ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ಇತ್ತೀಚಿಗಷ್ಟೇ ಅದ್ಧೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಒಂದು ವಿಶೇಷವಾದ ಗೌನ್ ತೊಟ್ಟಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಬಾಲ್ಯದ ಸ್ನೇಹಿತರಾಗಿದ್ದ ಅನಂತ್ ಹಾಗೂ ರಾಧಿಕಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನಂತ್ ಅಂಬಾನಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು, ಈ ಎಲ್ಲಾ ಸಂದರ್ಭದಲ್ಲಿ ರಾಧಿಕಾ ಜೊತೆಯಾಗಿದ್ದರು. ಇದೀಗ ರಾಧಿಕಾ ತಮ್ಮ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ನೀಡಿದ್ದ ಲವ್ ಲೆಟರನ್ನೇ ಪ್ರಿಂಟ್ ಮಾಡಿಸಿದ ಗೌನ್ ತೊಟ್ಟು ಮಿಂಚಿದ್ದಾರೆ.
ಸದ್ಯ ಈ ಕ್ಯೂಟ್ ಜೋಡಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವರದಿ ಪ್ರಕಾರ, ಅನಂತ್ ಮತ್ತು ರಾಧಿಕಾ ಬಾಲ್ಯದ ಸ್ನೇಹಿತರು. ಅವರ ಸಂಬಂಧವು 2018 ರಲ್ಲಿ ಬೆಳಕಿಗೆ ಬಂದಿತು.ಇಶಾ ಅಂಬಾನಿಯ ಮದುವೆಯಿಂದ ಹಿಡಿದು ಅಂಬಾನಿ ಕುಟುಂಬದ ಪ್ರತಿಯೊಂದು ವಿಶೇಷ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದ ರಾಧಿಕಾ ಮರ್ಚೆಂಟ್.
ಇದನ್ನೂ ಓದಿ: ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ;ಯಾಕಿಷ್ಟು ದುಬಾರಿ ಗೊತ್ತಾ?
2023ರ ಜನವರಿ 19ರಂದು ಅನಂತ್ ಅಂಬಾನಿ ಮತ್ತು ರಾಧಿಕ ಮರ್ಚೆಂಟ್ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿಯ ಅದ್ಧೂರಿ ವಿವಾಹ ಕಾರ್ಯಕ್ರಮವು ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯಲಿದೆ ಎಂದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Fri, 14 June 24