ಕೇಂದ್ರ ಸರ್ಕಾರವು ಕಡುಬಡವರಿಗೆ, ನಿಸ್ಸಹಾಯಕರಿಗೆ ಆರ್ಥಿಕವಾಗಿ ನೆರವಾಗಲು ಅನೇಕ ಸರ್ಕಾರಿ ಯೋಜನೆಗಳನ್ನು ಕಾಲಕಾಲಕ್ಕೆ ಜಾರಿಗೊಳಿಸುತ್ತಿದೆ. ದೇಶ ಜನರಿಗೆ ಆರ್ಥಿಕವಾಗಿ ನ ನೆರವಾಗುವುದು ಇದರ ನಿಜಾರ್ಥ. ವಿವಿಧ ಸ್ಕೀಮ್‌ಗಳನ್ನು ರೂಪಿಸಿ, ಆರ್ಥಿಕ ಸ್ವಾಲಂಬಿಯಾಗಲು, ಹಣ ಸಂಪಾದಿಸುವ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ಅಪರಾಧಗಳನ್ನು ಎಸಗುತ್ತಾ, ಜನರಿಗೆ ಆರ್ಥಿಕ ಸಹಾಯ ಮಾಡಲು ಸಂಬಂಧಿಸಿದಂತೆ ಸರ್ಕಾರದ ನಾನಾ ಯೋಜನೆಗಳ ಹೆಸರಿನಲ್ಲಿ ಅನೇಕ ರೀತಿಯ ಸುಳ್ಳು, ವಂಚನೆಗಳ ಅಪ್ರಚಾರಗಳನ್ನು ಮಾಡುತ್ತಿದ್ದಾರೆ.
ಇದರಿಂದ ಈ ಪ್ರಕರಣದಲ್ಲಿ ಮಹಿಳೆಯರು ತುಂಬಾ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಸರ್ಕಾರದ ‘ನಾರಿ ಶಕ್ತಿ ಯೋಜನಾ’ ಅಡಿಯಲ್ಲಿ, SBI ದೇಶದ ಮಹಿಳೆಯರಿಗೆ ಗ್ಯಾರೆಂಟಿ ಇಲ್ಲದೆ, ಬಡ್ಡಿ ಇಲ್ಲದೆ ರೂ. 25 ಲಕ್ಷ ಸಾಲವನ್ನು ನೀಡುತ್ತಿದೆ ಎಂದು ಸುದ್ದಿ ಇದೀಗ ವೈರಲ್ ಆಗಿದೆ. ವಿವಿಧ ಯೂಟ್ಯೂಬ್ ಚಾನೆಲ್‌ಗಳು ಸಹ ಸರ್ಕಾರಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿವೆ.
ಇದರಲ್ಲಿ ನಿಜವೆಷ್ಟು..? ವೈರಲ್ ಆಗುತ್ತಿರುವ ಇಂತಹ ಸುದ್ದಿಗಳಲ್ಲಿ ಯಾವುದೇ ಸತ್ಯವಿಲ್ಲ. ಎಲ್ಲವೂ ಸುಳ್ಳು ಸುಳ್ಳೆಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟಪಡಿಸಿದೆ. ಈ ಬಗ್ಗೆ ಪಿಐಬಿ ಟ್ವಿಟ್ ಮಾಡಿದೆ. ಇಂತಹ ಕೃತ್ರಿಕ ಸುದ್ದಿಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ನಂಬಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ. ಇಂತಹ ಫೇಕ್ ಸ್ಕೀಮ್‌ಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳೀ, ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳಿ ಎಂದು ಪಿಐಬಿ ಸೂಚಿಸಿದೆ.
ನಿಮ್ಮ ಮೊಬೈಲ್‌ಗೆ ಅಥವಾ, ಈಮೇಲ್ ಗೆ ಬರುವ ಲಿಂಕ್‌ಗಳನ್ನು ಒತ್ತುವ ಮುನ್ನ ಎಚ್ಚರ, ಆ ಲಿಂಕ್ ಅನ್ನು ಓಪನ್ ಮಾಡಬೇಡಿ. ಇಲ್ಲದಿದ್ದರೆ ನಿಮಗೆ ಭ್ರಮನಿರಸ, ಭಾರಿ ಲುಕ್ಸಾನು ಆಗುವ ಅಪಾಯವಿದೆ ಎಂದು ಎಚ್ಚರಿಸಿದೆ. ಇದೇ ರೀತಿಯ ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಜನರ ಜೊತೆ ಪಿಐಬಿ ತನ್ನ ಆತಂಕವನ್ನು ತೋಡಿಕೊಂಡಿದೆ. ಈ ಕುರಿತಾದ PIB ಟ್ವೀಟ್ ಇಲ್ಲಿದೆ:
Some YouTube channels provide details related to various government schemes, which do not exist in actuality.
Beware! Don't fall for content curated by fraudsters with malicious intent.
Follow these simple steps to counter such content. #PIBFacTree pic.twitter.com/VWB0PIf2B8
— PIB Fact Check (@PIBFactCheck) September 2, 2022
Published On - 8:12 pm, Mon, 12 September 22