Viral Video: ಡೋಂಟ್ ಮೆಸ್ ವಿತ್ ಮೀ… ತನಗೆ ತೊಂದರೆ ಕೊಡಲು ಬಂದ ಅಜ್ಜನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದ ಹಸು
ಸುಖಾ ಸುಮ್ಮನೆ ತಮ್ಮ ತಂಟೆಗೆ ಯಾರಾದ್ರೂ ಬಂದ್ರೆ , ಎಂತಹ ಸಾದು ಪ್ರಾಣಿಯಾದರೂ ಕೋಪಗೊಳ್ಳುತ್ತವೆ. ಮತ್ತು ತಮ್ಮ ತಂಟೆಗೆ ಬಂದವರ ಮೇಲೆ ದಾಳಿ ನಡೆಸುತ್ತವೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್ ಆಗಿದ್ದು, ತನಗೆ ದೊಣ್ಣೆಯಲ್ಲಿ ಹೊಡೆಯಲು ಬಂದಂತಹ ವ್ಯಕ್ತಿಯನ್ನೇ ಹಸುವೊಂದು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಕಾಡು ಪ್ರಾಣಿಗಳೇ ಆಗಿರಲಿ ಅಥವಾ ಸಾಕು ಪ್ರಾಣಿಗಳೇ ಆಗಿರಲಿ ಅವುಗಳ ಸ್ವಭಾವ ನಡತೆಯನ್ನು ತಕ್ಷಣಕ್ಕೆ ಹೀಗೆ ಎಂದು ಹೇಳುವುದು ತೀರಾ ಕಷ್ಟ. ಕೆಲವೊಂದು ಬಾರಿ ಸಾದು ಪ್ರಾಣಿಗಳೂ ಕೂಡಾ ವೈಲೆಂಟ್ ಆಗುತ್ತವೆ. ಹೌದು ಯಾವುದೇ ಪ್ರಾಣಿಯಾದರೂ ಸರಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಮ್ಮೆಗೆ ವೈಲೆಂಟ್ ಆಗುತ್ತವೆ. ಪ್ರಾಣಿಗಳ ಉಗ್ರ ಅವತಾರಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದೇ ವಿಡಿಯೋವೊಂದು ಹರಿದಾಡುತ್ತಿದ್ದು, ಹಸುವೊಂದು ತನಗೆ ದೊಣ್ಣೆಯಲ್ಲಿ ಹೊಡೆಯಲು ಬಂದಂತಹ ವ್ಯಕ್ತಿಯನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದೆ. ಈ ದೃಶ್ಯಾವಳಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಶುಭಾಂಗಿ ಪಂಡಿತ್ (Babymishra_) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಕೈಯಲ್ಲಿ ದೊಣ್ಣೆಯನ್ನು ಎತ್ತಿಕೊಂಡು ಬಂದು ತನ್ನ ಪಾಡಿಗೆ ನಿಂತಿದ್ದ ಹಸುವಿನ ಮೇಲೆ ಹೊಡೆಯಲು ಬರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಹಿಂದಿನಿಂದ ಬಂದು ಆ ವ್ಯಕ್ತಿ ಹಸುವಿಗೆ ಜೋರಾಗಿ ಹೊಡೆಯುತ್ತಾನೆ. ನೋವನ್ನು ತಾಳಲಾರದೆ ಹಸು ಮಗ್ನೇ ಸುಖಾ ಸುಮ್ಮನೆ ನನಗೆ ಹೊಡಿತೀಯಾ ಎನ್ನುತ್ತಾ ಆತನ ಬಳಿ ನುಗ್ಗಿ ಕೊಂಬಿನಿಂದ ತಿವಿದು ಆ ವ್ಯಕ್ತಿಯನ್ನು ಎತ್ತಿ ಬಿಸಾಡಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಯುವಕರಿಬ್ಬರ ಬೈಕ್ ಸ್ಟಂಟ್, ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ ಅಂಕಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
पीछे से आया और ताबड़तोड़ लाठियाँ बरसा दीं। अब इस जीवन में कभी सीधा नही चल पाएगा। pic.twitter.com/g6FT6RctzP
— Shubhangi Pandit (@Babymishra_) June 12, 2024
ಜೂನ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಸುವಿಗೆ ಹೊಡೆದಿದ್ದಕ್ಕೆ ಆತನಿಗೆ ತಕ್ಕ ಶಾಸ್ತಿಯಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: