Mother and Son : ಪ್ರತೀ ಪೋಷಕರಿಗೂ ತಮ್ಮ ಮಕ್ಕಳ ಯಶಸ್ಸನ್ನು ಕಣ್ಣಾರೆ ನೋಡಬೇಕು ಎನ್ನುವು ಕನಸು ಇದ್ದೇ ಇರುತ್ತದೆ. ಕೆಲವರಿಗೆ ಇದು ನನಸಾಗುತ್ತದೆ ಇನ್ನೂ ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನನಸಿಗೆ ಸಂಬಂಧಿಸಿದ್ದು. ತನ್ನ ಮಗ ಪತ್ರಕರ್ತನಾಗಿ ಚರ್ಚೆಯೊಂದರಲ್ಲಿ ತೊಡಗಿಕೊಂಡಿದ್ದನ್ನು (TV Journalist) ತಾಯಿಯೊಬ್ಬಳು ಟಿವಿ ಪರದೆಯ ಮೇಲೆ ನೋಡಿ ಸಂಭ್ರಮಿಸಿದ್ದಾಳೆ, ಭಾವುಕಳಾಗಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಹೃದಯಸ್ಪರ್ಶಿಯಾದ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಮೃದುವಾಗಿಸುತ್ತಿದೆ.
ಇನ್ಸ್ಟಾಗ್ರಾಮ್ನ ಗುಡ್ ನ್ಯೂಸ್ ಮೂವ್‌ಮೆಂಟ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹೆಮ್ಮೆಯ ತಾಯಿ! ತನ್ನ ಮಗ ಟಿವಿ ಪತ್ರಕರ್ತನಾಗಿ ಪರದೆಯ ಮೇಲೆ ಚರ್ಚಿಸುವುದನ್ನು ನೋಡಿದ ಈಕೆ ಖುಷಿ ತಡೆದುಕೊಳ್ಳಲಾಗದೆ ತನ್ನ ಸಹೋದ್ಯೋಗಿಗಳ ಮುಂದೆ ಕಣ್ಣೀರಾಗಿದ್ದಾಳೆ’ ಎಂಬ ಒಕ್ಕಣೆ ಈ ವಿಡಿಯೋಗಿದೆ. ಯಾರಾದರೂ ಹೋಗಿ ಆಕೆಯನ್ನು ತಬ್ಬಿಕೊಳ್ಳಬಾರದೆ? ಎಂದಿದ್ದಾರೆ ನೆಟ್ಟಿಗರು. ಇದು ಮಗನದ್ದಷ್ಟೇ ಅಲ್ಲ ಇಂಥ ಮಗನನ್ನು ಬೆಳೆಸಿದ ತಾಯಿಯ ಸಾಧನೆಯೂ ಹೌದು ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral: ‘ಮಾಂಸಾಹಾರ ಸಸ್ಯಾಹಾರಕ್ಕೆ ಒಂದೇ ಚಮಚ ಬಳಸಿದ್ದರೆ!’ ಸುಧಾ ಮೂರ್ತಿಯ ಮೇಲೆ ಮತ್ತೆ ಮುಗಿಬಿದ್ದ ನೆಟ್ಟಿಗರು
ಶ್ರಮಜೀವಿಯಾದ ತಾಯಿ ಮಗನನ್ನೂ ಶ್ರಮಜೀವನದೆಡೆ ಚಲಿಸುವಂತೆ ಮಾಡಿದ್ದಾಳೆ ಎಂದಿದ್ದಾರೆ ಒಬ್ಬರು. ಮಕ್ಕಳ ಉತ್ತಮ ಭವಿಷ್ಯಕ್ಕೆ ಅಪ್ಪ ಅಮ್ಮನ ಒಳ್ಳೆಯತನವೂ ಕಾರಣವಾಗುತ್ತದೆ ಎನ್ನುತ್ತದೆ ವಿಜ್ಞಾನ ಎಂದಿದ್ದಾರೆ ಇನ್ನೊಬ್ಬರು. ಈ ತಾಯಿಗೆ ಪನಾಮಾದಿಂದ ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ಆನಂದಭಾಷ್ಪ! ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ ಅನೇಕರು. ಈ ವಿಡಿಯೋ ಅನ್ನು 12 ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 22,000 ಜನರು ಲೈಕ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ