Viral: ಪೆಟ್ರೋಲ್ ಬಂಕ್‌ನಲ್ಲಿ ಮೊಬೈಲ್ ಬಳಸ್ಬೇಡಿ ಅಂತ ಹೇಳಿದ್ದಕ್ಕೆ ಗುಂಪುಕಟ್ಟಿಕೊಂಡು ಬಂದು ಕೆಲಸಗಾರನ ಮೇಲೆ ಮಹಿಳೆಯ ಗೂಂಡಾಗಿರಿ
ಪೆಟ್ರೋಲ್ ಬಂಕ್‌ಗಳಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಬೋರ್ಡ್ ಹಾಕಿದ್ರೂ, ಈ ಬಗ್ಗೆ ತಿಳಿ ಹೇಳಿದ್ರೂ ಕೆಲವರು ಕ್ಯಾರೇ ಎನ್ನದೇ ಪೆಟ್ರೋಲ್ ಬಂಕ್‌ನಲ್ಲೂ ಕೂಡಾ ಮೊಬೈಲ್ ಯೂಸ್ ಮಾಡ್ತಾರೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಕೂಡಾ ಮೊಬೈಲ್ ಬಳಕೆ ಮಾಡಿದ್ದು, ದಯವಿಟ್ಟು ಇಲ್ಲೆಲ್ಲಾ ಮೊಬೈಲ್ ಬಳಸ್ಬೇಡಿ ಎಂದು ಅಲ್ಲಿನ ಕೆಲಸಗಾರ ತಿಳಿ ಹೇಳಿದ್ದಕ್ಕೆ, ಮಹಿಳೆ ಗುಂಪುಕಟ್ಟಿಕೊಂಡು ಬಂದು ಪೆಟ್ರೋಲ್ ಬಂಕ್ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪೆಟ್ರೋಲ್ ಬಂಕ್‌ಗಳಲ್ಲಿ ಮೊಬೈಲ್ ಬಳಸುವ ಹಾಗಿಲ್ಲ ಯಾಕಂದ್ರೆ ಇದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೌದು ಮೊಬೈಲ್ ಫೋನ್‌ಗಳಿಂದ ಬರುವ ವಿದ್ಯುತ್ಕಾಂತೀಯ ತರಂಗಗಳು ವಿದ್ಯುತ್ ಪ್ರವಾಹವನ್ನು ಪ್ರಚೋದಿಸಬಹುದು ಮತ್ತು ಹತ್ತಿರದ ಲೋಹದ ವಾಹಕಗಳಲ್ಲಿ ವಿದ್ಯುತ್ ಕಿಡಿಯನ್ನು ಉಂಟು ಮಾಡಬಹುದು. ಇದರಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಇದೇ ಕಾರಣದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಫೋನ್ ಬಳಸಬಾರದು ಎಂದು ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ. ಆದ್ರೆ ಇಲ್ಲೊಬ್ಳು ಮಹಿಳೆ ಕ್ಯಾರೇ ಅನ್ನದೆ ಮೊಬೈಲ್ ಫೋನ್ ಯೂಸ್ ಮಾಡಿದ್ದು, ದಯವಿಟ್ಟು ಇಲ್ಲೆಲ್ಲಾ ಮೊಬೈಲ್ ಬಳಸ್ಬೇಡಿ ಎಂದು ಸುರಕ್ಷತೆಯ ದೃಷ್ಟಿಯಿಂದ ಅಲ್ಲಿನ ಕೆಲಸಗಾರ ತಿಳಿ ಹೇಳಿದ್ದಕ್ಕೆ, ಮಹಿಳೆ ಗುಂಪುಕಟ್ಟಿಕೊಂಡು ಬಂದು ಪೆಟ್ರೋಲ್ ಬಂಕ್ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಮಹಿಳೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದ್ದು, ದಯವಿಟ್ಟು ಇಲ್ಲೆಲ್ಲಾ ಮೊಬೈಲ್ ಬಳಸ್ಬೇಡಿ ಎಂದು ಸುರಕ್ಷತೆಯ ದೃಷ್ಟಿಯಿಂದ ಪೆಟ್ರೋಲ್ ಬಂಕ್ ಕೆಲಸಗಾರ ಮಹಿಳೆಯೊಬ್ಬಳಿಗೆ ಬುದ್ಧಿ ಹೇಳಿದ್ದಕ್ಕೆ ಆಕೆ ಗುಂಪು ಕಟ್ಟಿಕೊಂಡು ಬಂದು ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Kalesh b/w a Petro Pump Worker and a Lady after he Denied to use Phone At Petrol Pump (That lady comes up with some guys and beath up the worker ) Ahmedabad GJ pic.twitter.com/rQAete0jjL
— Ghar Ke Kalesh (@gharkekalesh) September 28, 2024
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಮೊಬೈಲ್ ಯೂಸ್ ಮಾಡ್ತಾ ನಿಂತಿದ್ದ ಮಹಿಳೆಗೆ ಅಲ್ಲಿನ ಕೆಲಸಗಾರ ಮೊಬೈಲ್ ಬಳಸ್ಬೇಡಿ ಎಂದು ಸನ್ನೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ಒಂದಷ್ಟು ಜನರ ಗುಂಪು ಕಟ್ಟಿಕೊಂಡು ಬಂದು ಅಹಂಕಾರಿ ಮಹಿಳೆ ಅಮಾಯಕ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದಾಳೆ.
ಇದನ್ನೂ ಓದಿ: ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೆಪ್ಟೆಂಬರ್ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲ ಆತ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾಕ್ಕಾಗಿ ಈ ಮಹಿಳೆ ಏಕೆ ಹಲ್ಲೆನಡೆಸಬೇಕಿತ್ತುʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಮೂರ್ಖ ಮಹಿಳೆ ಮತ್ತು ಆಕೆಯನ್ನು ಬೆಂಬಲಿಸುತ್ತಾ ಬಂದ ಎಲ್ಲರನ್ನೂ ಜೈಲಿಗಟ್ಟಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ