Viral: ಅಬ್ಬಬ್ಬಾ ಕೇವಲ 3 ಗಂಟೆ ಕೆಲಸ ಮಾಡಿ 4 ಲಕ್ಷ ರೂ. ಸಂಪಾದಿಸಿದ ಮಹಿಳೆ; ವೈರಲ್‌ ಆಯ್ತು ಪೋಸ್ಟ್‌

ಹೆಚ್ಚಿನವರು ತಿಂಗಳಿಗೆ 15 ರಿಂದ 30 ಸಾವಿರ ಸಂಬಳ ಪಡೆಯಲು 8-9 ಗಂಟೆಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದರೇ ಇಲ್ಲೊಬ್ರು ಮಹಿಳೆ ತಮ್ಮ ಸ್ಮಾರ್ಟ್‌ ವರ್ಕ್‌ನಿಂದ ಕೇವಲ 3 ಗಂಟೆಗೆ ಬರೋಬ್ಬರಿ 4 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಮಹಿಳೆಯೇ ಹೇಳಿಕೊಂಡಿದ್ದು, ಈ ಪೋಸ್ಟ್‌ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಅಬ್ಬಬ್ಬಾ ಕೇವಲ 3 ಗಂಟೆ ಕೆಲಸ ಮಾಡಿ 4 ಲಕ್ಷ ರೂ. ಸಂಪಾದಿಸಿದ ಮಹಿಳೆ; ವೈರಲ್‌ ಆಯ್ತು ಪೋಸ್ಟ್‌
ವೈರಲ್​​​ ಪೋಸ್ಟ್​​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2024 | 11:43 AM

ಬಹುತೇಕ ಹೆಚ್ಚಿನವರು 8-9 ಗಂಟೆಗಳ ಕಾಲ ಕಷ್ಟಪಟ್ಟು ದುಡಿದು ತಿಂಗಳಿಗೆ ಸುಮಾರು 15 ರಿಂದ 30 ಸಾವಿರದಷ್ಟು ಸಂಪಾದನೆ ಮಾಡಿದರೆ, ಇನ್ನೂ ಕೆಲವರು ತಮ್ಮ ಸ್ಮಾರ್ಟ್‌ ವರ್ಕ್‌ನಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯುತ್ತಾರೆ. ಅದೇ ರೀತಿ ಇಲ್ಲೊಬ್ರು ಮಹಿಳೆ ತಮ್ಮ ಸ್ಮಾರ್ಟ್‌ ವರ್ಕ್‌ನಿಂದ ಕೇವಲ ಮೂರು ಗಂಟೆಯಲ್ಲಿ ಬರೋಬ್ಬರಿ 4 ಲಕ್ಷ ರೂ. ಗಳನ್ನು ಸಂಪಾದನೆ ಮಾಡಿದ್ದಾರೆ. ತನ್ನ ಸಂಪಾದನೆಯ ಬಗ್ಗೆ ಸ್ವತಃ ಮಹಿಳೆಯೇ ಹೇಳಿಕೊಂಡಿದ್ದು, ಈ ಪೋಸ್ಟ್‌ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಯಾವುದೇ ವ್ಯಾಪಾರ ಅಥವಾ ಸಂಸ್ಥೆಯನ್ನು ಬೆಳೆಸುವಲ್ಲಿ ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌, ಸ್ಟ್ರಾಟರ್ಜಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಲ್ಲೊಬ್ರು ಮಹಿಳೆ ಕೂಡಾ ತಮ್ಮ ಕ್ಲೈಂಟ್‌ ಒಬ್ಬರಿಗೆ ಸೋಷಿಯಲ್‌ ಮೀಡಿಯಾ ಸ್ಟ್ರಾಟರ್ಜಿ ಹೇಳಿಕೊಟ್ಟಿದ್ದಕ್ಕೆ, ಅವರು ಬರೋಬ್ಬರಿ 4 ಲಕ್ಷ ರೂ. ಸಂಬಳವನ್ನು ಪಡೆದುಕೊಂಡಿದ್ದಾರೆ. ಶ್ವೇತಾ ಕುಕ್ರೇಜಾ (ShwetaKukreja_) ಎಂಬವರು 3 ಗಂಟೆಗಳ ಕೆಲಸಕ್ಕೆ ಬರೋಬ್ಬರಿ 4 ಲಕ್ಷದ 40 ಸಾವಿರ ರೂ. ಸಂಬಳವನ್ನು ಪಡೆದುಕೊಂಡಿದ್ದಾರೆ. ಹಣ ಜಮೆಯಾದ ಸ್ಕ್ರೀನ್‌ಶಾಟ್‌ ಫೋಟೋವನ್ನು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ

ಈ ತಿಂಗಳು ನಾನು ಕ್ಲೈಂಟ್‌ ಒಬ್ಬರಿಂದ $5,2000 ಡಾಲರ್‌ ಅಂದ್ರೆ ಸುಮಾರು 4,40,000 ರೂ. ಗಳನ್ನು ಪಡೆದುಕೊಂಡೆ. ಕೇವಲ 3 ಗಂಟೆಗಳ ಸಮಯದಲ್ಲಿ ಅವರು ಸೋಷಿಯಲ್‌ ಮೀಡಿಯಾ ಸ್ಟ್ರಾಟರ್ಜಿ ಸಲಹೆ ಹೇಳಿಕೊಟ್ಟಿದ್ದಕ್ಕಾಗಿ ಕ್ಲೈಂಟ್‌ 4 ಲಕ್ಷ ರೂ. ಸಂಭಾವನೆಯನ್ನು ನೀಡಿದ್ದಾರೆ. ಈ ರೀತಿಯ ದಿನಗಳು ಕೆಲಸಗಳನ್ನು ಹೆಚ್ಚು ತೃಪ್ತಿಕರವಾಗಿಸುತ್ತದೆʼ ಎಂದು ಹೆಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಯರ್‌ಗಾಗಿ 3 ತಿಂಗಳ ಮಗುವನ್ನೇ ಮಾರಿದ ದಂಪತಿ

ಸೆಪ್ಟೆಂಬರ್‌ 27 ಎಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಒಬ್ಬ ಬಳಕೆದಾರರು ಇದನ್ನೆಲ್ಲಾ ನೋಡಿದಾಗ ಕಾರ್ಪೊರೇಟ್‌ ಕಂಪೆನಿ ಕೆಲಸ ಬಿಟ್ಟು ನಾನು ಕೂಡಾ ಇದೇ ಕೆಲಸವನ್ನು ಮಾಡಬೇಕೆನಿಸುತ್ತದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದಕ್ಕೆ ಹೇಳೋದು ರಿಯಲ್‌ ಸಕ್ಸಸ್‌ ಅಂತಾ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ