ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭರ್ಜರಿ ಡಾನ್ಸ್; ಅದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಏನು?

ಸಚಿವ ಕಿರಣ್ ರಿಜಿಜು ನೃತ್ಯ ಮಾಡುವ ವಿಡಿಯೋವನ್ನು ಸ್ವತಃ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ಏನಿತ್ತು ನೋಡಿ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭರ್ಜರಿ ಡಾನ್ಸ್; ಅದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಏನು?
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಭರ್ಜರಿ ಡಾನ್ಸ್
Updated By: shruti hegde

Updated on: Sep 30, 2021 | 4:25 PM

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಬುಧವಾರ ಯೋಜನೆಯೊಂದರ ಪ್ರಗತಿ ಪರಿಶೀಲಿಸಲು ಅರುಣಾಚಲ ಪ್ರದೇಶಕ್ಕೆ ತೆರಳಿದ್ದರು. ಹಳ್ಳಿಯ ನಿವಾಸಿಗಳು ನೃತ್ಯ ಮಾಡುತ್ತಾ ಅವರನ್ನು ಬರಮಾಡಿಕೊಂಡಿದ್ದರು. ಆ ವೇಳೆ ಹಳ್ಳಿ ಜನರೊಂದಿಗೆ ಕಿರಣ್ ರಿಜಿಜು ಅವರು ಸಹ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಅವರು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರಧಾನಿ ಮೋದಿ ‘ಒಳ್ಳೆಯ ನೃತ್ಯಗಾರ’ ಎಂದು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈಶಾನ್ಯ ಕನಲಾಂಗ್ ಹಳ್ಳಿಯ ವಿಜಿ ಎಂದೂ ಕರೆಯಲ್ಪಡುವ ಸ್ಥಳೀಯ ಸಜೋಲಂಗ್ ಜನರು ತಮ್ಮ ಸಾಂಪ್ರದಾಯಿಕ ಹಾಡು ಮತ್ತು ನೃತ್ಯದೊಂದಿಗೆ ಸಚಿವರನ್ನು ಸ್ವಾಗತಿಸಿದ್ದರು. ಸಚಿವ ಕಿರಣ್ ರಿಜಿಜು ಅವರು ಹಳ್ಳಿಯ ಜನರೊಂದಿಗೆ ಸಂತೋಷದಿಂದ ನತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿವೇಕಾನಂದ ಕೇಂದ್ರ ವಿದ್ಯಾಲಯ ಯೋಜನೆಯ ಮೇಲ್ವಿಚಾರಣೆಯ ಸಲುವಾಗಿ ನಾನು ಕಜಲಾಂಗ್ ಗ್ರಾಮಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಜನರ ಸಾಂಪ್ರದಾಯಿಕ ಹಾಡು ಮತ್ತು ನೃತ್ಯ ಇದಾಗಿದೆ. ಮೂಲ ಜಾನಪದ ಹಾಡುಗಳು ಮತ್ತು ನೃತ್ಯಗಳು ಅರುಣಾಚಲ ಪ್ರದೇಶದ ಸಮುದಾಯದ ಜನರ ಶೈಲಿಯಿದು ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕಾನೂನು ಸಚಿವ ಕಿರಣ್ ರಿಜಿಜು ಕೂಡಾ ‘ಒಳ್ಳೆಯ ನೃತ್ಯಗಾರ’ ಎಂದು ಹೇಳಿದ್ದಾರೆ.

ಸಚಿವ ಕಿರಣ್ ರಿಜಿಜು ಅವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಆಗಾಗ ಆರೋಗ್ಯ ಸಂಬಂಧಿತ ಹಾಗೂ ಫಿಟ್ನೆಸ್ ಕುರಿತಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜತೆಗೆ ಹಾಡುವ ಕೌಶಲ್ಯವನ್ನೂ ಸಹ ಈ ಹಿಂದೆ ಟ್ವೀಟ್ ಮೂಲಕ ಹಂಚಿಕೊಂಡಿದ್ದರು.

ಮಿಜಿ ಎಂಬ ಸಮುದಾಯವು ಅರುಣಾಚಲ ಪ್ರದೇಶದ ಪಶ್ಚಿಮ ಮತ್ತು ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿ ವಾಸಿಸುವ ಸಮುದಾಯ. ಮಿಜಿ ಪದದಲ್ಲಿ ಮಿ ಎಂದರೆ ಬೆಂಕಿ ಮತ್ತು ಜೀ ಎಂದರೆ ಕೊಡುವವರು ಎಂಬ ಅರ್ಥವನ್ನು ಹೊಂದಿದೆ.

ಇದನ್ನೂ ಓದಿ:

PM Modi in UNGA Summit: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ

ಶರದ್ ಪವಾರ್ ಸೇರಿದಂತೆ ವಿಐಪಿಗಳ ಕಾರು ಅಥ್ಲೆಟಿಕ್ ಟ್ರ್ಯಾಕ್​​ನಲ್ಲಿ ನಿಲುಗಡೆ; ಇದು ದುಃಖದ ಸಂಗತಿ ಎಂದ ಕಿರಣ್ ರಿಜಿಜು