
ಕೆಲವರು ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಪಡಲ್ಲ. ಹೀಗಾದಾಗ ಸ್ವಂತ ಉದ್ಯಮದತ್ತ (business) ಗಮನ ಹರಿಸುತ್ತಾರೆ. ಈಗಾಗಲೇ ಕಾರ್ಪೋರೇಟ್ ಉದ್ಯೋಗವನ್ನು ತೊರೆದು ಬ್ಯುಸಿನೆಸ್ ಆರಂಭಿಸಿ ಬದುಕು ಕಟ್ಟಿಕೊಂಡವರ ಸಾಕಷ್ಟು ಉದಾಹರಣೆಗಳನ್ನು ನೀವು ಕೇಳಿರುತ್ತೀರಿ. ಇದೀಗ ಇಲ್ಲೊಬ್ಬ ರಾಜಸ್ಥಾನದ ಯುವಕನು (young man) ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಸಂಬಳ ಸಿಗುವ ಕಾರ್ಪೋರೇಟ್ ಉದ್ಯೋಗ ತೊರೆದು ಹೋಂಸ್ಟೇ ಆರಂಭಿಸಿ, ತನ್ನ ಹಿಂದಿನ ಸಂಬಳಕ್ಕಿಂತ ಹೆಚ್ಚಿನದನ್ನು ಹೇಗೆ ಗಳಿಸುತ್ತಿದ್ದೇನೆ ಎನ್ನುವುದು ರಿವೀಲ್ ಮಾಡಿದ್ದಾನೆ. ಈ ಯುವಕನ ಯಶಸ್ಸಿನ ಹಾದಿ ಹೇಗಿತ್ತು ಎನ್ನುವುದಕ್ಕೆ ಈ ಪೋಸ್ಟ್‌ಯೇ ಸಾಕ್ಷಿ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
r/personalfinanceindia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ “ನನ್ನ 9-5 ವರ್ಷಗಳನ್ನು ಬಿಟ್ಟ ನಂತರ ನನ್ನ ಮಾಸಿಕ ಆದಾಯವು ನನ್ನ ಹಳೆಯ ಸಂಬಳವನ್ನು ಮೀರಿದೆ” ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಕಳೆದ ವರ್ಷ ರಾಜಸ್ಥಾನದಾದ್ಯಂತ ಹೋಂಸ್ಟೇಗಳನ್ನು ಪ್ರಾರಂಭಿಸಲು ತಮ್ಮ ತಿಂಗಳಿಗೆ 1.3 ಲಕ್ಷ ರೂ ಸಂಬಳವಿರುವ ಕೆಲಸವನ್ನು ತೊರೆದೆ. ತಮ್ಮ ಬಳಿ ಯಾವುದೇ ದೊಡ್ಡ ಯೋಜನೆ ಇರಲಿಲ್ಲ, ಸ್ವಂತವಾಗಿ ಏನನ್ನಾದರೂ ಆರಂಭಿಸಬೇಕು ಹಾಗೂ ಹೆಚ್ಚು ಪ್ರಯಾಣಿಸುವ ಬಯಕೆ ಮಾತ್ರ ಹೊಂದಿದ್ದೆನು. ಮೊದಲ ಕೆಲವು ತಿಂಗಳುಗಳು ಅನುಮಾನ ಮತ್ತು ಅಸಮಾನ ಆದಾಯದಿಂದ ತುಂಬಿದ್ದವು, ಪ್ರಾಮಾಣಿಕವಾಗಿ ಹೇಳುವುದೆಂದರೆ ಕೆಲವು ಸಂದರ್ಭ ತುಂಬಾ ಭಯಾನಕವಾಗಿದ್ದವು ಎಂದು ಹೇಳಿಕೊಂಡಿದ್ದಾನೆ.
My monthly income crossed my old salary after leaving my 9-5
byu/Sabmohmayahaibro inpersonalfinanceindia
ಆದರೆ ಒಂದು ವರ್ಷದ ಹೋರಾಟದ ನಂತರದಲ್ಲಿ ನನ್ನ ಈ ಪ್ರಯತ್ನಗಳು ಫಲ ನೀಡಲು ಪ್ರಾರಂಭಿಸಿವೆ. ಈ ತಿಂಗಳು, ಅವರು Airbnb ಬುಕಿಂಗ್‌ಗಳಿಂದಲೇ 2.18 ಲಕ್ಷ ಗಳಿಸಿದೆನು. ಇದೀಗ ಒಟ್ಟು ಆದಾಯ 2.5 ಲಕ್ಷ ರೂ ದಾಟಿದೆ, ಇದು ನನ್ನ ಹಿಂದಿನ ಕಾರ್ಪೊರೇಟ್ ಸಂಬಳಕ್ಕಿಂತ ದುಪ್ಪಟ್ಟಾಗಿದೆ. ಇದು ರಾತ್ರೋರಾತ್ರಿ ಯಶಸ್ವಿಯಾದ ಯಶಸ್ಸು ಅಲ್ಲ. ಇದಕ್ಕೆ ಉಳಿತಾಯ, ತಾಳ್ಮೆ, ನಿಧಾನಗತಿಯ ತಿಂಗಳುಗಳು ಮತ್ತು ಎಲ್ಲವನ್ನೂ ಕಠಿಣ ರೀತಿಯಲ್ಲಿ ಕಲಿಯುವುದು ಬೇಕಾಯಿತು. ಒಂದು ವರ್ಷದ ಹಿಂದೆ ನಾನು ಭಯಭೀತನಾಗಿದ್ದೆ, ಅನಿಶ್ಚಿತನಾಗಿದ್ದೆ ಹಾಗೂ ಈ ರೀತಿಯ ಪೋಸ್ಟ್‌ಗಳನ್ನು ಓದುವುದರಿಂದ ಅದು ಸಾಧ್ಯ ಎಂದು ನಂಬಲು ನನಗೆ ಸಹಾಯವಾಯಿತು ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ:ಲಂಡನ್‌ನಲ್ಲಿ ಬಿಹಾರಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ, ದಿನದ ಗಳಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ನಿಮ್ಮ ನಿರ್ಧಾರದಿಂದ ನಿಮಗೆ ಯಶಸ್ಸು ಸಿಕ್ಕಿದೆ. ಹೀಗೆಯೇ ಮುಂದುವರೆಯಿರಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕಠಿಣ ಪರಿಶ್ರಮ ಮತ್ತು ಇಲಿ ಓಟವನ್ನು ತಪ್ಪಿಸಲು ಈ ಧೈರ್ಯಶಾಲಿ ನಿರ್ಧಾರ ತೆಗೆದುಕೊಂಡದ್ದಕ್ಕೆ ಅಭಿನಂದನೆಗಳು. ನೀವು ನಿಮ್ಮನ್ನು ಸಾಬೀತುಪಡಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಬಹಳಷ್ಟು ಧೈರ್ಯ ಮತ್ತು ಸಮರ್ಪಣೆ ಬೇಕು. ಅದ್ಭುತ ಸಾಧನೆ. ಉದ್ಯಮಶೀಲ ಪ್ರಯಾಣವು ಕಷ್ಟಕರವಾದದ್ದು, ಆದರೆ ಒಮ್ಮೆ ಪ್ರಾರಂಭವಾದರೆ ಅದು ಈ ಜೀವಿತಾವಧಿಯಲ್ಲಿ ಒಬ್ಬರು ತೆಗೆದುಕೊಳ್ಳಬಹುದಾದ ಅತ್ಯುತ್ತಮ ಪ್ರಯಾಣವಾಗಿರುತ್ತದೆ. ನಿಮ್ಮ ಯಶಸ್ಸಿನ ಹಾದಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ