ಈ ಊರಿನ ಪಾರಿವಾಳಗಳ ಹೆಸರಿನಲ್ಲಿದೆ ಕೋಟ್ಯಾಂತರ ರೂ.ಮೌಲ್ಯದ ಆಸ್ತಿ !

| Updated By: Pavitra Bhat Jigalemane

Updated on: Jan 10, 2022 | 3:22 PM

ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ದೊಡ್ಡ ಭೂಮಿ, ಬ್ಯಾಂಕ್​ನಲ್ಲಿ 30 ಲಕ್ಷ ರೂ ಹಣ ಸೇರಿದಂತೆ ಪಾರಿವಾಳಗಳ ಹೆಸರಿನಲ್ಲಿ 470 ಹಸುಗಳಿರುವ ಒಂದು ಗೋಶಾಲೆಯನ್ನೂ ನಡೆಸಲಾಗುತ್ತಿದೆ.

ಈ ಊರಿನ ಪಾರಿವಾಳಗಳ ಹೆಸರಿನಲ್ಲಿದೆ ಕೋಟ್ಯಾಂತರ ರೂ.ಮೌಲ್ಯದ ಆಸ್ತಿ !
ಪಾರಿವಾಳ
Follow us on

ರಾಜಸ್ಥಾನ: ಮನುಷ್ಯರ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಮಾಡಿರುವುದನ್ನು ಕೇಳುತ್ತೇವೆ, ನೋಡುತ್ತೇವೆ. ಆದರೆ ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಇದೆ ಎಂದರೆ ನಂಬುತ್ತೀರಾ? ಹೌದು. ನಂಬಲೇಬೇಕು. ರಾಜಸ್ಥಾನದ ನಾಗ್ಪುರ ಜಿಲ್ಲೆಯ ಜಸನಗರ್  ಊರಿನಲ್ಲಿರುವ ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಇದೆ. ಇಲ್ಲಿ ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ದೊಡ್ಡ ಭೂಮಿ, ಬ್ಯಾಂಕ್​ನಲ್ಲಿ 30 ಲಕ್ಷ ರೂ ಹಣ ಸೇರಿದಂತೆ ಪಾರಿವಾಳಗಳ ಹೆಸರಿನಲ್ಲಿ 470 ಹಸುಗಳಿರುವ ಒಂದು ಗೋಶಾಲೆಯನ್ನೂ ನಡೆಸಲಾಗುತ್ತಿದೆ. ಇದೀಗ ಈ ವಿಚಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. 

ಪಾರಿವಾಳಗಳ ರಕ್ಷಣೆಗಾಗಿ  40 ವರ್ಷಗಳ ಹಿಂದೆ ಗುರು ಮುರುಧರ್​ ಕೇಸರಿ ಎನ್ನುವ ಗುರುವಿನಿಂದ ಪ್ರೇರಣೆ ಪಡೆದ ಮಾಜಿ ಸರಪಂಚ್ ರಾಮದಿನ್ ಚೋಟಿಯಾ  ಕಬುವಾನ್​ ಎನ್ನುವ ಟ್ರಸ್ಟ್​ ಅನ್ನು ಸ್ಥಾಪಿಸಿದರು. ಅದರ ಮೂಲಕ ಪಾರಿವಾಗಳಿಗೆ ಪ್ರತಿದಿನ ನೀರು ಮತ್ತು ಆಹಾರ ಧಾನ್ಯಗಳ ಪೂರೈಕೆ ಮಾಡಲಾಗಿತ್ತದೆ. ಟ್ರಸ್ಟ್​ ಮೂಲಕ 27 ಅಂಗಡಿಗಳನ್ನು ನಿರ್ಮಿಸಿ ಅದರಿಂದ ಬಂದ ಆದಾಯದ ಮೂಲಕ ಪಾರಿವಾಳಗಳಿಗೆ 3 ಚೀಲ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.  3 ಚೀಲ ಭತ್ತವನ್ನು 4 ಸಾವಿರ ರೂ ಖರ್ಚಿನಲ್ಲಿ ಪಾರಿವಾಳಗಳಿಗೆ ನೀಡಲಾಗುತ್ತದೆ ಇನ್ನು 470 ಹಸುಗಳಿರುವ ಗೋಶಾಲೆಗೂ ಆಹಾರ ಪೂರೈಸಲಾಗುತ್ತದೆ.  ಟ್ರಸ್ಟ್​ಗೆ ಅಂಗಡಿಗಳ ಬಾಡಿಗೆಯಿಂದ ತಿಂಗಳಿಗೆ 80 ಸಾವಿರ ರೂ. ಆದಾಯ ಬರುತ್ತದೆ. ಅಲ್ಲದೆ 126 ಬಿಘಾ ಭೂಮಿ ಸ್ಥಿರಾಸ್ತಿಯಾಗಿದೆ. ಎಲ್ಲ ಖರ್ಚಿನ ಬಳಿಕ ಪಾರಿವಾಳಗಳ ರಕ್ಷಣೆಗೆ ಉಳಿಸಿರುವ ಹಣ ಈಗ ಒಟ್ಟು 30 ಲಕ್ಷ ರೂ ಆಗಿದೆ ಎಂದು ಟ್ರಸ್ಟ್​​ ಮಾಹಿತಿ ನೀಡಿದೆ.

ಟ್ರಸ್ಟ್​ನ ಕಾರ್ಯದರ್ಶಿ ಮಾತನಾಡಿ, ಊರಿನ ಜನ ಪಾರಿವಾಳಗಳ ರಕ್ಷಣೆಗೆ ಬಹಿರಂಗವಾಗಿಯೇ ದಾನ ಮಾಡುತ್ತಿದ್ದಾರೆ. ಅದೆಲ್ಲ ಹಣವನ್ನು ಪಾರಿವಾಳಗಳಿಗೆ  ನೀರಿನ ಕೊರತೆಯಾಗದಂತೆ  ಮಾಡಲು ನಿರ್ಮಿಸಿದ ಅಂಗಡಿಗಳಿಗೆ ವಿನಿಯೋಗಿಸಲಾಗಿದೆ. ಇಂದು ಈ ಅಂಗಡಿಗಳಿಂದ ತಿಂಗಳಿಗೆ 9 ಲಕ್ಷ ರೂ ಆದಾಯ ದೊರೆಯುತ್ತದೆ. ಅದನ್ನು ಸ್ಥಳೀಯವಾಗಿರುವ ಪಾರಿವಾಳಗಳಿಗೆ ನೀರುಣಿಸಲು ವ್ಯಯಿಸಲಾಗುತ್ತದೆ. ಈ ಊರಿನಲ್ಲಿರುವ ಎಲ್ಲ ಅಂಗಡಿಗಳೂ ಪಾರಿವಾಳಗಳಿಗೆ ನೀರುಣಿಸುವ ಕಾರ್ಯವನ್ನು ಮಾಡುತ್ತವೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಜಸನಗರದ ಪಾರಿವಾಳಗಳು ಕೋಟ್ಯಾಂತರ ರೂ ಆಸ್ತಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:

ಸಖತ್​ ಸ್ಟೆಪ್​ ಮೂಲಕ ಮದುವೆ ಮನೆಗೆ ಆಗಮಿಸಿದ ವಧು: ವಿಡಿಯೋ ವೈರಲ್​