AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧದ ಶಂಕೆ; ಡ್ರೋನ್‌ ಕ್ಯಾಮೆರಾ ಬಳಸಿ ಪತ್ನಿಯ ಕಳ್ಳಾಟವನ್ನು ಸಾಕ್ಷಿ ಸಮೇತ ಪತ್ತೆ ಹಚ್ಚಿದ ಪತಿರಾಯ

ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳ ಸಮಸ್ಯೆ ತೀರಾ ಹೆಚ್ಚಾಗುತ್ತಿದೆ. ಈ ಅಕ್ರಮ ಸಂಬಂಧಗಳು ನಂಬಿಕೆಯನ್ನು ಒಡೆಯುವುದು ಮಾತ್ರವಲ್ಲದೆ ಒಂದು ಸುಂದರ ಸಂಸಾರವನ್ನು ಹಾಳು ಮಾಡುತ್ತದೆ. ಇದೀಗ ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿರಾಯ, ಡ್ರೋನ್‌ ಕ್ಯಾಮೆರಾ ಬಳಸಿ ಆಕೆಯ ಕಳ್ಳಾಟವನ್ನು ಪತ್ತೆ ಹಚ್ಚಿ, ಇದೀಗ ಇದೇ ಸಾಕ್ಷ್ಯದ ಆಧಾರದ ಮೇಲೆ ಪತ್ನಿಗೆ ಡಿವೋರ್ಸ್‌ ನೀಡಲು ಮುಂದಾಗಿದ್ದಾನೆ.

ಅನೈತಿಕ ಸಂಬಂಧದ ಶಂಕೆ; ಡ್ರೋನ್‌ ಕ್ಯಾಮೆರಾ ಬಳಸಿ ಪತ್ನಿಯ ಕಳ್ಳಾಟವನ್ನು ಸಾಕ್ಷಿ ಸಮೇತ ಪತ್ತೆ ಹಚ್ಚಿದ  ಪತಿರಾಯ
ಪ್ರಿಯಕರನೊಂದಿಗೆ ಮಹಿಳೆ
ಮಾಲಾಶ್ರೀ ಅಂಚನ್​
| Updated By: ನಯನಾ ರಾಜೀವ್|

Updated on: Jul 15, 2024 | 11:18 AM

Share

ಅಕ್ರಮ ಸಂಬಂಧಗಳು ಸುಖವಾಗಿ ಸಂಸಾರ ನಡೆಸುತ್ತಿರುವರ ಜೀವನಕ್ಕೆ ಕೊಳ್ಳಿ ಇಟ್ಟಂತೆ. ಅದು ಅನೇಕ ದಂಪತಿಗಳನ್ನು ದೂರ ಮಾಡಿದೆ, ಸಾಕಷ್ಟು ಸುಂದರ ಸಂಸಾರಗಳನ್ನು ಒಡೆದು ಹಾಕಿದೆ. ವಿವಾಹೇತರ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಮದುವೆಯಾದ ಗಂಡಸು ಇನ್ನೊಬ್ಬ ಮಹಿಳೆಯ ಜೊತೆ

ಹೆಂಗಸು ಇನ್ನೊಬ್ಬ ಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆಯನ್ನು ಹೊಂದಿದ್ದ ಪತಿರಾಯ ಡ್ರೋನ್‌ ಕ್ಯಾಮೆರಾ ಬಳಸಿ ಆಕೆಯ ಕಳ್ಳಾಟವನ್ನು ರೆಡ್‌ ಹ್ಯಾಂಡ್‌ ಆಗಿ ಪತ್ತೆ ಹಚ್ಚಿದ್ದು, ಇದೀಗ ಇದೇ ಸಾಕ್ಷ್ಯದ ಆಧಾರದ ಮೇಲೆ ಆಕೆಗೆ ಡಿವೋರ್ಸ್‌ ನೀಡಲೂ ಮುಂದಾಗಿದ್ದಾನೆ.

ಈ ಘಟನೆ ಚೀನಾದ ಹುಬೈ ಪ್ರಾಂತ್ಯದ ಶಿಯಾನ್‌ ಎಂಬಲ್ಲಿ ನಡೆದಿದ್ದು, ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆಯನ್ನು ಹೊಂದಿದ್ದ ಪತಿರಾಯ ಡ್ರೋನ್‌ ಕ್ಯಾಮೆರಾ ಬಳಸಿ ಆಕೆಯ ಕಳ್ಳಾಟವನ್ನು ರೆಡ್‌ ಹ್ಯಾಂಡ್‌ ಆಗಿ ಪತ್ತೆ ಹಚ್ಚಿದ್ದಾನೆ.

ಮತ್ತಷ್ಟು ಓದಿ: Video: ತರಗತಿಯಲ್ಲಿ ಕೂತು ಪಾಠ ಕೇಳುತ್ತಿದ್ದ ಪುಟ್ಟ ಬಾಲಕಿಯ ತಲೆ ಮೇಲೆ ಬಿದ್ದ ಫ್ಯಾನ್​​​​​

33 ವರ್ಷದ ಜಿಂಗ್‌ ಕಳೆದ ವರ್ಷದಿಂದ ತನ್ನ ಪತ್ನಿಯ ವಿಚಿತ್ರ ವರ್ನೆಯಿಂದ ಕಂಗೆಟ್ಟಿದ್ದ ಹಾಗೂ ಆಕೆಯ ನಡವಳಿಕೆಯಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿದ್ದ. ಅಲ್ಲದೆ ಆಕೆ ಪದೇ ಪದೇ ತವರು ಮನೆಗೆ ಹೋಗುವುದಾಗಿ ಹೇಳಿ ತನ್ನ ಬಾಯ್‌ಫ್ರೆಂಡ್‌ ಅನ್ನು ಭೇಟಿಯಾಗುತ್ತಿದ್ದಳು. ಆಕೆ ನಿಜವಾಗಿಯೂ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆಯೇ ಅಥವಾ ಇಲ್ಲವೆ ಎಂದು ತಿಳಿಯಲು ಜಿಂಗ್‌ ಡ್ರೋನ್‌ ಕ್ಯಾಮೆರಾದ ಸಹಾಯ ಪಡೆಯುತ್ತಾನೆ.

ಒಂದು ದಿನ ಪತ್ನಿ ಹೊರಗಡೆ ಹೋದಾಗ ಆಕೆಯ ಹಿಂದೆ ಡ್ರೋನ್‌ ಕ್ಯಾಮೆರಾವನ್ನೂ ಟ್ರ್ಯಾಕ್‌ ಮಾಡುತ್ತಾನೆ. ಕ್ಯಾಮೆರಾದಲ್ಲಿ ಪತ್ನಿ ಕಾರಿನಲ್ಲಿ ಬೇರೊಬ್ಬ ಗಂಡಸಿನ ಜೊತೆ ಗುಡ್ಡ ಪ್ರದೇಶಕ್ಕೆ ಹೋಗಿ, ಅಲ್ಲಿ ಕೈಕೈ ಹಿಡಿದು ಪುಟ್ಟ ಮಣ್ಣಿನ ಗುಡಿಸಲಿನ ಒಳಗೆ ಪ್ರವೇಶಿಸಿ ನಂತರ 20 ನಿಮಿಷಗಳ ನಂತರ ಗುಡಿಸಲಿನಿಂದ ಹೊರ ಬಂದು ಆ ವ್ಯಕ್ತಿಯೊಂದಿಗೆಯೇ ಕಛೇರಿಗೆ ಹೋದಂತಹ ದೃಶ್ಯವನ್ನು ಕಂಡು ಜಿಂಗ್‌ ಶಾಕ್‌ ಆಗುತ್ತಾನೆ. ಪತ್ನಿ ಆಕೆಯ ಬಾಸ್‌ ಜೊತೆಗೆಯೇ ಅನೈತಿಕ ಸಂಬಂಧವನ್ನು ಹೊಂದಿದ್ದು, ಈಕೆಯ ಕಳ್ಳಾಟ ಗೊತ್ತಾಗಿ ಜಿಂಗ್‌ ಇದೀಗ ಈ ಸಾಕ್ಷ್ಯದ ಆಧಾರದ ಮೇಲೆ ತನ್ನ ವಿಚ್ಛೇದನ ನೀಡಲು ಮುಂದಾಗಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ