Viral Video: ಮತಯಾಚನೆಗೆ ಏನೆಲ್ಲ ಸರ್ಕಸ್ ಮಾಡುತ್ತಾರೆ ನಮ್ಮ ಜನನಾಯಕರು ಎಂದು ಕಣ್ಣಾರೆ ಕಂಡಿದ್ದೇವೆ. ಅನುಭವಿಸಿದ್ದೇವೆ. ಇಲ್ಲಿ ನೋಡಿ ರಾಜಸ್ಥಾನದ ವಿದ್ಯಾರ್ಥಿ ಸಂಘದ ಮುಖಂಡರುಗಳು ಕಾಲೇಜು ಹುಡುಗಿಯರ ಕಾಲಿಗೆ ಬಿದ್ದು, ನಮಸ್ಕರಿಸಿ, ರಸ್ತೆಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ ತಮಗೇ ಮತ ಹಾಕುವಂತೆ ದುಂಬಾಲು ಬಿದ್ದಿದ್ದಾರೆ. ರಾಜಸ್ಥಾನದ ಬರಾನ್‌ನಲ್ಲಿ ಇಂಥ ವಿಲಕ್ಷಣ ಘಟನೆ ನಡೆದಿದೆ. ಈ ಪ್ರಚಾರತಂತ್ರವನ್ನು ಕಂಡ ಸ್ಥಳೀಯರು ಅಚ್ಚರಿಗೊಳಗಾಗಿದ್ದಾರೆ. ಇಂಥ ಕೆಲವು ಫೋಟೋ, ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇಲ್ಲಿರುವ ಈ ಕ್ಲಿಪ್ ಟ್ವಿಟ್ಟರ್‌ನಲ್ಲಿ ಅನ್‌ಸೀನ್ ಇಂಡಿಯಾ ಎಂಬ ಪುಟದಲ್ಲಿ ಹಂಚಿಕೆಯಾಗಿದೆ.
राजस्थान विश्वविद्यालय छात्र संघ चुनाव के दौरान प्रत्याशियों ने सड़क पर लेटकर पैर पकड़कर माँगे वोट. pic.twitter.com/rmvlgCFXgJ
ಇದನ್ನೂ ಓದಿ— UnSeen India (@USIndia_) August 26, 2022
ವಿದ್ಯಾರ್ಥಿ ಸಂಘದ ಚುನಾವಣೆ ಎರಡು ವರ್ಷಗಳ ನಂತರ ಶುಕ್ರವಾರ ರಾಜಸ್ಥಾನದಲ್ಲಿ ನಡೆದಿದೆ. ಇಂದು ಬೆಳಗ್ಗೆ ಮತ ಎಣಿಕೆ ಆರಂಭಗೊಂಡಿದೆ. ಮಧ್ಯಾಹ್ನದ ನಂತರ ಫಲಿತಾಂಶ ಹೊರಬೀಳಲಿದೆ.
ಆದರೆ ಈ ತಂತ್ರ ಯೋಗ್ಯವೆ? ಅಭ್ಯರ್ಥಿಯು ನಡೆನುಡಿಯಲ್ಲಿಯೇ ತನ್ನ ಬಗ್ಗೆ ಭರವಸೆ ಹುಟ್ಟಿಸುವ ಗಟ್ಟಿ ವ್ಯಕ್ತಿತ್ವದಿಂದ ಕೂಡಿರಬೇಕಲ್ಲವೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:23 am, Sat, 27 August 22