Video: ಫೇಲ್ ಆದ ಫೋಟೋಶೂಟ್; ಡ್ರೆಸ್ ಎಳೆಯುತ್ತಿದ್ದಂತೆ ನದಿಗೆ ಬಿದ್ದ ಯುವತಿ
ಈ ಯುವತಿ ನದಿ ಬದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಳು. ಹೀಗೆ ಸ್ವಲ್ಪ ರಿಸ್ಕಿ ಫೋಟೋ ಶೂಟ್ ಮಾಡಿಸಿಕೊಳ್ಳಬೇಕಾದರೆ ಸ್ವಲ್ಪ ಮಟ್ಟಿಗೆ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಫೋಟೋ ಶೂಟ್(Photo Shoot)ನಂಥ ಸಂದರ್ಭದಲ್ಲಿ ಆಗುವ ಕೆಲವು ಅವಾಂತರಗಳು ನಿಜಕ್ಕೂ ನಗುತರಿಸುತ್ತವೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಅಂಥ ವಿಡಿಯೋಗಳು ಬಹುಬೇಗನೇ ನೆಟ್ಟಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಹಾಗೇ, ಈಗ ಯುವತಿಯೊಬ್ಬಳು ಫೋಟೋ ತೆಗೆಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೆಟ್ಟಿಗರಂತೂ ಅದನ್ನು ನೋಡಿ ವಿಧವಿಧದ ಕಾಮೆಂಟ್ ಮಾಡುತ್ತಿದ್ದಾರೆ.
ಈ ಯುವತಿ ನದಿ ಬದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಳು. ಹೀಗೆ ಸ್ವಲ್ಪ ರಿಸ್ಕಿ ಫೋಟೋ ಶೂಟ್ ಮಾಡಿಸಿಕೊಳ್ಳಬೇಕಾದರೆ ಸ್ವಲ್ಪ ಮಟ್ಟಿಗೆ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಯುವತಿ ಮತ್ತು ಆಕೆಯ ಜತೆಗಿದ್ದವರು ತೆಗೆದುಕೊಂಡ ಎಚ್ಚರಿಕೆ ಸಾಕಾಗದ ಕಾರಣ ಆ ಫೋಟೋ ಶೂಟ್ ಸಂಪೂರ್ಣ ವಿಫಲವಾಗಿದೆ. ಯುವತಿ ಸೀದಾ ಹೋಗಿ ನದಿಯಲ್ಲಿ ಧೊಪ್ಪನೆ ಬಿದ್ದಿದ್ದಾಳೆ. ಆದರೆ ಅದೃಷ್ಟವಶಾತ್ ಏನೂ ಪೆಟ್ಟಗಾದ ಕಾರಣ ಅವಳು ದೊಡ್ಡದಾಗಿ ನಕ್ಕಿದ್ದಾಳೆ. ಇದೂ ಕೂಡ ಫನ್ನಿ ವಿಡಿಯೋ ಎನ್ನಿಸಿಕೊಂಡಿದ್ದಾರೆ. ಆದರೆ ಅಪಾಯವಾಗಿದ್ದರೆ ಇದೊಂದು ದುರಂತವಾಗಿ ಮಾರ್ಪಡುತ್ತಿತ್ತು.
ಯುವತಿ ಫುಲ್ ಮೇಕಪ್ ಮಾಡಿಕೊಂಡಿದ್ದಾಳೆ. ಉದ್ದನೆಯ, ಗುಲಾಬಿ ಬಣ್ಣದ ಡ್ರೆಸ್ ತೊಟ್ಟು ನದಿಯ ದಡದ ಮೇಲೆ ಉಯ್ಯಾಲೆಯಲ್ಲಿ ಕುಳಿತಿದ್ದಾಳೆ. ಆಕೆಯ ಹಿಂದೆ ಉದ್ದವಾಗಿ ನೆಲದ ಮೇಲೆ ಬಿದ್ದಿರುವ ಉಡುಪನ್ನು ದಡದ ಮೇಲೆ ನಿಂತವನ್ನೊಬ್ಬ ಒಮ್ಮೆ ಹಾರಿಸುತ್ತಾನೆ. ಆದರೆ ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎಂಬಂತೆ ಆಕೆ ಉಯ್ಯಾಲೆಯಿಂದ ನೀರಿಗೆ ಬೀಳುತ್ತಾಳೆ. ಆ ಯುವತಿ ತುಂಬ ದಪ್ಪಗೆ ಇದ್ದಿದ್ದರಿಂದಲೇ ಬ್ಯಾಲೆನ್ಸ್ ಮಾಡಲು ಸಾಧ್ಯವಾಗಿಲ್ಲ ಎಂಬುದು ವಿಡಿಯೋ ನೋಡಿದ ಬಹುತೇಕರ ಅಭಿಪ್ರಾಯ. ಆದರೆ ನದಿಯ ಆ ಭಾಗದಲ್ಲಿ ಆಳವಿಲ್ಲದ ಕಾರಣ ಹೆಚ್ಚಿಗೆ ಅಪಾಯ ಉಂಟಾಗಲಿಲ್ಲ.
View this post on Instagram
ಇದನ್ನೂ ಓದಿ: ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?