Viral Video: ರಿಪೋರ್ಟಿಂಗ್‌ ವೇಳೆ ‌ ನದಿ ನೀರಿಗೆ ಬಿದ್ದ ಪತ್ರಕರ್ತ; ಮುಂದೇನಾಯ್ತು ನೋಡಿ

| Updated By: ಅಕ್ಷತಾ ವರ್ಕಾಡಿ

Updated on: Jul 14, 2024 | 4:36 PM

ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಕೆಲಸ ಮಾಡುತ್ತಾ ಸುದ್ದಿ ನೀಡುವುದು ಪತ್ರಕರ್ತರಿಗೆ ಸವಾಲಿನ ಕೆಲಸವೇ ಸರಿ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಪ್ರವಾಹ ಪೀಡಿತ ಊರಿನ ಜನರ ಸಮಸ್ಯೆಗಳನ್ನು ವರದಿ ಮಾಡುತ್ತಿರುವ ವೇಳೆ ವರದಿಗಾರರೊಬ್ಬರು ಆಯತಪ್ಪಿ ನದಿ ನೀರಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್‌ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Viral Video: ರಿಪೋರ್ಟಿಂಗ್‌ ವೇಳೆ ‌ ನದಿ ನೀರಿಗೆ  ಬಿದ್ದ ಪತ್ರಕರ್ತ; ಮುಂದೇನಾಯ್ತು ನೋಡಿ
Follow us on

ಪತ್ರಕರ್ತರ ಬದುಕು ಸುಲಭದ್ದಲ್ಲ. ಅಪಾಯಕಾರಿ ಸ್ಥಳಗಳಿಗೆ ಹೋಗಿ ಅಥವಾ ಅನೇಕ ಸವಾಲುಗಳ ನಡುವೆಯೂ ಧೈರ್ಯವಾಗಿ ವರದಿ ಮಾಡಿ ಜನರಿಗೆ ಉಪಯುಕ್ತ ಮಾಹಿತಿ ನೀಡಿವ ಕಾರ್ಯ ಪತ್ರಕರ್ತರು ಮಾಡುತ್ತಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಪ್ರವಾಹ ಪೀಡಿತ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ‌ ವರದಿ ಮಾಡುತ್ತಿರುವಾಗ ವರದಿಗಾರರೊಬ್ಬರು ಆಯ ತಪ್ಪಿ ನದಿಗೆ ಬಿದ್ದಿದ್ದು, ಅದೃಷ್ಟವಶಾತ್‌ ಈಜುತ್ತಾ ಬಂದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ರಿಪೋರ್ಟಿಂಗ್‌ ವೇಳೆ ವರದಿಗಾರರೊಬ್ಬರು ಆಯ ತಪ್ಪಿ ನದಿಗೆ ಬಿದ್ದಿದ್ದಾರೆ. ಇತ್ತೀಚಿಗೆ ಉಂಟಾದ ಭಾರಿ ಮಳೆಯಿಂದ ಅಸ್ಸಾಂ ನಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಈ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಮಸ್ಯೆಗಳನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರು ನದಿಯ ದಡದಲ್ಲಿ ನಿಂತು ಜನರ ಸಮಸ್ಯೆಗಳನ್ನು ವರದಿ ಮಾಡುತ್ತಿರುವಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಈಜುತ್ತಾ ಬಂದು ದಡ ಸೇರಿದ ವರದಿಗಾರ ಸ್ಥಳೀಯರ ಸಹಾಯದಿಂದ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತ ಪೋಸ್ಟ್‌ ಒಂದನ್ನು TeluguScribe ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸಮಸ್ಯೆಗಳನ್ನು ವರದಿ ಮಾಡುತ್ತಿರುವಾಗ ನದಿಗೆ ಬಿದ್ದ ಪತ್ರಕರ್ತರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ಯುವಕನಿಗೆ ಬರೀ 20 ವರ್ಷ: ಎಫ್‌ಬಿಐ

ವೈರಲ್‌ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಪ್ರವಾಹಕ್ಕೆ ತುತ್ತಾದ ಪ್ರದೇಶದಲ್ಲಿ ನದಿ ಪಕ್ಕ ನಿಂತು ಜನರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ರಿಪೋರ್ಟಿಂಗ್‌ ಮಾಡುತ್ತಿದ್ದ ವೇಳೆ ವರದಿಗಾರ ಇದ್ದಕ್ಕಿದ್ದಂತೆ ನೀರಿಗೆ ಬಿದ್ದಿದ್ದು, ಈಜುತ್ತಾ ಬಂದು ದಡ ಸೇರಿದ ಅವರನ್ನು ಸ್ಥಳೀಯ ನಿವಾಸಿಗಳು ಕೈ ಹಿಡಿದು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಜುಲೈ 12 ರದು ಹಂಚಿಕೊಳ್ಳಲಾದ ಈ ವಿಡಿಯೋ 69 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚಿನವರು ಇದೊಂದು ಸ್ಕ್ರಿಪ್ಟೆಡ್‌ ವಿಡಿಯೋ ಎಂದು ಕಾಮೆಂಟ್ಸ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ