Viral: ಪ್ರಾಣ ಪಣಕ್ಕಿಟ್ಟು ರೈಲ್ವೆ ಸೇತುವೆಯಲ್ಲಿ ನಿಂತಿದ್ದ ರೈಲಿನಡಿ ಹೋಗಿ ದುರಸ್ತಿ ಕಾರ್ಯ ಮಾಡಿದ ಲೋಕೋ ಪೈಲಟ್

ಪ್ರಾಣದ ಹಂಗು ತೊರೆದು ಕರ್ತವ್ಯ ಪಾಲನೆ ಮಾಡುವ ಹಲವರಿದ್ದಾರೆ. ಕೆಲ ದಿನಗಳ ಹಿಂದೆ ಲೈನ್‌ಮ್ಯಾನ್‌ ಒಬ್ಬರು ಈಜಿಗೊಂಡು ಹೊಳೆ ದಾಟಿ ವಿದ್ಯುತ್‌ ಸಮಸ್ಯೆಯನ್ನು ಬಗೆ ಹರಿಸಿದ ಸುದ್ದಿಯೊಂದು ಸಖತ್‌ ವೈರಲ್‌ ಆಗಿತ್ತು. ಇದೀಗ ಇಲ್ಲೊಬ್ರು ಸಹಾಯಕ ಲೋಕೋ ಪೈಲಟ್‌ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೈಲ್ವೆ ಸೇತುವೆಯ ಮೇಲೆ ನಿಂತಿದ್ದ ರೈಲಿನಡಿ ಹೋಗಿ ಏರ್‌ ಲೀಕೇಜ್‌ ಸಮಸ್ಯೆಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 30, 2024 | 2:44 PM

ಲೋಕೋ ಪೈಲಟ್‌ಗಳು ತಮ್ಮ ಕರ್ತವ್ಯದ ಜೊತೆಗೆ ಸಾಹಸ, ಹೃದಯವಂತಿಕೆಯ ಕಾರಣದಿಂದಲೂ ಆಗಾಗ್ಗೆ ಗಮನ ಸೆಳೆಯುತ್ತಿರುತ್ತಾರೆ. ಈ ಹಿಂದೆ ಲೋಕೋ ಲೈಲಟ್‌ ಒಬ್ಬರು ಸೇತುವೆಯಲ್ಲಿ ನಿಂತಿದ್ದ ರೈಲಿನಡಿ ತೆವಳುತ್ತಾ ಹೋಗಿ ದುರಸ್ತಿ ಕಾರ್ಯ ಮಾಡಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಸಹಾಯಕ ಲೋಕೋ ಪೈಲಟ್‌ ಒಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೈಲ್ವೆ ಸೇತುವೆಯ ಮೇಲೆ ನಿಂತಿದ್ದ ರೈಲಿನಡಿ ಹೋಗಿ ರೈಲಿನ ಏರ್‌ ಲೀಕೇಜ್‌ ಸಮಸ್ಯೆಯನ್ನು ಸರಿಪಡಿಸಿ, ಸುಗಮ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಇವರ ಈ ಕಾರ್ಯಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಘಟನೆ ಸೆಪ್ಟೆಂಬರ್‌ 26 ರಂದು ನಡೆದಿದ್ದು, ಸಹಾಯಕ ಲೋಕೋ ಪೈಲಟ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೈಲ್ವೆ ಸೇತುವೆಯ ಮೇಲೆ ನಿಂತಿದ್ದ ರೈಲಿನಡಿ ಹೋಗಿ ಏರ್‌ ಲೀಕೇಜ್‌ ಸಮಸ್ಯೆಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬ್ರಹ್ಮಪುತ್ರ ಮೇಲ್ (1567) ರೈಲು ದೆಹಲಿಯಿಂದ ಕಾಮಖ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಸ್ಸಾಂನ ರಂಗಿಯಾ ಜಂಕ್ಷನ್‌ ಬಳಿಯ ಬಿಜ್ನಿ ರೈಲು ನಿಲ್ದಾಣ ಮತ್ತು ಪಾಟೀಲದಾಹ ನಡುವಿನ ಸೇತುವೆ ಸಂಖ್ಯೆ 456 ರಲ್ಲಿ ಏರ್‌ ಲೀಕೇಜ್‌ ಸಮಸ್ಯೆಯಿಂದ ಆ ರೈಲು ನಿಂತಿತು. ಈ ಸಮಸ್ಯೆಯನ್ನು ಸರಿಪಡಿಸಲು ಸಹಾಯಕ ಲೋಕೋ ಪೈಲಟ್‌ ರಾಮ್‌ಜಿ ಕುಮಾರ್‌ ಎಂಬವರು ಜೀವದ ಹಂಗು ತೊರೆದು ಸೇತುವೆಯ ಕಿರಿದಾದ ಜಾಗದಲ್ಲಿ ಹೋಗಿ ಸಮಸ್ಯೆಯನ್ನು ಸರಿಪಡಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ವೈದ್ಯೋ ನಾರಾಯಣ ಹರಿಃ ಉಸಿರು ನಿಂತ ನವಜಾತ ಶಿಶುವಿಗೆ ಮರು ಜೀವ ನೀಡಿದ ವೈದ್ಯ

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸಹಾಯಕ ಲೋಕೋ ಪೈಲಟ್‌ ಪ್ರಾಣದ ಹಂಗು ತೊರೆದು ರೈಲಿನ ಏರ್‌ ಲೀಕೇಜ್‌ ಸಮಸ್ಯೆಯನ್ನು ಸರಿಪಡಿಸಿ ಸೇತುವೆಯ ಕಿರಿದಾದ ಜಾಗದಲ್ಲಿ ಮೆಲ್ಲಗೆ ಬಂದು ರೈಲನ್ನು ಏರುವ ಸಾಹಸಮಯ ದೃಶ್ಯವನ್ನು ಕಾಣಬಹುದು. ಇವರ ಈ ಕಾರ್ಯಕ್ಕೆ ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Mon, 30 September 24