Animals : ಮೊಟ್ಟೆಯನ್ನೋ ಮರಿಯನ್ನೋ ಹಾಕಿದ ಸಂದರ್ಭದಲ್ಲಿ ತನ್ನನ್ನು ಸಾಕಿದವರನ್ನೇ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಪ್ರಾಣಿಗಳು. ಅವುಗಳನ್ನು ರಕ್ಷಿಸಿಕೊಳ್ಳುವುದೇ ತನ್ನ ಮೊದಲ ಆದ್ಯತೆ ಎಂಬಂಥ ಮನಸ್ಥಿತಿ ತಾಯಿಯಾತ್ತಿದ್ದ ಒಡನೆಯೇ ಅವುಗಳಲ್ಲಿ ಮೈಗೂಡಿಬಿಡುತ್ತದೆ. ಇದೀಗ ಜಯ್ ಬ್ರೀವರ್ (Jay Brewer) ಎಂಬ ಪ್ರಾಣಿಪ್ರಿಯ ಮತ್ತು ಪಾಲಕ ತಾನು ಸಾಕಿದ ತಾಯಿಹೆಬ್ಬಾವಿನ (Python) ಬಳಿ ನಿಂತಿದ್ದಾನೆ. ಹಾಕಿದ ಮೊಟ್ಟೆಗಳನ್ನು ರಕ್ಷಿಸುವುದಕ್ಕಾಗಿ ಅವುಗಳೆಡೆ ಕೈಹಾಕುತ್ತಾನೆ. ತಕ್ಷಣವೇ ತಾಯಿಹೆಬ್ಬಾವು ಅವನನ್ನು ಕಚ್ಚಲು ಸಮೀಪಿಸುತ್ತದೆ.
ನೋಡಿ ಈ ವಿಡಿಯೋ.
ಈ ವಿಡಿಯೋ ಅನ್ನು ಈತನಕ 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಸುಮಾರು 22,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ಧಾರೆ. ಪ್ರತೀಬಾರೀಯೂ ಈ ಮೊಟ್ಟೆಗಳನ್ನು ಮುಟ್ಟಲು ಜಯ್ ಪ್ರಯತ್ನಿಸಿದಾಗೆಲ್ಲ ತಾಯಿಹೆಬ್ಬಾವು ಹೀಗೆಯೇ ವರ್ತಿಸಿದೆ. ಅನೇಕರು ಈ ವಿಡಿಯೋ ನೋಡಿ ಭಯವಾಯಿತು ಎಂದು ಪ್ರತಿಕ್ರಿಯಿಸಿದ್ಧಾರೆ. ಈ ಹೆಬ್ಬಾವು ಮೊಟ್ಟೆಗಳನ್ನು ಎಣಿಸುವುದಕ್ಕೂ ಬಿಡಲಾರದು ಅಷ್ಟೊಂದು ರಕ್ಷಣಾತ್ಮಕ ಮನೋಭಾವವವನ್ನು ಹೊಂದಿದೆ.
ಇದನ್ನೂ ಓದಿ : Viral Video: ರೇಲಿಂಗ್ ಮೇಲೆ ಕೂಲಿ; ಇವು ತಿರುಮಲದ ಮೆಟ್ಟಿಲುಗಳು ಎನ್ನುತ್ತಿದ್ದಾರೆ ನೆಟ್ಟಿಗರು, ಹೌದೆ?
ಸಾಕಿದ ಹಾವಾದರೂ ಹಾವು ಹಾವೇ. ಅದರಲ್ಲೂ ಮೊಟ್ಟೆ ಇಟ್ಟ ಹಾವನ್ನು ಕೇಳಬೇಕೇ? ಕಚ್ಚಿಸಿಕೊಂಡರೂ ಪರ್ವಾಗಿಲ್ಲ ಎನ್ನುವ ಧೈರ್ಯ ಬೇಕು ಎಂದಿದ್ಧಾರೆ ಒಬ್ಬರು. ಜಯ್ ಇನ್ಸ್ಟಾ ಪುಟ ನೋಡಿದರೆ ಸಾಕು, ಥರಾವರಿ ಜಾತಿಯ ಮತ್ತು ಬಣ್ಣದ ಬೃಹತ್ ಗಾತ್ರದ ಹಾವುಗಳೊಂದಿಗೆ ಅವರು ಒಡನಾಡುವುದನ್ನು ನೋಡಿದರೆ ಒಂದು ಕ್ಷಣ ಎದೆ ಝಲ್ ಎನ್ನುತ್ತದೆ.
ಮೇಲಿನ ವಿಡಿಯೋದಲ್ಲಿ ಜಯ್ ಇನ್ನೊಂದು ಹೆಬ್ಬಾವಿನ ಮೊಟ್ಟೆಗಳನ್ನು ಒಟ್ಟಾಗಿ ಮತ್ತೊಂದು ಟ್ರೇಗೆ ವರ್ಗಾಯಿಸಿದ್ದಾರೆ. ಈ ತಾಯಿಹೆಬ್ಬಾವು ಶಾಂತಸ್ವಭಾವವನ್ನು ಹೊಂದಿದೆ ಅನ್ನಿಸುತ್ತದೆ. ಆದರೆ ಮೇಲಿನ ಹೆಬ್ಬಾವು ಮಾತ್ರ ಭಯಂಕರ!
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ