Viral: ಗೆಳೆಯರ ಕ್ವಾಟ್ಲೆ… ಮಲಗಿದ್ದ ಸ್ನೇಹಿತನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹುಟ್ಟುಹಬ್ಬ ಆಚರಿಸಿದ ಯುವಕರು

ಸ್ನೇಹಿತರೆಲ್ಲರೂ ಜೊತೆಗಿದ್ದಾಗ ಮಾಡುವ ತುಂಟಾಟ, ಕಿತಾಪತಿಗಳು ಒಂದೆರಡಲ್ಲ. ಆದ್ರೆ ಕೆಲವೊಂದು ಬಾರೀ ಈ ಕ್ವಾಟ್ಲೆಗಳು ಅತಿರೇಕವಾಗಿರುತ್ತದೆ. ಇದೀಗ ಅಂತಹದ್ದೇ ಕಿತಾಪತಿಯ ವಿಡಿಯೋವೊಂದು ವೈರಲ್‌ ಆಗಿದ್ದು, ಹುಟ್ಟು ಹಬ್ಬದ ದಿನ ಗಾಢ ನಿದ್ರೆಯಲ್ಲಿ ಮಲಗಿದ್ದ ಯುವಕನ ಕೋಣೆಗೆ ಬಂದ ಸ್ನೇಹಿತರು ಆ ಯುವಕನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹುಟ್ಟು ಹಬ್ಬಕ್ಕೆ ವಿಶ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Viral: ಗೆಳೆಯರ ಕ್ವಾಟ್ಲೆ… ಮಲಗಿದ್ದ ಸ್ನೇಹಿತನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹುಟ್ಟುಹಬ್ಬ ಆಚರಿಸಿದ ಯುವಕರು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Sep 29, 2024 | 5:20 PM

ಫ್ರೆಂಡ್ಸ್‌ ಅಂದ್ರೆನೇ ಹಾಗೆ… ಎಲ್ರೂ ಜೊತೆ ಸೇರಿದಾಗ ಒಬ್ಬರನ್ನೊಬ್ಬರು ಕಿಚಾಯಿಸಿ ಮಾತನಾಡುತ್ತಾ, ಕಾಮಿಡಿ ಮಾಡ್ತಾ ತರ್ಲೆ ತಮಾಷೆ ಮಾಡ್ತಿರ್ತಾರೆ. ಅದರಲ್ಲೂ ಕೆಲ ಗೆಳೆಯರಂತೂ ಜೊತೆ ಸೇರಿದ್ರೆ ಸಿಕ್ಕಾಪಟ್ಟೆ ಕಿತಾಪತಿಗಳನ್ನು ಮಾಡಿ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ಆದ್ರೆ ಕೆಲವೊಂದು ಬಾರಿ ಈ ತರ್ಲೆ ತಮಾಷೆಗಳು ಅತಿರೇಕವೆನಿಸುತ್ತದೆ. ಅದೇ ರೀತಿ ಇಲ್ಲೊಂದಷ್ಟು ಯುವಕರು ತಮ್ಮ ಗೆಳೆಯನ ಹುಟ್ಟುಹಬ್ಬದ ದಿನವೂ ಇಂಥಹದ್ದೊಂದು ಕಿತಾಪತಿಯನ್ನು ಮಾಡಿದ್ದಾರೆ. ಹೌದು ಹಾಯಾಗಿ ಮಲಗಿದ್ದ ಬರ್ತ್‌ ಡೇ ಬಾಯ್‌ ರೂಮಿಗೆ ಬಂದಂತಹ ಒಂದಷ್ಟು ಯುವಕರು ತಮ್ಮ ಗೆಳೆಯನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ವಿಜಯ್‌ (vejuparmar) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಗೆಳೆಯನ ಬರ್ತ್‌ ಡೇ ದಿನ ಯುವಕರು ತಮಾಷೆಗೆ ಆತನ ಖಾಸಗಿ ಭಾಗಕ್ಕೆ ಭಾಗಕ್ಕೆ ಬೆಂಕಿ ಹಚ್ಚಿ ಹುಟ್ಟು ಹಬ್ಬ ಆಚರಿಸಿರುವ ದೃಶ್ಯವನ್ನು ಕಾಣಬಹುದು. ಬರ್ತ್‌ ಡೇ ಬಾಯ್‌ ರೂಮ್‌ನಲ್ಲಿ ಹಾಯಾಗಿ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗೆಳೆಯರು ತಮಾಷೆಗಾಗಿ ಆ ಯುವಕನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹ್ಯಾಪಿ ಬರ್ತ್‌ ಡೇ ಟು ಯೂ ಎಂದು ಜೋರಾಗಿ ಕಿರಿಚಾಡುತ್ತಾ ಬರ್ತ್‌ ಡೇ ವಿಶ್‌ ಮಾಡಿದ್ದಾರೆ.

ಸೆಪ್ಟೆಂಬರ್‌ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಫ್ರೆಂಡ್ಸ್‌ ಕಿತಾಪತಿ ಮಾಡ್ತಾರೆ ಅಂತಾನೇ ಹುಡುಗರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಕಿಡಿಗೇಡಿ ಗೆಳೆಯರನ್ನು ದೇವರು ಯಾರಿಗೂ ಕೊಡುವುದು ಬೇಡʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಅದ್ಭುತ ಹುಟ್ಟುಹಬ್ಬʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ