Rat Trap : ಬಲೆಗೆ ಬೀಳುವುದೆಂದರೇನು, ಬಲೆಗೆ ಬೀಳಿಸಲು ಏನು ಮಾಡಬೇಕು, ಯಾಕೆ ಬಲೆಗೆ ಬೀಳುತ್ತಾರೆ? ಮನುಷ್ಯ, ಪ್ರಾಣಿ, ಪಕ್ಷಿ, ಕೀಟ ಹೀಗೆ ಯಾವ ಜೀವಿಯೂ ಬಲೆಗೆ ಬೀಳುವುದರ ಮೂಲ ಆಸೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ ಗಮನಿಸಿ. ಇಲಿಗಳು ಹೀಗೆ ಸಾಲಾಗಿ ಶಿಸ್ತಿನಿಂದ ಒಂದೊಂದಾಗಿ ತಾವಾಗಿಯೇ ಬಂದು ಬಲೆಗೆ ಬೀಳುತ್ತಿವೆ. ಅರಿವು ಬರುವುದು ಬಿದ್ದ ನಂತರವೇ ಅಲ್ಲವೆ? ಹೀಗೆ ಒಳಗೆ ಬಿದ್ದ ಮೇಲೆಯೇ ಅವುಗಳಿಗೆ ಬುದ್ಧನ (Buddha) ಸಾಲುಗಳು ನೆನಪಾಗಿರಲು ಸಾಕು. ಆದರೆ ನ್ಯೂಯಾರ್ಕ್‌ನ ಇಲಿಗಳಿಗೆ ಬಿದ್ದ ಮೇಲೆಯೂ ಬುದ್ಧಿ ಬರುವುದಿಲ್ಲ ಎನ್ನುತ್ತಿದ್ಧಾರೆ ನೆಟ್ಟಿಗರು. ಅದು ಹೇಗೆ?
ಇನ್ಸ್ಟಾಗ್ರಾಂನ ಈ ಪೋಸ್ಟ್ ಅನ್ನು ಈತನಕ 6.6 ಲಕ್ಷ ಜನರು ನೋಡಿದ್ದಾರೆ. ಸಹಸ್ರಾರು ಜನರು ಬಹಳ ತಮಾಷೆಯಾಗಿ ಸಂಭಾಷಣೆ ನಡೆಸಿದ್ದಾರೆ. ಕೆಲವರು ನ್ಯೂಯಾರ್ಕ್‌ನ ರಾಜಕೀಯ ಪರಿಸ್ಥಿತಿಗೆ ಈ ದೃಶ್ಯವನ್ನು ಹೋಲಿಸಿದ್ದಾರೆ. ನ್ಯೂಯಾರ್ಕ್‌ನ ತುಂಬಾ ಇವುಗಳ ಅಗತ್ಯ ಬಹಳ ಇದೆ ಎಂದಿದ್ದಾರೆ ಒಬ್ಬರು. ನೀವು ಹೇಳಿದ್ದು ನೂರಕ್ಕೆ ನೂರರಷ್ಟು ನಿಜ. ಸರ್ಕಾರದಲ್ಲಿರುವ ಪ್ರಜಾಪ್ರಭುತ್ವವಾದಿಗಳನ್ನು ತೊಡೆದುಹಾಕಲು ಇದು ಸಾಕಾಗುವುದಿಲ್ಲ, ಇನ್ನೂ ದೊಡ್ಡ ಡ್ರಮ್ ಬೇಕಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral: ನೀಲಿಕಂಗಳ ಹುಡುಗನ ‘ಕೆಫೆ ಚಾಯ್ವಾಲಾ ಅರ್ಷದ್ ಖಾನ್’ ಇದೀಗ ಲಂಡನ್ನಲ್ಲಿ
ಇಲಿಗಳು ತಾವಾಗಿಯೇ ಬಲೆಗೆ ಬೀಳಲು ಏನು ಮಾಡಬೇಕು ಎಂದು ಒಬ್ಬರು ಕೇಳಿದ್ದಕ್ಕೆ, ಪೀನಟ್ ಬಟರ್! ಎಂದಿದ್ದಾರೆ ಮತ್ತೊಬ್ಬರು. ಹೀಗೆ ಬಲೆಗೆ ಬಿದ್ದರೂ ನ್ಯೂಯಾರ್ಕ್‌ನ ಇಲಿಗಳು ಬುದ್ಧಿ ಕಲಿಯುವುದಿಲ್ಲ, ಅಲ್ಲಿಯೂ ಕಚ್ಚಾಡುತ್ತವೆ ಎಂದಿದ್ಧಾರೆ ಮಗದೊಬ್ಬರು. ನಮ್ಮಲ್ಲಿ ಸಾಕಷ್ಟು ಬೀದಿಬೆಕ್ಕಗಳು ಇದ್ದರೂ ಅವು ಇಲಿಗಳನ್ನು ತಿನ್ನುವುದಿಲ್ಲ, ಏಕೆಂದರೆ ಬೆಕ್ಕುಗಳಿಗಿಂತ ಇಲಿಗಳ ಗಾತ್ರವೇ ದೊಡ್ಡದು. ವಿಷಪೂರಿತ ಇಲಿಗಳನ್ನು ತಿನ್ನುವ ದುಃಸ್ಸಾಹಸಕ್ಕೆ ಅವು ಹೋಗಲಾರವು ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:18 am, Thu, 20 July 23