AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಕ್ಕಳನ್ನು ಹೆರಿ, ಹಣ ಪಡೆಯಿರಿ; ರಷ್ಯಾದ ಕಾಲೇಜು ಯುವತಿಯರಿಗೆ ಬಂಪರ್‌ ಆಫರ್ ನೀಡಿದ ಸರ್ಕಾರ

ಈ ಹಿಂದೆ 10 ಮಕ್ಕಳನ್ನು ಹೆರುವವರಿಗೆ 13 ಲಕ್ಷ ಬಹುಮಾನ ನೀಡುವುದಾಗಿ ಜನ ಸಂಖ್ಯೆಯನ್ನು ಹೆಚ್ಚಿಸಲು ರಷ್ಯಾ ಸರ್ಕಾರ ಯೋಜನೆಯೊಂದನ್ನು ರೂಪಿಸಿತ್ತು. ಇದೀಗ ಸಂತಾನೋತ್ಪತ್ತಿಯನ್ನು ಹೆಚ್ಚಿಸಲು ಅಂತಹದೇ ಯೋಜನೆಯೊಂದನ್ನು ರೂಪಿಸಿದ್ದು, ಆರೋಗ್ಯವಂತ ಮಗುವನ್ನು ಹೆರುವ ಕಾಲೇಜು ಯುವತಿಯರಿಗೆ ಭರ್ಜರಿ ಹಣ ನೀಡುವುದಾಗಿ ರಷ್ಯಾ ಸರ್ಕಾರ ಘೋಷಿಸಿದೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಮಕ್ಕಳನ್ನು ಹೆರಿ, ಹಣ ಪಡೆಯಿರಿ; ರಷ್ಯಾದ ಕಾಲೇಜು ಯುವತಿಯರಿಗೆ ಬಂಪರ್‌ ಆಫರ್ ನೀಡಿದ ಸರ್ಕಾರ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Jul 14, 2024 | 2:41 PM

Share

ರಷ್ಯಾದಲ್ಲಿ ಜನಸಂಖ್ಯೆ ಪ್ರಮಾಣ ತಗ್ಗುತ್ತಿದೆ. ರಾಷ್ಟ್ರದಲ್ಲಿ ಇಳಿಕೆ ಆಗುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ರಷ್ಯಾ ಸರ್ಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಈ ಹಿಂದೆ 10 ಮಕ್ಕಳನ್ನು ಹೆರುವವರಿಗೆ 13 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಸಂತಾನೋತ್ಪತ್ತಿ ದರವನ್ನು ಹೆಚ್ಚಿಸಲು ಅಂತಹದೇ ಹೊಸ ಆಫರ್‌ ಒಂದನ್ನು 25 ವರ್ಷದೊಳಗಿನ ಕಾಲೇಜು ಯುವತಿಯರಿಗೆ ನೀಡಲಾಗಿದ್ದು, ಯುವತಿಯರು ಆರೋಗ್ಯವಂತ ಮಕ್ಕಳನ್ನು ಹೆತ್ತರೆ ಭರ್ಜರಿ ಹಣವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಕುರಿತ ಸುದ್ದಿಯೊಂದು ಸಖತ್‌ ವೈರಲ್‌ ಆಗುತ್ತಿದೆ.

ರಷ್ಯಾದ ವಾಯವ್ಯ ಪ್ರದೇಶವಾದ ರಿಪಬ್ಲಿಕ್‌ ಆಫ್‌ ಕರೇಲಿಯಾದಲ್ಲಿ ಇಲ್ಲಿನ ಸ್ಥಳೀಯ ಅಧಿಕಾರಿಗಳು ಸಂತಾನೋತ್ಪತ್ತಿ ದರವನ್ನು ಹೆಚ್ಚಿಸಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಸ್ಥಳೀಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ 25 ವರ್ಷದೊಳಗಿನ ಯುವತಿಯರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರೆ ಅವರಿಗೆ ರೂ. 92 ಸಾವಿರ ($ 1,100 ಡಾಲರ್)‌ ಬಹುಮಾನ ನೀಡಲಾಗುವುದು ಎಂದು ಬಂಪರ್‌ ಆಫರ್‌ ಒಂದನ್ನು ಘೋಷಿಸಿದೆ. ಫಲವತ್ತತೆಯ ಪ್ರಮಾಣ ಹೆಚ್ಚಿಸಲು ಪರಿಚಯಿಸಿರುವ ಈ ಯೋಜನೆ ಮುಂದಿನ ವರ್ಷ ಜನವರಿ 01 ರಿಂದ ಜಾರಿಗೆ ಬರಲಿದೆ.

ಮಾಸ್ಕೋ ಟೈಮ್ಸ್‌ ಪ್ರಕಾರ ಈ ದೇಶದಲ್ಲಿ ಇದಾಗಲೇ ಕಾಂಡೋಮ್‌, ಮಾತ್ರೆಗಳು ಇತ್ಯಾದಿ ಗರ್ಭ ನಿರೋಧಕಗಳನ್ನು ಸರ್ಕಾರ ನಿಷೇಧಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ 8 ಮಕ್ಕಳಿಗೆ ಜನ್ಮ ನೀಡುವಂತೆ ರಷ್ಯಾ ಅಧ್ಯಕ್ಷ ಪುಟಿನ್‌ ದೇಶದ ಪ್ರತಿಯೊಬ್ಬ ಮಹಿಳೆಯರಿಗೆ ಮನವಿ ಮಾಡಿದ್ದರು. ಇದೀಗ ಇಲ್ಲಿನ ವಾಯವ್ಯ ಪ್ರದೇಶವಾದ ರಿಪಬ್ಲಿಕ್‌ ಆಫ್‌ ಕರೇಲಿಯಾದಲ್ಲಿ ಸಂತಾನೋತ್ಪತ್ತಿಯನ್ನು ಹೆಚ್ಚಿಸಲು ಯುವತಿಯರಿಗೆ ಬಂಪರ್‌ ಆಫರ್‌ ಒಂದನ್ನು ಅಧಿಕಾರಿಗಳು ನೀಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ