ಕೆಲವೊಂದು ವಿಡಿಯೋಗಳು ನಿಮ್ಮ ಮನಸ್ಸಿಗೆ ತುಂಬಾ ಖುಷಿ ನೀಡಬಹುದು, ಜತೆಗೆ ನಿಮ್ಮಲ್ಲಿ ಬದಲಾವಣೆಯನ್ನುಂಟು ಮಾಡುಬಹುದು, ಆದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಎಲ್ಲ ವಿಡಿಯೋಗಳು ಇಷ್ಟವಾಗಬೇಕೆಂದಿಲ್ಲ, ಅದರೂ ಕೆಲವೊಂದು ವಿಡಿಯೋಗಳು ಮನಸ್ಸಿಗೆ ತುಂಬಾ ಇಷ್ಟವಾಗುತ್ತದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋ ಎಷ್ಟು ಲೈಕ್ ಪಡೆಯಿತು ಅಥವಾ ಎಷ್ಟು ಶೇರ್ ಆಯಿತು ಎಂಬುದು ಒಂದು ಕಡೆಯಾದರೆ, ಅವುಗಳು ಎಷ್ಟು ಅರ್ಥಪೂರ್ಣವಾಗಿರುತ್ತದೆ ಎಂಬುದನ್ನು ಕೆಲವರು ನೋಡುತ್ತಾರೆ.
ಈ ಇನ್ಸ್ಟಾದಲ್ಲಿ ಬರುವ ಕೆಲವೊಂದು ವಿಡಿಯೊಗಳನ್ನು ವಾಟ್ಸಪ್ನಲ್ಲಿ ಶೇರ್ ಮಾಡಿಕೊಂಡು ಸೇಟಸ್ಸ್ ಕೂಡ ಹಾಕಿಕೊಳ್ಳುತ್ತಾರೆ. ಈ ಇನ್ಸ್ಟಾದ ವಿಡಿಯೋಗಳು ತುಂಬಾ ಸ್ವಾರಸ್ಯವಾಗಿರುತ್ತದೆ, ಅದೆಷ್ಟೋ ಜನರನ್ನು ನಗಿಸುವ, ಟ್ರೋಲ್ ಮಾಡುವ ಇನ್ನೂ ಕೆಲವೊಂದಿಷ್ಟು ಮನಸ್ಸಿನಲ್ಲಿ ಭಾವನತ್ಮಕ ವಿಚಾರಗಳನ್ನು ಸೃಷ್ಟಿ ಮಾಡುವ ವಿಡಿಯೊಗಳು ಕೂಡ ಬುರತ್ತದೆ. ಹೌದು ಇಂತಹದೇ ಒಂದು ವಿಡಿಯೊ ಇನ್ಸ್ಟಾದಲ್ಲಿ ವಿಡಿಯೊ ವೈರಲ್ ಆಗುತ್ತಿದೆ.
ಇದನ್ನು ಓದಿ: ಧೋನಿ, ಪಾಂಡ್ಯ, ಇಶಾನ್ ಕಿಶನ್ ಭರ್ಜರಿ ಡ್ಯಾನ್ಸ್ ಪಾರ್ಟಿ: ಇಲ್ಲಿದೆ ವಿಡಿಯೋ
ಒಂದು ಪುಟ್ಟ ಮಗು ಒಂದಿಷ್ಟು ವಸ್ತುಗಳನ್ನು ದಾರಿಯಲ್ಲಿ ಹೋಗುವ ಸನ್ಯಾಸಿಗಳಿಗೆ ನೀಡುತ್ತಿರುವ ವಿಡಿಯೊ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ “ಧರ್ಮದಿಂದ ಬದುಕುವವರನ್ನು ಧರ್ಮವೇ ರಕ್ಷಿಸುತ್ತದೆ” ಎಂದು ಬರೆದುಕೊಂಡಿದ್ದಾರೆ. ದಾನ ಧರ್ಮ ಎನ್ನುವುದು ಒಂದು ಶ್ರೇಷ್ಠ ಕಾರ್ಯ ಎಂದು ಈ ವಿಡಿಯೊದ ಮೂಲಕ ಹೇಳಿದ್ದಾರೆ. ವಿದೇಶಿ ಮಗುವೊಂದ ದಾರಿಯಲ್ಲಿ ಹೋಗುತ್ತಿರುವ ಸನ್ಯಾಸಿಗಳಿಗೆ ನಮಸ್ಕಾರ ಮಾಡಿ, ತನ್ನ ಕೈಯಲ್ಲಿದ್ದ ವಸ್ತುಗಳನ್ನು ಅವರಿಗೆ ನೀಡಿ, ಕೊನೆಗೆ ಅನಂತ ಭಾವದಿಂದ ನಮಸ್ಕರಿಸುತ್ತದೆ.
ಈ ವಿಡಿಯೊದಿಂದ ನಾವು ಅನೇಕ ವಿಚಾರಗಳನ್ನು ಕಲಿಸಬೇಕಿದೆ, ದಾನ-ಧರ್ಮ ಒಂದು ಶ್ರೇಷ್ಠ ಕಾರ್ಯ, ಈ ಮಗುವಿನಿಂದ ಕಲಿಯುವುದು ತುಂಬಾ ಇದೆ ಎಂದು ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಚಿದು ಬಡಿಗೇರ್ ಎಂಬುವವರು ಹಂಚಿಕೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:18 am, Mon, 28 November 22