Viral: ಇಸ್ಲಾಂ ಧರ್ಮ ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ ಎಂ.ಟೆಕ್ ಪದವೀಧರೆ
ಕೆಲ ಸಮಯದ ಮುಸ್ಲಿಂ ಮಹಿಳೆಯೊಬ್ಬರು ಗಂಡನ ಕಾಟಕ್ಕೆ ಬೇಸತ್ತು, ತನ್ನ ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬಳು ಯುವತಿ ಇಸ್ಲಾಂ ಧರ್ಮವನ್ನು ತ್ಯಜಿಸಿ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಹಿಂದೂ ಧರ್ಮದ ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರಗಳಿಂದ ಪ್ರೇರಿತರಾಗಿ ಸನಾತನ ಧರ್ಮಕ್ಕೆ ಮತಾಂತರಗೊಂಡ ಹಲವರಿದ್ದಾರೆ. ಇದೀಗ ಇಲ್ಲೊಬ್ಬಳು ಮುಸ್ಲಿಂ ಯುವತಿ ಕೂಡಾ ತನ್ನ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಕೆಲ ವಾರಗಳ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ತನ್ನ ಇಬ್ಬರು ಪುತ್ರರೊಂದಿಗೆ ಹಿಂದೂ ಧರ್ಮವನ್ನು ಸ್ವೀಕರಿಸಿದ ಘಟನೆಯೊಂದು ನಡೆದಿತ್ತು. ಇದೀಗ ಎಂ.ಟೆಕ್ ಪಧವೀಧರೆಯೊಬ್ಬಳು ಕೂಡಾ ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ತ್ಯಜಿಸಿ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಅಸ್ಸಾಂನ ರಂಗಿಯಾ ಮೂಲದ ರೆಜಿನಾ ಬೇಗಂ ಎಂಬ ಯುವತಿ ತನ್ನ ಬಯಕೆಯಂತೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಇಲ್ಲಿನ ನಾಗಾವ್‌ನ ಶ್ರೀ ಶ್ರೀ ಜಖಲಬಂಧಿ ದೇವಾಲಯದಲ್ಲಿ ಪುರೋಹಿತರ ಸಮ್ಮುಖದಲ್ಲಿ ರೆಜಿನಾ ಪೂಜಾ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾಳೆ. ಜುಗಲ್ ಚಂದ್ರ ದೇವ್ ಗೋಸ್ವಾಮಿ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯದಲ್ಲಿ ರೆಜಿನಾ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ರೆಜಿನಾ ಬೇಗಂ ಸನಾತನ ಧರ್ಮಕ್ಕೆ ಮತಾಂತರಗೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಳು. ಅದರಂತೆ ಸಪ್ಟೆಂಬರ್ 23 ರಂದು ಜುಗಲ್ ಚಂದ್ರ ದೇವ್ ಗೋಸ್ವಾಮಿ ಮಾರ್ಗದರ್ಶನದಲ್ಲಿ ಆಕೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಮತ್ತು ತನ್ನ ಹೆಸರನ್ನು ಅನನ್ಯ ಡಿಯೋರಿ ಎಂದು ಬದಲಿಸಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Regina Begum, an https://t.co/QMTfTv0hXw graduate, converted from Islam to Hinduism & adopted name Ananya Deori.
She was initiated into Sanatan Dharma at Jakhalabandha Satra, Nagaon, Assam.
1,000 youths were initiated into Hinduism, with thousands more applying for initiation. pic.twitter.com/MQyfqGj6qf
— Nandan Pratim Sharma Bordoloi (@NANDANPRATIM) September 29, 2024
ನಂದನ್ ಪ್ರತಿಮ್ ಶರ್ಮ (NANDANPRATIM) ಶರ್ಮಾ ಎಂಬವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮುಸ್ಲಿಂ ಯುವತಿಯೊಬ್ಬಳು ಪುರೋಹಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮವನ್ನು ಸ್ವೀಕಾರ ಮಾಡುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಬ್ಬಬ್ಬಾ ಕೇವಲ 3 ಗಂಟೆ ಕೆಲಸ ಮಾಡಿ 4 ಲಕ್ಷ ರೂ. ಸಂಪಾದಿಸಿದ ಮಹಿಳೆ; ವೈರಲ್ ಆಯ್ತು ಪೋಸ್ಟ್
ಸೆಪ್ಟೆಂಬರ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸನಾತನ ಧರ್ಮಕ್ಕೆ ಸ್ವಾಗತʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಒಳ್ಳೆಯ ನಡೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ