Viral Video: ದಯಾಮರಣದಿಂದ ರಕ್ಷಿಸಲ್ಪಟ್ಟ ಈ ನಾಯಿ ಕಳೆದ 10 ವರ್ಷಗಳಲ್ಲಿ 150 ಬೆಕ್ಕುಗಳಿಗೆ ಸಾಕುತಂದೆಯಾದ ಕಥೆ

|

Updated on: Oct 13, 2023 | 6:08 PM

Pet: 'ಇವನ ಬಹಳ ಮುದ್ದಾದ ಹುಡುಗ. ನಾನು ಇವನನ್ನು ದತ್ತು ತೆಗೆದುಕೊಂಡೆ. ಸ್ವಲ್ಪ ದಿನಗಳಲ್ಲಿ ಇವನು ನನ್ನ ಆರೈಕೆಯಲ್ಲಿ ಚೇತರಿಸಿಕೊಂಡ. ಬೆಕ್ಕಿನಮರಿಗಳನ್ನು ಪೋಷಿಸಲಾರಂಭಿಸಿದ. ಕಳೆದ ಹತ್ತು ವರ್ಷಗಳಿಂದ ಈ ಕೆಲಸವನ್ನು ಸಂತೋಷದಿಂದ ಮಾಡುತ್ತಿದ್ದಾನೆ. ಇವನಿಗೆ ಯಾವುದೇ ರೀತಿಯ ತರಬೇತಿ ಕೊಟ್ಟಿಲ್ಲ. ನಿಜಕ್ಕೂ ಇದೊಂದು ಪವಾಡವೇನೋ ಎನ್ನಿಸುತ್ತಿದೆ' ಲಾರಾ,

Viral Video: ದಯಾಮರಣದಿಂದ ರಕ್ಷಿಸಲ್ಪಟ್ಟ ಈ ನಾಯಿ ಕಳೆದ 10 ವರ್ಷಗಳಲ್ಲಿ 150 ಬೆಕ್ಕುಗಳಿಗೆ ಸಾಕುತಂದೆಯಾದ ಕಥೆ
ರೇಲಾನ್ ಎಂಬ ಸಾಕು ಅಪ್ಪನೊಂದಿಗೆ​ ಬೆಕ್ಕಿನಮರಿ
Follow us on

Dog : ಎಲ್ಲ ಪ್ರಾಣಿಗಳ ಪೈಕಿ ನಾಯಿಗಳು ಸೂಕ್ಷ್ಮ ಸಂವೇದನೆಯುಳ್ಳವು. ಆದರೂ ಬೆಕ್ಕಿಗೂ ನಾಯಿಗೂ ವೈರತ್ವ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೂ ಈ ಮಾತನ್ನು ಸುಳ್ಳುಮಾಡಲೆಂದೇ ಕೆಲ ನಾಯಿಗಳು ಹುಟ್ಟಿರುತ್ತವೆಯೇನೋ. ಇದೀಗ ಈ ರೇಲಾನ್ (Raylan)​ ಇಂಥ ಅಪರೂಪದ ಜೀವಿಗಳಲ್ಲಿ ಒಬ್ಬ. ಹತ್ತು ವರ್ಷಗಳ ಹಿಂದೆ ರೇಲಾನ್ ಎಂಬ ನಾಯಿಯನ್ನು ದಯಾಮರಣಕ್ಕೆ ಒಳಪಡಿಸುವುದು ಎಂದು ನಿರ್ಧರಿಸಲಾಗಿತ್ತು. ನಿಗದಿಯಾದ ದಿನಾಂಕಕ್ಕೆ ಎರಡು ದಿನ ಮೊದಲೇ ಒಬ್ಬ ಮಹಿಳೆ ಅವನನ್ನು ರಕ್ಷಿಸಿದರು. ಪವಾಡವೆಂಬಂತೆ ಈ 10 ವರ್ಷಗಳಲ್ಲಿ ಒಟ್ಟು 150 ಬೆಕ್ಕಿನಮರಿಗಳನ್ನು ರಕ್ಷಿಸಿದ ಸಾಕುತಂದೆ ಎಂಬ ಹೆಗ್ಗಳಿಕೆಗೆ ರೇಲಾನ್​ ಪಾತ್ರವಾದನು. ರೇಲಾನ್​ನ  ಕುರಿತು ಹೃದಯಸ್ಪರ್ಶಿಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ಸಿಂಗಲ್ ಪೇರೆಂಟ್​; ತಾಯಂದಿರ ದಿನಕ್ಕೆ ಅಮ್ಮನಂತೆ ವೇಷ ಧರಿಸಿ ಅಪ್ಪ ಶಾಲೆಗೆ ಬಂದ ಆ ದಿನ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್ನೇನು ಎರಡು ದಿನಕ್ಕೆ ರೇಲಾನ್​ ದಯಾಮರಣಕ್ಕೆ ಈಡಾಗುತ್ತಾನೆ ಎನ್ನುವಾಗ ಲಾರಾ ಎಂಬ ಪ್ರಾಣಿಪ್ರೇಮಿ ಅವನನ್ನು ರಕ್ಷಿಸಿ ತನ್ನ ಮನೆಗೆ ಕರೆದುಕೊಂಡು ಬರುತ್ತಾರೆ. ಸ್ವಲ್ಪ ದಿನಗಳ ನಂತರ ಲಾರಾಳ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತದೆ ರೇಲಾನ್​. ಒಂದೊಂದೇ ಬೆಕ್ಕಿನ ಮರಿಗಳನ್ನು ತಾನೇ ಆಸ್ಥೆಯಿಂದ ಪೋಷಿಸಲು ತೊಡಗುತ್ತದೆ.

ರೇಲಾನ್​ ಎಂಬ ಸಾಕುತಂದೆಯ ತೆಕ್ಕೆಯಲ್ಲಿ ತೆಕ್ಕೆಯಲ್ಲಿ ಬೆಕ್ಕಿನಮರಿಗಳು

‘ಇನ್​ಸ್ಟಾಗ್ರಾಂನಲ್ಲಿ ರೇಲಾನ್​ಗೆಂದೇ ಪುಟವನ್ನು ಮೀಸಲಿಡಲಾಗಿದೆ. ಬೆಕ್ಕುಗಳನ್ನು ಅತಿಯಾಗಿ ಪ್ರೀತಿಸುವ ರೇಲಾನ್​ ಈತನಕ ಯಾವುದೇ ರೀತಿಯ ತರಬೇತಿಯನ್ನು ಪಡೆದಿಲ್ಲ. ಆದರೆ ಮರಿಗಳನ್ನು ಹೇಗೆ ನೋಡಿಕೊಳ್ಳಬೇಕೆಂದು ಅವನಿಗೆ ಗೊತ್ತಿದೆ. ರೇಲಾನ್​ ಪೋಷಿಸಿದ ಮೊಟ್ಟಮೊದಲ ಬೆಕ್ಕಿಗೆ ವ್ಯಾಟ್ಸನ್​ ಎಂದು ಹೆಸರಿಡಲಾಗಿತ್ತು.’ ಎಂದಿದ್ದಾರೆ ಲಾರಾ.

ರೇಲಾನ್​ ಪ್ರಯಾಣ

ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ನಾವು ಮನುಷ್ಯರು ಎಂದಿಗೂ ನಾಯಿಗಳ ಶ್ರೇಷ್ಠತೆ ಸಾಧಿಸಲಾರೆವು ಎಂದಿದ್ದಾರೆ ಅನೇಕರು. ಯಾವುದೇ ಮನುಷ್ಯ ತಂದೆಯಾಗಬಹುದು, ಆದರೆ ರೇಲನ್ ಆಗಲಾರರು ಎಂದಿದ್ದಾರೆ ಒಬ್ಬರು. ಇದು ಎಂಥ ಹೃದ್ಯ ಕಥೆ, ಇವನು ಎಷ್ಟೊಂದು ಒಳ್ಳೆಯ ಹುಡುಗ ಎಂದಿದ್ದಾರೆ ಇನ್ನೊಬ್ಬರು. ನಾನಂತೂ ಬೆಕ್ಕಾಗಲು ಬಯಸುತ್ತೇನೆ ಮತ್ತು ರೇಲಾನ್​ನ ಆಶ್ರಯದಲ್ಲಿರಲು ಬಯಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:04 pm, Fri, 13 October 23