Ranu Mondal: ಮನಿಕೆ ಮಗೆ ಹಿತೆ.. ಸೂಪರ್ ಹಿಟ್ ಹಾಡು ಹಾಡಿದ ರಾನು ಮಂಡಲ್; ವಿಡಿಯೋ ನೋಡಿ

Manike Mage Hite: ಯೂಟ್ಯೂಬರ್ ರೊಂಧೋನ್ ಪೊರಿಚೋಯ್ ಇದೀಗ ರಾನು ಮಂಡಲ್ ಮನಿಕೆ ಮಗೆ ಹಿತೆ ಹಾಡು ಹಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈವರೆಗೆ ವಿಡಿಯೋವನ್ನು ಸುಮಾರು 54,000 ಜನರಿಗೂ ಹೆಚ್ಚು ಮಂದಿ ವಿಡಿಯೋ ನೋಡಿದ್ದಾರೆ.

Ranu Mondal: ಮನಿಕೆ ಮಗೆ ಹಿತೆ.. ಸೂಪರ್ ಹಿಟ್ ಹಾಡು ಹಾಡಿದ ರಾನು ಮಂಡಲ್; ವಿಡಿಯೋ ನೋಡಿ
Edited By:

Updated on: Sep 29, 2021 | 11:05 PM

ಎರಡು ವರ್ಷಗಳ ಹಿಂದೆ ರಾನು ಮಂಡಲ್ ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೇ ನಿಲ್ದಾಣದ ಮೇಲೆ ಕಾಣಿಸಿಕೊಂಡಿದ್ದರು. ಆ ವೇಳೆ, ಏಕ್ ಪ್ಯಾರ್ ಕ ನಗ್ಮಾ ಹೈ ಎಂಬ ಹಾಡನ್ನು ಹಾಡುತ್ತಾ ಅವರು ಕಾಣಿಸಿಕೊಂಡಿದ್ದರು. ಲತಾ ಮಂಗೇಶ್ಕರ್​ರ ಆ ಹಾಡು ಹಾಗೂ ರಾನು ಮಂಡಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ರಾತ್ರಿ ಬೆಳಗಾಗುವುದರ ಒಳಗಾಗಿ ಜನರಿಗೆ ಪರಿಚಿತರಾಗಿಬಿಟ್ಟಿದ್ದರು. ಆ ಕೂಡಲೇ ಮುಂಬೈನ ರಿಯಾಲಿಟಿ ಶೋ ಒಂದಕ್ಕೂ ಅವರು ಬಂದಿದ್ದರು. ಹಿಮೇಶ್ ರೇಶಮ್ಮಿಯಾ, ರಾನು ಮಂಡಲ್​ರನ್ನು ಸಿನಿಮಾಗೂ ಹಾಡಿಸಿದ್ದರು.

ಯೂಟ್ಯೂಬರ್ ರೊಂಧೋನ್ ಪೊರಿಚೋಯ್ ಇದೀಗ ರಾನು ಮಂಡಲ್ ಮನಿಕೆ ಮಗೆ ಹಿತೆ ಹಾಡು ಹಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈವರೆಗೆ ವಿಡಿಯೋವನ್ನು ಸುಮಾರು 54,000 ಜನರಿಗೂ ಹೆಚ್ಚು ಮಂದಿ ವಿಡಿಯೋ ನೋಡಿದ್ದಾರೆ. ಕೆಂಪು ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ರಾನು ಮಂಡಲ್ ಈ ಹಾಡು ಹಾಡಿದ್ದಾರೆ. ಈ ವಿಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಮೊದಲೇ ಮನಿಕೆ ಮಗೆ ಹಿತೆ ಹಾಡು ವೈರಲ್ ಆಗಿದ್ದು, ಇದೀಗ ರಾನು ಮಂಡಲ್ ಧ್ವನಿಯಲ್ಲಿ ಆ ಹಾಡು ಹೆಚ್ಚು ವೀಕ್ಷಕರನ್ನು ಗಳಿಸುತ್ತಿದೆ.

ಮನಿಕೆ ಮಗೆ ಹಿತೆ ಎಂಬುದು ಸಿಂಹಳ ಭಾಷೆಯ ಶ್ರೀಲಂಕಾದ ಹಾಡಾಗಿದೆ. ಈ ಹಾಡು ಶ್ರೀಲಂಕಾದ ಹಾಡುಗಾರ್ತಿ ಯೋಹಾನಿ ದಿಲೋಕ ಡ ಸಿಲ್ವಾ ಎಂಬಾಕೆ ಹಾಡಿದ ಬಳಿಕ ಭಾರೀ ಮೆಚ್ಚುಗೆ ಗಳಿಸಿತ್ತು. ಯೋಹಾನಿಯ ಮನಿಕೆ ಮಗೆ ಹಿತೆ ಹಾಡು ಮೂರು ತಿಂಗಳ ಅವಧಿಯಲ್ಲಿ 91 ಮಿಲಿಯನ್​ಗೂ ಹೆಚ್ಚು ವ್ಯೂಸ್ ಗಳಿಸಿತ್ತು.

ಹಿಮೇಶ್​ ಅವರು ‘ತೇರಿ ಮೇರಿ ಕಹಾನಿ..’ ಹಾಡು ಹೇಳೋಕೆ ರಾನುಗೆ ಅವಕಾಶ ನೀಡಿದ್ದರು. ಇದಾದ ನಂತರದಲ್ಲಿ ಸಾಕಷ್ಟು ಶೋಗಳಿಗೆ ಅತಿಥಿ​ ಆಗುವ ಅವಕಾಶ ಅವರಿಗೆ ಸಿಕ್ಕಿತ್ತು. ಇದೆಲ್ಲವನ್ನೂ ಅವರು ಬೇಡ ಎನ್ನಲೇ ಇಲ್ಲ. ಬಳಿಕ ರಾನು ಜೀವನದ ಕಥೆ ಬಯೋಪಿಕ್​ ಆಗುತ್ತಿದೆ ಎಂಬ ಸುದ್ದಿಯೂ ಕೇಳಿಬಂದಿತ್ತು. ರಿಶಿಕೇಶ್​ ಮಂಡಲ್​ ಅವರು ಈ ಬಯೋಪಿಕ್​ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇಶಿಕಾ ಡೇ ಅವರು ರಾನು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಿಸ್​ ರಾನು ಮರಿಯಾ’ ಎಂದು ಸಿನಿಮಾಗೆ ಟೈಟಲ್​ ಫಿಕ್ಸ್​ ಮಾಡಲಾಗಿದೆ ಎಂದು ಹೇಳಲಾಗಿತ್ತು. ಸಿನಿಮಾದ ಮುಂದಿನ ಅಪ್ಡೇಟ್​ಗಾಗಿ ಕಾದು ನೋಡಬೇಕಿದೆ.

ಇದನ್ನೂ ಓದಿ: Viral News: ಅಕ್ಕನ ಸಮಾಧಿ ಬಿಟ್ಟು ಕದಲದ ಬೆಕ್ಕು; ಮನ ಕಲಕುವ ವಿಡಿಯೋ ವೈರಲ್

ಇದನ್ನೂ ಓದಿ: Viral Video: ಮದುವೆಯಲ್ಲಿ ಕುಣಿಯುತ್ತಾ ಕೆಳಗೆ ಬಿದ್ದ ವಧು, ವರ; ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್