Viral Video: ಮಗನ ಮಾಜಿ ಪ್ರೇಮಿಗೆ ಪಾಠ ಕಲಿಸಿದ ತಾಯಿ.. ಬಾಕ್ಸಿಂಗ್​​​ ರಿಂಗ್ ನಲ್ಲಿ ಯಾವ ರೇಂಜ್ ಗೆ ರಿವೆಂಜ್​​ ತೀರಿಸಿಕೊಂಡರು ನೋಡಿ

|

Updated on: Oct 31, 2023 | 9:43 AM

Poland Mother Malgorzata Zwierzynski : ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಯೋಧರು ಯಾರೂ ಇಲ್ಲ! ಮಗನ ಮಾಜಿ ಪ್ರೇಮಿಗೆ ಪಾಠ ಕಲಿಸಿದ ತಾಯಿ.. ಬಾಕ್ಸಿಂಗ್​​​ ರಿಂಗ್ ನಲ್ಲಿ ಯಾವ ರೇಂಜ್ ಗೆ ರಿವೆಂಜ್​​ ತೀರಿಸಿಕೊಂಡರು ನೋಡಿ, ವೈರಲ್ ವೀಡಿಯೋ

Viral Video: ಮಗನ ಮಾಜಿ ಪ್ರೇಮಿಗೆ ಪಾಠ ಕಲಿಸಿದ ತಾಯಿ.. ಬಾಕ್ಸಿಂಗ್​​​ ರಿಂಗ್ ನಲ್ಲಿ ಯಾವ ರೇಂಜ್ ಗೆ ರಿವೆಂಜ್​​ ತೀರಿಸಿಕೊಂಡರು ನೋಡಿ
ಮಗನ ಮಾಜಿ ಲವರ್​ ವಿರುದ್ಧ ತಾಯಿ ಯಾವ ರೇಂಜ್ ಗೆ ರಿವೆಂಜ್​​ ತೀರಿಸಿಕೊಂಡರು ನೋಡಿ
Follow us on

ಜಗತ್ತಿನಲ್ಲಿ ತಾಯಿಯ ಪ್ರೀತಿಯನ್ನು ವರ್ಣಿಸಲು ಯಾವ ಪದವೂ ಸಾಕಾಗುವುದಿಲ್ಲ. ತಾಯಿ ಪ್ರೀತಿ ಮುಂದೆ ಎಲ್ಲವೂ ಗೌಣ. ಈ ಜಗತ್ತಿನಲ್ಲಿ, ತಾಯಿಯು ತನ್ನ ಮಗುವಿಗಾಗಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು, ಯಾವುದೇ ಮಟ್ಟಕ್ಕಾದರೂ ಹೋರಾಡಲು ಸಿದ್ಧಳಾಗುತ್ತಾಳೆ. ನಿಜವಾದ ಪ್ರೀತಿ ಎಂದರೆ ಅದು ತಾಯಿ ಪ್ರೀತಿ ಮಾತ್ರ. ಅವಳು ಬದುಕಿರುವವರೆಗೂ ತನ್ನ ಮಕ್ಕಳಿಗೆ ಯಾವುದೇ ಹಾನಿಯನ್ನು ಬಯಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತನ್ನ ಮಗುವಿಗೆ ಬೇರೆಯವರು ಸಮಸ್ಯೆ ಉಂಟುಮಾಡಿದರೆ ಸಹಿಸುತ್ತಾಳಾ ಆ ತಾಯಿ. ಎಂತಹುದೇ ಪರಿಸ್ಥಿತಿ ಎದುರಾದರೂ ಆ ಸಮಸ್ಯೆಯನ್ನು ಪರಿಹರಿಸುತ್ತಾಳೆ. ತನ್ನ ಮಗುವಿನ ಸುರಕ್ಷತೆಗಾಗಿ ಹೋರಾಡುವಾಗ, ಈ ಜಗತ್ತಿನಲ್ಲಿ ತಾಯಿಗಿಂತ ಉತ್ತಮ ಯೋಧ ಯಾರುತಾನೆ ಇರಲು ಸಾಧ್ಯ ಹೇಳಿ. ಸದ್ಯ ಇದನ್ನೆಲ್ಲ ನಿರೂಪಿಸುವ ಸಂಗತಿಯೊಂದು ವಿಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಇಂಗ್ಲಿಷ್ ವೆಬ್‌ಸೈಟ್ ಡೈಲಿ ಮೇಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಪೋಲೆಂಡ್ ನಿವಾಸಿ, 50 ವರ್ಷದ ಮಾಲ್ಗೊರ್ಜಾಟಾ ಜ್ವಿರ್‌ಜಿನ್ಸ್ಕಾ ( Malgorzata Zwierzynski Nikola) ಅವರು ಎಂಎಂಎ ಹೋರಾಟದ ಭಾಗವಾಗಿ ರಿಂಗ್‌ನಲ್ಲಿ ಒಬ್ಬ ಯುವತಿಯೊಂದಿಗೆ ಹೋರಾಡಿದರು. ಆ ಯುವತಿ ತನ್ನ ಮಗನ ಮಾಜಿ ಪ್ರಿಯಕರಳಾಗಿದ್ದಳು ಎಂಬುದು ಇಲ್ಲಿ ಗಮನಾರ್ಹ. ಮಾಲ್ಗೊರ್ಜಾಟಾ ಆ ಯುವತಿಯೊಂದಿಗೆ ಬಾಕ್ಸಿಂಗ್​​​ ರಿಂಗ್ ( mixed martial arts fight -MMA) ನಲ್ಲಿ ಹೋರಾಡಿ ಅವಳನ್ನು ನೆಲಕ್ಕೆ ಕೆಡವಿದ್ದಾಳೆ. ಅವಳು ತನ್ನ ಮಗನ ಸಲುವಾಗಿ ಹೋರಾಡುತ್ತಿದ್ದಾಳೆಯೇ ಹೊರತು; ತನ್ನ ಸ್ವ ಹಿತಾಸಕ್ತಿಗಾಗಿ ಅಲ್ಲ ಎಂದು ಆ ವಿಡಿಯೋ ನೋಡಿದ ಯಾರಾದರೂ ಅರ್ಥಮಾಡಿಕೊಳ್ಳುತ್ತಾರೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆದ ನಂತರ ಆ ಮಹಾತಾಯಿ ರಾತ್ರೋರಾತ್ರಿ ಪ್ರಪಂಚದಾದ್ಯಂತ ಫೇಮಸ್ ಆಗಿದ್ದಾರೆ. Malgorzata ವೃತ್ತಿಪರವಾಗಿ Gosia Magical ಎಂದು ಕರೆಯಲಾಗುತ್ತದೆ.

ಈ ವಿಡಿಯೋವನ್ನು ಗೋಸಿಯಾ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 50 ವರ್ಷದ ಮಾಲ್ಗೊರ್ಜಾಟಾ ಮತ್ತು 19 ವರ್ಷದ ನಿಕೊಲಾಯ್ ಲೋಕಿನ್ ( Nikita) ನಡುವೆ ನಡೆಯುತ್ತಿರುವ ಭೀಕರ ಕದನವನ್ನು ನೀವು ವೀಡಿಯೊದಲ್ಲಿ ನೋಡಬಹುದು. MMA ಬಾಕ್ಸಿಂಗ್​​ ಜಗತ್ತಿನಲ್ಲಿ Malgorzata Nikola ಅವರ ಆಕ್ರಮಣಕಾರಿ ತಂತ್ರಗಳು ಈಗ ಮೆಚ್ಚುಗೆ ಪಡೆದಿವೆ. ಇದುವರೆಗೂ ಪೋಲೆಂಡ್ ನಲ್ಲಿ ಇಂತಹ ಹಲವಾರು ಹೊಡೆದಾಟದ ಘಟನೆಗಳು ನಡೆದಿವೆ. ಆದರೆ 50ರ ಹರೆಯದ ಮಹಿಳೆ ಹಾಗೂ 19ರ ಹರೆಯದ ಯುವತಿಯ ನಡುವಿನ ಈ ಹೊಡೆದಾಟ ಜಗತ್ತಿನಾದ್ಯಂತ ಈಗ ವೈರಲ್ ಆಗಿದ್ದು, ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಈ ಫೈಟ್ ಗಳನ್ನು ನೋಡುವಾಗ ಇಬ್ಬರು ಫೈಟರ್ ಗಳ ನಡುವೆ ಅಷ್ಟು ದೊಡ್ಡ ವಯಸ್ಸಿನ ಅಂತರ ಇದ್ದಂತೆ ಅನಿಸುವುದಿಲ್ಲ. ಅಲ್ಲದೆ, ಈ ವೀಡಿಯೊ ನೋಡಿದಾಗ ನಿಮಗೆ ಅರ್ಥವಾಗುತ್ತದೆ ಈ ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಯೋಧರು ಯಾರೂ ಇಲ್ಲ ಎಂಬುದು.

ಹೆಚ್ಚಿನ ಟ್ರೆಂಡಿಂಗ್ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ