Viral: ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮಗ; ಖುಷಿಯಲ್ಲಿ ಮಗನಿಗೆ ದುಬಾರಿ ಐಫೋನ್ ಗಿಫ್ಟ್ ನೀಡಿದ ಬಡ ತಂದೆ
ಅಪ್ಪಂದಿರಿಗೆ ತಮ್ಮ ಮಕ್ಕಳು ಪುಟ್ಟ ಸಾಧನೆ ಮಾಡಿದರೂ ಅದೇನೋ ದೊಡ್ಡ ಹೆಮ್ಮೆ. ನನ್ನ ಮಗ ಏನೋ ಸಾಧನೆ ಮಾಡಿದ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ರು ಬಡ ತಂದೆ ತಮ್ಮ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದನೆಂಬ ಹೆಮ್ಮೆ ಮತ್ತು ಖುಷಿಗೆ ಆತನಿಗೆ 1.80 ಲಕ್ಷ ಬೆಲೆಯ ಐಫೋನ್ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನಿನ್ನಂತ ಅಪ್ಪ ಇಲ್ಲ ಎಂದಿದ್ದಾರೆ ನೆಟ್ಟಿಗರು.
ಮುಖದಲ್ಲಿ ಎಷ್ಟೇ ಕೋಪ ಭಾವ ತೋರಿಸಿದ್ರೂ ಮನಸ್ಸಲ್ಲಿ ಮಗನ ಬಗ್ಗೆ ಬೆಟ್ಟದಷ್ಟು ಪ್ರೀತಿ ಹೊಂದಿರುವ ಜೀವ ಎಂದರೆ ಅದು ಅಪ್ಪ. ತಂದೆಯಾದವನು ತನ್ನ ಮಕ್ಕಳಿಗೆ ಬೆನ್ನೆಲುಬಾಗಿ ನಿಂತು ನನ್ನ ಮಗ/ಮಗಳು ಜಗವೇ ಮೆಚ್ಚುವಂತಹ ಸಾಧನೆ ಮಾಡಬೇಕೆಂದು ಬಯಸುತ್ತಾರೆ. ಏನೋ ಪುಟ್ಟ ಸಾಧನೆ ಮಾಡಿದರೂ ಕೂಡಾ ತಂದೆ ಬಹಳ ಹೆಮ್ಮೆಯಿಂದ ಆ ವಿಚಾರವನ್ನು ಹೇಳಿಕೊಳ್ಳುತ್ತಾರೆ. ಮತ್ತು ಅದೇ ಖುಷಿಯಲ್ಲಿ ಮಕ್ಕಳಿಗೆ ಪ್ರೀತಿಯ ಉಡುಗೊರೆಯನ್ನು ಸಹ ನೀಡುತ್ತಾರೆ. ಅದೇ ರೀತಿ ಇಲ್ಲೊಬ್ರು ಬಡ ತಂದೆ ತಮ್ಮ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದನೆಂಬ ಹೆಮ್ಮೆ ಮತ್ತು ಖುಷಿಗೆ ಆತನಿಗೆ 1.80 ಲಕ್ಷ ಬೆಲೆಯ ಐಫೋನ್ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಗುಜರಿ ಪ್ಯಾಪಾರಿಯಾಗಿ ಕೆಲಸ ಮಾಡಿ ಜೀವನ ನಡೆಸುವ ಬಡ ವ್ಯಕ್ತಿಯೊಬ್ಬರು ತನ್ನ ಮಗ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ಪಾಸ್ ಆಗಿದ್ದಾನೆ ಎಂಬ ಖುಷಿಗೆ ಆತನಿಗೆ 1.80 ಲಕ್ಷ ಬೆಲೆಯ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಈ ಬಡ ತಂದೆಯ ಆಸೆಯಂತೆ ಮಗ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದು, ಇದಕ್ಕೆ ಪ್ರತಿಯಾಗಿ ಮಗನಿಗೆ ಏನಾದ್ರೂ ಉಡುಗೊರೆ ನೀಡ್ಬೇಕಲ್ವಾ ಎಂದು ಐಫೋನ್ ಗಿಫ್ಟ್ ನೀಡಿದ್ದಾರೆ. ಹೌದು ತನಗಾಗಿ 85 ಸಾವಿರ ಮೌಲ್ಯದ ಐಪೋನ್ ಮತ್ತು ಮಗನಿಗಾಗಿ 1.80 ಲಕ್ಷದ ಐಫೋನ್ ಖರೀದಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Father’s Priceless Gift: Junk Dealer Gifts Multiple Iphones Worth ₹ 1.80 Lacs to Son For Top Board Results pic.twitter.com/brrSI04qxf
— Ghar Ke Kalesh (@gharkekalesh) September 27, 2024
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಡ ವ್ಯಕ್ತಿಯೊಬ್ಬರು ಯುವಕರು ಕೇಳಿದ್ದಕ್ಕೆ ತಮ್ಮ ಬಳಿ ಇದ್ದ ಐಫೋನ್ ತೋರಿಸುತ್ತಿರುವ ದೃಶ್ಯವನ್ನು ಕಾಣಬಹುದು. ನಾನು ಗುಜರಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದು, ನನ್ನ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ಅವನಿಗೆ 1.80 ಲಕ್ಷ ಮೌಲ್ಯದ ಐಫೋನ್ 16 ಫೋನ್ ಉಡುಗೊರೆಯಾಗಿ ನೀಡಿದ್ದೇನೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕಡ್ಲೆಪುರಿ ಹಂಚಿದ ಹಾಗೆ ಫ್ರೀಯಾಗಿ ʼಐಪೋನ್ 16 ಪ್ರೋ ಮ್ಯಾಕ್ಸ್ʼ ಮೊಬೈಲ್ ಹಂಚಿದ ವ್ಯಕ್ತಿ
ಸೆಪ್ಟೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಗನ ಸಾಧನೆ ಬಗ್ಗೆ ಈ ತಂದೆ ಎಷ್ಟು ಹೆಮ್ಮೆಯಿಂದ ಹೇಳುತ್ತಿದ್ದಾರೆ ನೋಡಿ… ಈ ಖುಷಿ ಸಂತೋಷ ಐಫೋನ್‌ಗಿಂತಲೂ ದುಬಾರಿಯಾದದ್ದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರನ್ನು ಪ್ರಶಂಸಿಸುತ್ತೇನೆ ಆದ್ರೆ ಐಫೋನ್ ಬದಲು ಮಗನ ಅಧ್ಯಯನಕ್ಕೆ ಉಪಯೋಗವಾಗುವಂತಹ ಉಡುಗೊರೆ ಕೊಡಬಹುದಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ