆಯನ್ನು ಅಜ್ಜಿ ಮನೆಯಲ್ಲಿ ಮಾಡಿದ್ರೆ ಒಳ್ಳೆಯದು ಎಂದು ಹೇಳುತ್ತಾರೆ. ಮನೆಯವರ ಒತ್ತಾಯಕ್ಕೆ ಅಜ್ಜಿ ಮನೆಗೆ ಈ ಮಗಳು ಹೋಗುತ್ತಾಳೆ.
ಒಂದು ದಿನ ಮಗಳು ಅಜ್ಜಿ ಮನೆಯಿಂದ ತಾಯಿ ಮನೆಗೆ ದಿಢೀರ್ ಭೇಟಿ ನೀಡುತ್ತಾಳೆ. ಆಗ ಆಕೆಯ ಗಂಡ ತನ್ನ ತಾಯಿ ಜತೆಗೆ ಮಲಗಿರುವುದನ್ನು ಕಂಡು ಒಮ್ಮೆ ಶಾಕ್ ಆಗುತ್ತಾಳೆ. ನನ್ನ ಹೆತ್ತ ತಾಯಿ ತನ್ನ ಗಂಡ ಜತೆಗೆ ಇಂಥಹ ಸಂಬಂಧ ಇಟ್ಟುಕೊಂಡಿದ್ದಾಳಾ? ಎಂದು ಕೋಪಗೊಂಡು ಮನೆಬಿಟ್ಟು ತನ್ನ ಮನೆಗೆ ಬರುತ್ತಾಳೆ. ಆದರೆ ಈಕೆಗೆ ಇನ್ನೊಂದು ಅಘಾತಕಾರಿ ವಿಷಯ ಕಾದಿತ್ತು. ಆಕೆಯ ತಾಯಿ ಮತ್ತು ಅವಳ ಗಂಡ ಬಹಳ ವರ್ಷಗಳಿಂದ ಈ ಸಂಬಂಧವನ್ನು ಹೊಂದಿದ್ದಾರೆ ಎಂದು ತಿಳಿಯುತ್ತದೆ. ಇದಕ್ಕಿಂತಲ್ಲೂ ದೊಡ್ಡ ಶಾಕ್ ಎಂದರೆ, ತನ್ನ ಗಂಡನಿಂದ ಆಕೆಯ ತಾಯಿ ಒಂದು ಮಗುವಿಗೂ ಜನ್ಮ ನೀಡಿದ್ದಾಳೆ ಎಂಬ ಸತ್ಯ ಕೂಡ ತಿಳಿಯುತ್ತದೆ. ತನ್ನ ಗಂಡ ಎರಡು ಕಡೆ ಸಂಸಾರ ಮಾಡುತ್ತಿದ್ದಾನೆ ಎಂದು ತುಂಬಾ ಬೇಜಾರುಗೊಳ್ಳುತ್ತಾಳೆ. 40 ವರ್ಷದ ಮಹಿಳೆಯ ಜತೆಗೆ ಇಂತಹ ಸಂಬಂಧ ಇಟ್ಟುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾಳೆ.
ಇದನ್ನೂ ಓದಿ: ಭಾರತದ ಕೊನೆಯ ರೈಲು ನಿಲ್ದಾಣವಿದು, ಏನಿದರ ವಿಶೇಷತೆ ಗೊತ್ತಾ?
ಈ ಎಲ್ಲ ವಿಚಾರವನ್ನು ತನ್ನ ಮನೆಯವರ ಮುಂದೆ ಹೇಳಬೇಕು ಎಂದು ತನ್ನ ಮಗುವಿನ ನಾಮಕರಣ ದಿನದಂದು ತನ್ನ ತಂದೆಗೆ ಅಮ್ಮ ಮತ್ತು ತನ್ನ ಗಂಡನ ನಡುವಿನ ಸಂಬಂಧದ ವಿಚಾರವನ್ನು ಹೇಳುತ್ತಾಳೆ. ಹಾಗೂ ಕಾರ್ಯಕ್ರಮಕ್ಕೆ ಬಂದಿರುವ ಸಂಬಂಧಿಕರ ಮುಂದೆ ಈ ವಿಚಾರವನ್ನು ತಿಳಿಸುತ್ತಾಳೆ. ನನ್ನ ಗಂಡನಿಂದ ತನ್ನ ತಾಯಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ನಾನು ಆ ಮಕ್ಕಳನ್ನು ಮಲಮಕ್ಕಳು ಎಂದು ಕರೆಯಬೇಕಾ ಅಥವಾ ತನ್ನ ಸಹೋದರರು ಎಂದು ಹೇಳಬೇಕು? ಎಂದು ಪ್ರಶ್ನಿಸುತ್ತಾಳೆ. ಇಡೀ ಕುಟುಂಬವೇ ತಲೆ ತಗ್ಗಿಸುತ್ತದೆ. ಮಗಳ ಜೀವನವನ್ನೇ ಆ ತಾಯಿ ಹಾಳು ಮಾಡಿದ್ದಾಳೆ. ಆಕೆ ತನ್ನ ಗಂಡನಿಂದ ದೂರ ಆಗುತ್ತಾಳೆ. ಮಗಳ ತಂದೆ ತಾಯಿಯನ್ನು ದೂರ ಮಾಡುತ್ತಾಳೆ. ಈ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Thu, 17 April 25