Viral: ವೈದ್ಯೋ ನಾರಾಯಣ ಹರಿಃ ಉಸಿರು ನಿಂತ ನವಜಾತ ಶಿಶುವಿಗೆ ಮರು ಜೀವ ನೀಡಿದ ವೈದ್ಯ

ವೈದ್ಯರೆಂದರೆ ದೇವರ ಸಮಾನ ಎಂಬ ಮಾತಿದೆ. ಕೆಲವೊಂದು ಘಟನೆಗಳನ್ನು ನೋಡಿದಾಗ ವೈದ್ಯರು ನಿಜಕ್ಕೂ ದೇವರ ಪ್ರತಿರೂಪ ಅಂತಾನೇ ಅನ್ನಿಸುತ್ತೆ. ಇದಕ್ಕೆ ಸೂಕ್ತ ಉದಾಹರಣೆಯಂತಿರುವ ಮತ್ತೊಂದು ಘಟನೆ ಇದೀಗ ನಡೆದಿದ್ದು, ವೈದ್ಯರೊಬ್ಬರು ಉಸಿರು ನಿಂತು ಹೋಗಿದ್ದ ನವಜಾತ ಶಿಶುವಿಗೆ ಉಸಿರು ನೀಡುವ ಮೂಲಕ ಮರು ಜೀವವನ್ನೇ ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ವೈದ್ಯೋ ನಾರಾಯಣ ಹರಿಃ ಉಸಿರು ನಿಂತ ನವಜಾತ ಶಿಶುವಿಗೆ ಮರು ಜೀವ ನೀಡಿದ ವೈದ್ಯ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 30, 2024 | 12:01 PM

ವೈದ್ಯೋ ನಾರಾಯಣ ಹರಿ ಎಂಬ ಮಾತೊಂದಿದೆ. ಅಂದರೆ ವೈದ್ಯರು ದೇವರಿಗೆ ಸಮಾನ ಎಂದು. ಡಾಕ್ಟರ್ಸ್‌ ದೇವರಂತೆ ಬಂದು ಜೀವಗಳನ್ನು ಕಾಪಾಡಿದ ಅದೆಷ್ಟೋ ಘಟನೆಗಳನ್ನು ನೋಡಿದಾಗ ನಿಜಕ್ಕೂ ವೈದ್ಯರುಗಳು ದೇವರ ಪ್ರತಿರೂಪ ಅಂತಾನೇ ಅನ್ನಿಸುತ್ತೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ವೈದ್ಯರೊಬ್ಬರು ಉಸಿರು ನೀಡುವ ಮೂಲಕ ನವಜಾತ ಶಿಶುವಿಗೆ ಮರು ಜೀವವನ್ನೇ ನೀಡಿದ್ದಾರೆ. ಹೌದು ಉಸಿರು ನಿಂತು ಹೋದ ಮಗುವಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಿ ವೈದ್ಯರೊಬ್ಬರು ಆ ಮಗುವಿಗೆ ಮರು ಜೀವವನ್ನು ತುಂಬಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ವೈದ್ಯರ ಈ ಕಾರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Educativefeed ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವೈದ್ಯರೊಬ್ಬರು ನವಜಾತ ಶಿಶುವನ್ನು ಕೈಯಲ್ಲಿ ಹಿಡಿದುಕೊಂಡು ಆಪರೇಷನ್‌ ಥಿಯೇಟರ್‌ನಿಂದ ಹೊರ ಬರುತ್ತಿರುವ ದೃಶ್ಯವನ್ನು ಕಾಣಬಹುದು. ಮಗುವಿನ ಉಸಿರು ನಿಂತಿದ್ದರಿಂದ ಈ ಮಗುವನ್ನು ಹೇಗಾದರೂ ಬದುಕಿಸಲೇಬೇಕು ಎಂದು ಪಣತೊಟ್ಟು ಬಂದ ಆ ವೈದ್ಯ ಕೆಲವು ವೈದ್ಯಕೀಯ ಸಾಧನಗಳ ಸಹಾಯದಿಂದ ಮಗುವಿಗೆ ಉಸಿರು ತುಂಬುವ ಪ್ರಯತ್ನವನ್ನು ಮಾಡುತ್ತಾರೆ. ಹೀಗೆ ಉಸಿರು ನಿಂತು ಹೋದ ನವಜಾತ ಶಿಶುವಿಗೆ ಉಸಿರು ನೀಡುವ ಮೂಲಕ ಆ ಮಗುವಿಗೆ ವೈದ್ಯರು ಮರು ಜೀವವನ್ನೇ ನೀಡಿದ್ದಾರೆ.

ಇದನ್ನೂ ಓದಿ: ಗೆಳೆಯರ ಕ್ವಾಟ್ಲೆ… ಮಲಗಿದ್ದ ಸ್ನೇಹಿತನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹುಟ್ಟುಹಬ್ಬ ಆಚರಿಸಿದ ಯುವಕರು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರು ವೈದ್ಯರಲ್ಲ, ನಿಜವಾದ ದೇವರುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವೈದ್ಯರಿಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಈ ಡಾಕ್ಟರ್‌ ಆ ಪುಟ್ಟ ಮಗುವಿಗೆ ಮರು ಜನ್ಮವನ್ನೇ ನೀಡಿದ್ದಾರೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ