Viral: ಇದಪ್ಪಾ ಕ್ರಿಯೆಟಿವಿಟಿ ಅಂದ್ರೆ, ವೈರಲ್ ಆಗುತ್ತಿದೆ ಬೆಂಗಳೂರಿನ 3D ಬಿಲ್‌ಬೋರ್ಡ್
ಬೇರೆ ಬೇರೆ ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಕ್ರಿಯೆಟಿವ್ ಜಾಹೀರಾತುಗಳನ್ನು ಟಿವಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನೀಡುತ್ತಿರುತ್ತಾರೆ. ಆದ್ರೆ ಇಲ್ಲೊಂದು ಬೆಂಗಳೂರಿನ ರೆಸ್ಟೋರೆಂಟ್ ರಸ್ತೆ ಬದಿಯ ಜಾಹೀರಾತು ಬಿಲ್ ಬೋರ್ಡ್‌ನಲ್ಲಿಯೇ ವಿಭಿನ್ನ ಅಡ್ವರ್‌ಟೈಸ್‌ಮೆಂಟ್ ನೀಡಿದೆ. ಈ ಕ್ರಿಯೇಟಿವ್ 3D ಅಡ್ವರ್‌ಟೈಸ್‌ಮೆಂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪ್ರತಿಯೊಂದು ಬ್ರಾಂಡ್, ಕಂಪೆನಿ ಕೂಡಾ ತಮ್ಮ ಉತ್ಪನ್ನಗಳು ಮತ್ತು ತಮ್ಮ ಕಂಪೆನಿಯ ಬಗ್ಗೆ ಪ್ರಚಾರ ಮಾಡಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ಟಿ.ವಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಭಿನ್ನ ವಿಭಿನ್ನ ಜಾಹೀರಾತುಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ರೆಸ್ಟೋರೆಂಟ್ ರಸ್ತೆ ಬದಿಯ ಜಾಹೀರಾತು ಬಿಲ್ ಬೋರ್ಡ್‌ನಲ್ಲಿಯೇ ವಿಭಿನ್ನ ಜಾಹೀರಾತನ್ನು ನೀಡಿದೆ. ಈ ಕ್ರಿಯೆಟಿವ್ 3D ಅಡ್ವರ್‌ಟೈಸ್‌ಮೆಂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೆಲವರು ಇದು ಎಐ ವಿಡಿಯೋ ಎಂದು ಹೇಳಿದ್ರೆ, ಇನ್ನೂ ಕೆಲವರು ಇದು ನಕಲಿ ಎಂದು ಹೇಳಿದ್ದಾರೆ.
ನಮ್ಮ ಬೆಂಗಳೂರಿನ ʼಬೆಂಗಳೂರು ತಿಂಡೀಸ್ʼ ರೆಸ್ಟೋರೆಂಟ್ ಈ ಕ್ರಿಯೇಟಿವ್ ಜಾಹೀರಾತನ್ನು ನೀಡಿದ್ದು, ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿವೆ. ವೈರಲ್ ವಿಡಿಯೋದಲ್ಲಿ ರಸ್ತೆಬದಿಯಲ್ಲಿನ 3D ಬಿಲ್ ಬೋರ್ಡ್‌ನಲ್ಲಿ ಹೊಟೇಲ್ ಕೆಲಸಗಾರನೊಬ್ಬ ಬಿಸಿ ಬಿಸಿ ಚಹಾವನ್ನು ಗಾಜಿನ ಲೋಟಕ್ಕೆ ಸುರಿದು ಸರ್ವ್ ಮಾಡುವಂತಹ ದೃಶ್ಯವನ್ನು ಕಾಣಬಹುದು. ಕೆಲವರು ಇದೆಲ್ಲಾ ವಿಶುವಲ್ ಇಫೆಕ್ಟ್ (VFX) ಮತ್ತು ಕಂಪ್ಯೂಟರ್ ಜನರೇಟೆಡ್ ಇಮೇಜರಿ (CGI) ತಂತ್ರಜ್ಞಾನದಿಂದ ಮಾಡಿದ ವಿಡಿಯೋ ಅಂತ ಹೇಳಿದ್ರೆ ಕೆಲವರು ಇದನ್ನು ನೋಡಿದಾಗ ನಿಜ ಜಾಹೀರಾತಿನಂತೆ ಕಾಣುತ್ತಿಲ್ಲ ಇದು ನಕಲಿ ವಿಡಿಯೋ ಇದ್ದಂಗೆ ಕಾಣುತ್ತೆ ಎಂದು ಹೇಳಿದ್ದಾರೆ. ಇನ್ನೂ ಕೆಲವರಂತೂ ಈ ಜಾಹೀರಾತು ತುಂಬಾನೇ ಅದ್ಭುತವಾಗಿದೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು ರೈಲ್ವೆ ಸೇತುವೆಯಲ್ಲಿ ನಿಂತಿದ್ದ ರೈಲಿನಡಿ ಹೋಗಿ ದುರಸ್ತಿ ಕಾರ್ಯ ಮಾಡಿದ ಲೋಕೋ ಪೈಲಟ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
Bengalorethindies ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 50 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಪರಿಕಲ್ಪನೆ ತುಂಬಾನೇ ಇಷ್ಟವಾಯಿತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಅದ್ಭುತವಾಗಿದೆ. ಆದ್ರೆ ಇದು ನಕಲಿಯೇ ಅಸಲಿಯೇ ಹೇಳುವಿರಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ