ನರೇಂದ್ರ ಮೋದಿಯವರಿಗೆ ಸೀರೆ ಉಡುಗೊರೆ ಕೊಟ್ಟ ಪದ್ಮಶ್ರೀ ಪುರಸ್ಕೃತ; ಗಿಫ್ಟ್ ನೋಡಿ ಪ್ರಧಾನಿಗೆ ಖುಷಿಯೋ ಖುಷಿ !
ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪಡೆದ 102 ಜನರಲ್ಲಿ ಬಿರನ್ ಕುಮಾರ್ ಬಸಕ್ ಅವರೂ ಒಬ್ಬರು. ಒಂದು ರೂಪಾಯಿ ಬಂಡವಾಳದಿಂದ ಸೀರೆ ನೇಯ್ಗೆ ಮತ್ತು ಮಾರಾಟ ಶುರು ಮಾಡಿದವರು.1970ರ ಅವಧಿಯಲ್ಲಂತೂ ಬಿರನ್ ಕುಮಾರ್ ತಮ್ಮ ಸೋದರನೊಂದಿಗೆ ಸೇರಿ ಕೋಲ್ಕತ್ತದಲ್ಲಿ ಮನೆಮನೆಗೆ ತೆರಳಿ ಸೀರೆ ಮಾರಾಟ ಮಾಡುತ್ತಿದ್ದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿರನ್ ಕುಮಾರ್ ಬಸಕ್ (Biren Kumar Basak) ಅವರು ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರಿಗೊಂದು ವಿಶೇಷ ಉಡುಗೋರೆ ನೀಡಿದ್ದಾರೆ. ಅದನ್ನು ನೋಡಿ ನರೇಂದ್ರ ಮೋದಿಯವರು ಫುಲ್ ಖುಷಿಯಾಗಿ, ತಮ್ಮ ಸೋಷಿಯಲ್ ಮೀಡಿಯಾ(Social Media)ಗಳಲ್ಲೂ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಬಿರನ್ ಕುಮಾರ್ ಬಸಕ್ ಪ್ರಧಾನಿಯವರಿಗೆ ನೀಡಿದ ಉಡುಗೊರೆ ಏನಪ್ಪ ಅಂದರೆ ಅದೊಂದು ಸೀರೆ. ಈ ಸೀರೆಯ ಮೇಲೆ, ಪ್ರಧಾನಿ ಮೋದಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ಪೇಂಟಿಂಗ್ ಮಾಡಿದ್ದು ತುಂಬ ಗಮನಸೆಳೆಯುತ್ತಿದೆ.
ಬಿರನ್ ಕುಮಾರ್ ಅವರು ನೀಡಿದ ಈ ವಿಶೇಷ ಉಡುಗೊರೆಯನ್ನು ನೋಡಿದ ಪ್ರಧಾನಿ ಮೋದಿ ತುಂಬ ಖುಷಿಯಿಂದ ಟ್ವೀಟ್ ಮಾಡಿಕೊಂಡಿದ್ದಾರೆ. ಬಿರನ್ ಕುಮಾರ್ ಬಸಕ್ ಅವರು ಪಶ್ಚಿಮ ಬಂಗಾಳದ ನಾದಿಯಾದವರು. ಅವರೊಬ್ಬ ಹೆಸರಾಂತ ನೇಕಾರರು. ಸೀರೆಗಳ ಮೇಲೆ ಭಾರತೀಯ ಇತಿಹಾಸ, ಸಂಸ್ಕೃತಿ, ಪರಂಪರೆಯ ಚಿತ್ರಗಳನ್ನು ಚಿತ್ರಿಸುವುದು ಅವರ ವಿಶೇಷತೆ. ಈ ಬಾರಿ ಪದ್ಮಶ್ರೀ ಪುರಸ್ಕೃತರಾಗಿದ್ದು, ನಾನು ಅವರೊಂದಿಗೆ ಮಾತನಾಡುತ್ತಿದ್ದಾಗ ಈ ಸೀರೆ ಉಡುಗೊರೆಯನ್ನಾಗಿ ನೀಡಿದರು. ನನಗಂತೂ ತುಂಬ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ.
Shri Biren Kumar Basak belongs to Nadia in West Bengal. He is a reputed weaver, who depicts different aspects of Indian history and culture in his Sarees. During the interaction with the Padma Awardees, he presented something to me which I greatly cherish. pic.twitter.com/qPcf5CvtCA
— Narendra Modi (@narendramodi) November 13, 2021
ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪಡೆದ 102 ಜನರಲ್ಲಿ ಬಿರನ್ ಕುಮಾರ್ ಬಸಕ್ ಅವರೂ ಒಬ್ಬರು. ಒಂದು ರೂಪಾಯಿ ಬಂಡವಾಳದಿಂದ ಸೀರೆ ನೇಯ್ಗೆ ಮತ್ತು ಮಾರಾಟ ಶುರು ಮಾಡಿದವರು 1970ರ ಅವಧಿಯಲ್ಲಂತೂ ಬಿರನ್ ಕುಮಾರ್ ತಮ್ಮ ಸೋದರನೊಂದಿಗೆ ಸೇರಿ ಕೋಲ್ಕತ್ತದಲ್ಲಿ ಮನೆಮನೆಗೆ ತೆರಳಿ ಸೀರೆ ಮಾರಾಟ ಮಾಡುತ್ತಿದ್ದರು. ನಾದಿಯಾದಿಂದ ರೈಲಿನ ಮೂಲಕ ಕೋಲ್ಕತ್ತಕ್ಕೆ ಹೋಗುತ್ತಿದ್ದರು. ಆಗಂತೂ ಅವರು ಕೇವಲ 15-30 ರೂಪಾಯಿಯೂ ಸೀರೆ ಮಾರಿದ್ದುಂಟು. ಈಗ ಅವರ ವಾರ್ಷಿಕ ವಹಿವಾಟು 25 ಕೋಟಿ ರೂ.ಗೂ ಅಧಿಕ. ಸುಮಾರು 5000 ಜನರು ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ, ಸೌರವ್ ಗಂಗೂಲಿ, ಗಾಯಕರಾದ ಉಸ್ತಾದ್ ಅಮ್ಜದ್ ಅಲಿ ಖಾನ್, ಆಶಾ ಬೋಸ್ಲೆ, ಲತಾ ಮಂಗೇಶ್ಕರ್ರಂಥ ಹಲವು ಗಣ್ಯರು ಬಿರನ್ ಕುಮಾರ್ ಅವರ ಗ್ರಾಹಕರಾಗಿದ್ದಾರೆ.
ಇದನ್ನೂ ಓದಿ: ರೈತರ ತೀವ್ರ ವಿರೋಧದ ಮಧ್ಯೆ ಹಲಗಾ-ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ; ಎರಡೇ ದಿನದಲ್ಲಿ 5 ಕಿಲೋ ಮೀಟರ್ ಕಚ್ಚಾ ರಸ್ತೆ ನಿರ್ಮಾಣ