ಗಂಡನ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯನ್ನು ರಾಜನಿಗೆ ಅರ್ಪಿಸಿದ್ದ ರಜಪೂತ ಮಹಿಳೆ; ಏನಿದಕ್ಕೆ ಕಾರಣ?

ನಮ್ಮ ಇತಿಹಾಸದಲ್ಲಿ ಅದೆಷ್ಟೋ ಸಾಹಸಗಾಥೆಗಳಿವೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು ಹಲವರಾದರೆ ಜೀವನವನ್ನೇ ತ್ಯಾಗ ಮಾಡಿದವರು ಇನ್ನು ಕೆಲವರು. ರಾಜರ ಆಡಳಿತವಿದ್ದ ಸಮಯದಲ್ಲಿ ರಾಜಸ್ಥಾನದ ಮಹಿಳೆಯೊಬ್ಬರು ತನ್ನ ಗಂಡನಿಗಿಂತಲೂ ಹೆಚ್ಚು ರಾಷ್ಟ್ರಪ್ರೇಮ ಹೊಂದಿದ್ದರು. ಆಕೆ ತಾಯ್ನಾಡಿಗಾಗಿ ತನ್ನ ಗಂಡನ ಪ್ರಾಣವನ್ನೇ ತೆಗೆದಿದ್ದರು. ಯಾರು ಆ ವೀರ ಮಹಿಳೆ? ಆಕೆಯ ಕತೆ ಏನು? ಎಂಬ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.

ಗಂಡನ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯನ್ನು ರಾಜನಿಗೆ ಅರ್ಪಿಸಿದ್ದ ರಜಪೂತ ಮಹಿಳೆ; ಏನಿದಕ್ಕೆ ಕಾರಣ?
ಸಾಂದರ್ಭಿಕ ಚಿತ್ರ
Follow us
|

Updated on: Oct 01, 2024 | 5:06 PM

ಜೈಪುರ: ತಾಯ್ನಾಡನ್ನು ರಕ್ಷಿಸಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ರಾಜಸ್ಥಾನದ ನಾಡಿನಲ್ಲಿ ಇಂತಹ ಅನೇಕ ವೀರರು ಮತ್ತು ವೀರನಾರಿಯರು ಜನಿಸಿದ್ದರು. ಮಾತೃಭೂಮಿಯನ್ನು ರಕ್ಷಿಸಲು ದೇಶದ್ರೋಹ ಎಸಗಿದ ತನ್ನ ಗಂಡನನ್ನೇ ಕೊಲ್ಲಲು ಕೂಡ ಮಹಿಳೆಯರು ಹಿಂಜರಿಯುತ್ತಿರಲಿಲ್ಲ. ಹಿರಾಡೆ ಎಂಬ ರಜಪೂತ ಮಹಿಳೆ ದೇಶಕ್ಕೆ ದ್ರೋಹ ಎಸಗಿದ ತನ್ನ ಗಂಡನ ಶಿರಚ್ಛೇದ ಮಾಡಿ, ಆ ತಲೆಯನ್ನು ರಾಜನಿಗೆ ಅರ್ಪಿಸಿದ್ದರು. ಆಕೆಯ ತ್ಯಾಗದ ಕಥೆಗಳು ರಾಜಸ್ಥಾನದ ಭವ್ಯ ಇತಿಹಾಸದ ಪುಟಗಳಲ್ಲಿ ಇನ್ನೂ ಜೀವಂತವಾಗಿವೆ.

ತನ್ನ ಗಂಡ ವಿಕಾ ದಹಿಯಾ ಅವರಿಗಿಂತ ರಾಷ್ಟ್ರದ ಮೇಲೆ ಹೆಚ್ಚು ಪ್ರೀತಿಯನ್ನು ಇಟ್ಟಿದ್ದ ರಾಜಸ್ಥಾನದ ಏಕೈಕ ವೀರ ಕ್ಷತ್ರಿಣಿ ಹಿರಾಡೆ ತಾಯ್ನಾಡಿಗಾಗಿ ತನ್ನ ಗಂಡನ ಪ್ರಾಣವನ್ನೇ ತೆಗೆದರು. ಹಿರಾಡೆ 13ನೇ ಶತಮಾನದ ಮಹಿಳೆಯಾಗಿದ್ದು, ತನ್ನ ಮಾತೃಭೂಮಿಯನ್ನು ರಕ್ಷಿಸಲು ದೊಡ್ಡ ತ್ಯಾಗ ಮಾಡಿದರು. ಹಿರಾಡೆ ತನ್ನ ಗಂಡನ ಶಿರಚ್ಛೇದ ಮಾಡಿದರು. ಹಿರಾಡೆಯ ಗಂಡ ದುರಾಸೆ ಮತ್ತು ಮೋಸದಿಂದ ದೆಹಲಿಯ ದೊರೆ ಅಲ್ಲಾವುದ್ದೀನ್ ಖಲ್ಜಿಗೆ ಜಲೋರ್ ಕೋಟೆಯ ಅನೇಕ ರಹಸ್ಯಗಳನ್ನು ನೀಡಿದ್ದನು. ಇದಾದ ನಂತರ ಅಲ್ಲಾವುದ್ದೀನ್ ಖಲ್ಜಿ ಆತನಿಗೆ ಅಪಾರ ಸಂಪತ್ತನ್ನು ನೀಡಿ ಶ್ರೀಮಂತನನ್ನಾಗಿ ಮಾಡಿದನು. ಆದರೆ ಹಿರಾಡೆಗೆ ಈ ವಿಷಯ ಗೊತ್ತಾದ ನಂತರ ಗಂಡನ ದೇಶದ್ರೋಹವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Viral: ಕಡ್ಲೆಪುರಿ ಹಂಚಿದ ಹಾಗೆ ಫ್ರೀಯಾಗಿ ʼಐಪೋನ್‌ 16 ಪ್ರೋ ಮ್ಯಾಕ್ಸ್‌ʼ ಮೊಬೈಲ್‌ ಹಂಚಿದ ವ್ಯಕ್ತಿ

ದೇಶದ ಬಗ್ಗೆ ಬಹಳ ಅಭಿಮಾನ ಹೊಂದಿದ್ದ ಹಿರಾಡೆ ತಾನು ದೇಶದ್ರೋಹಿಯ ಹೆಂಡತಿ ಎಂದು ಕರೆಸಿಕೊಳ್ಳುವುದಕ್ಕಿಂತ ವಿಧವೆಯಾಗಿಯೇ ಬದುಕುತ್ತೇನೆ ಎಂದು ನಿರ್ಧರಿಸಿದರು. ತಾನೇ ತನ್ನ ಗಂಡನ ಶಿರಚ್ಛೇದ ಮಾಡಿ, ಅವನ ಕತ್ತರಿಸಿದ ತಲೆಯನ್ನು ಜವಲಿಪುರದ ಸುತ್ತಲಿನ ಪ್ರದೇಶವನ್ನು ಆಳುತ್ತಿದ್ದ ಅಂದಿನ ದೊರೆ ಕನ್ಹಡದೇವನ ಬಳಿಗೆ ತೆಗೆದುಕೊಂಡು ಹೋದರು. ಆ ಜಾಗ ಇಂದು ಜಲೋರ್ ಎಂದು ಕರೆಯಲ್ಪಡುತ್ತಿದೆ. ಕನ್ಹಡದೇವನು ಕ್ಷತ್ರಿಣಿ ಹಿರಾಡೆಯ ತ್ಯಾಗದಿಂದ ಪ್ರಭಾವಿತನಾದನು. ಬಳಿಕ ಅವನು ಅಲಾವುದ್ದೀನ್ ಖಲ್ಜಿಯ ಸೈನ್ಯದೊಂದಿಗೆ ಯುದ್ಧವನ್ನು ಸಾರಿದನು ಎಂದು ಡಿಎನ್​ಎ ವರದಿ ಮಾಡಿದೆ.

ಇದನ್ನೂ ಓದಿ: Viral: ಇಸ್ಲಾಂ ಧರ್ಮ ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ ಎಂ.ಟೆಕ್‌ ಪದವೀಧರೆ

ಪತಿ ವಿಕಾ ದಹಿಯಾ ಅವರಿಗಿಂತ ರಾಷ್ಟ್ರದ ಮೇಲಿನ ಪ್ರೀತಿಯನ್ನು ಇಟ್ಟ ರಾಜಸ್ಥಾನದ ಏಕೈಕ ವೀರ ಕ್ಷತ್ರಿಣಿ ಹಿರಾಡೆ ಎಂದು ಇತಿಹಾಸಕಾರ ಪ್ರಮೋದ್ ಚೌಹಾಣ್ ಹೇಳುತ್ತಾರೆ. ತಾಯ್ನಾಡಿಗಾಗಿ ಗಂಡನ ಪ್ರಾಣವನ್ನೇ ತೆಗೆದ ಹಿರಾಡೆಯ ಈ ತ್ಯಾಗವು ಹಿಂದಿನ ಕಾಲದ ದೇಶಭಕ್ತಿ ಮತ್ತು ಸ್ತ್ರೀಶಕ್ತಿಯೆರಡರ ನಿದರ್ಶನವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ
ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ
ಮುಡಾ ಹಗರಣ: ಸಿದ್ದರಾಮಯ್ಯ ಬಗ್ಗೆ ಆಪ್ತ ಸ್ನೇಹಿತನ ಮನದ ಮಾತು
ಮುಡಾ ಹಗರಣ: ಸಿದ್ದರಾಮಯ್ಯ ಬಗ್ಗೆ ಆಪ್ತ ಸ್ನೇಹಿತನ ಮನದ ಮಾತು
ಚಲಿಸುತ್ತಿದ್ದ ಬಸ್ ಚಕ್ರವೇ ಕಿತ್ತೋಯ್ತು, ಮುಂದೇನಾಯ್ತು?
ಚಲಿಸುತ್ತಿದ್ದ ಬಸ್ ಚಕ್ರವೇ ಕಿತ್ತೋಯ್ತು, ಮುಂದೇನಾಯ್ತು?
ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ- ಸಿಎಂ ಸಹೋದರ
ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ- ಸಿಎಂ ಸಹೋದರ
ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ