
ವಿಮಾನವೊಂದು ಟೆಕ್ ಆಫ್ ಆಗದೆ ರೈಲು ಹಳಿಯ ಮೇಲೆ ಬಿದ್ದಿದ್ದು ರೈಲು ಬರುವ ಕೆಲವೇ ಕ್ಷಣಗಳ ಮೊದಲು ಗಾಯಗೊಂಡ ಪೈಲಟ್ ಅನ್ನು ರಕ್ಷಿಸಿದ ಘಟನೆ ಲಾಸ್ ಎಂಜಲೀಸ್ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋ ಬಾಡಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಭಯಾನಕ ಆಪಘಾತದ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಟೇಕ್ ಆಪ್ ಆಗುವಾಗ ತಾಂತ್ರಿಕ ಸಮಸ್ಯೆ ಆದ ಕಾರಣ ವಿಮಾನ ಹಾರದೆ ರೈಲ್ವೆ ಹಳಿಯ ಮೇಲೆ ಬಿದ್ದಿದೆ. ಅದೇ ಸಮಯದಲ್ಲಿ ರೈಲು ಬರುತ್ತಿರುವುದನ್ನು ಕಂಡು ಪೊಲೀಸರು ಪೈಲಟ್ ಅನ್ನು ರಕ್ಷಿಸಿದ್ದಾರೆ. ಪತನವಾದ ವಿಮಾನದಿಂದ ಗಾಯಗೊಂಡ ಪೈಲೆಟ್ಅನ್ನು ಪೊಲೀಸರು ಹೊರಗೆ ಎಳದು ತಂದಿದ್ದಾರೆ. ಈ ವೇಳೆ ಆತ ಗೋ ಗೋ ಎಂದು ಕೂಗಿದ್ದಾರೆ. ಪೈಲೆಟ್ಅನ್ನು ರಕ್ಸಿಸಿದ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ರೈಲ್ವೆ ಹಳಿಯ ಮೇಲೆ ಸಾಯಬೇಕೆಂದು ನಿಂತಿದ್ದ ವ್ಯಕ್ತಿಗೆ ಗುದ್ದದೆ ರೈಲನ್ನು ನಿಲ್ಲಿಸಿ ಶ್ಲಾಘನೆ ಪಡೆದಿದ್ದರು. ಇದೀಗ ಗಾಯಗೊಂಡ ಪೈಲೆಟ್ನ ಪ್ರಾಣ ಉಳಿಸಿದ ಪೊಲೀಸರ ಕರ್ತವ್ಯ ನಿಷ್ಠೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಗಾಯಗೊಂಡ ಪೈಲೆಟ್ ಅನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:
Video: ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಬಿದ್ದು ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಕರಾವಳಿ ಪೊಲೀಸರು