Viral Video : ‘ನನ್ನ ಜವಾಬ್ದಾರಿಯೂ ಇದೆ ಪರಿಸರ ಸಂರಕ್ಷಣೆಯಲ್ಲಿ’

| Updated By: ಶ್ರೀದೇವಿ ಕಳಸದ

Updated on: Sep 06, 2022 | 2:54 PM

Dog : ಯಾರೋ ಎಸೆದ ಬಾಟಲಿಯನ್ನು ಎಷ್ಟೊಂದು ದೂರದವರೆಗೂ ಬಾಯಿಯಲ್ಲಿ ಹಿಡಿದುಕೊಂಡು ಹೋಗಿ ಡಸ್ಟ್​ಬಿನ್​ ಗೆ ಹಾಕಿಬರುತ್ತದೆ ಈ ಜಾಣ ನಾಯಿ!

Viral Video : ‘ನನ್ನ ಜವಾಬ್ದಾರಿಯೂ ಇದೆ ಪರಿಸರ ಸಂರಕ್ಷಣೆಯಲ್ಲಿ’
ನಮ್ಮ ಪರಿಸರ ಸಂರಕ್ಷಣೆ ನಮ್ಮ ಹೊಣೆ
Follow us on

Viral Video : ನಾಯಿಬೆಕ್ಕುಗಳಿಗೆ ಚೆನ್ನಾಗಿ ತರಬೇತಿ ಕೊಟ್ಟರೆ ನಿಜಕ್ಕೂ ಅವುಗಳು ತುಂಬಾ ಸಹಾಯ ಮಾಡುತ್ತವೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳನ್ನು ಆನ್​ಲೈನ್​ನಲ್ಲಿ ನೋಡುತ್ತಲೇ ಇರುತ್ತೀರಿ. ರೆಡ್ಡಿಟ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಕ್ಕಳಿಗೆ ನಾವು ಹೇಗೆ ಶಿಸ್ತು ಹೇಳಿಕೊಡುತ್ತೇವೋ ಹಾಗೆ ಚಿಕ್ಕಂದಿನಲ್ಲಿಯೇ ಸಾಕುಪ್ರಾಣಿಗಳಿಗೆ ಹೇಳಿಕೊಟ್ಟರೂ ಅವು ಕಲಿತೇ ಕಲಿಯುತ್ತವೆ ಎನ್ನುವುದಕ್ಕೆ ಇಲ್ಲಿರುವ ಈ ನಾಯಿಗಿಂತ ಉತ್ತಮ ಉದಾಹರಣೆ ಬೇಕಾ? ಈ ನಾಯಿಯು ಎಷ್ಟೊಂದು ಜವಾಬ್ದಾರಿಯುತವಾಗಿದೆ ನೋಡಿ. 16 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 1,600 ಜನರು ಇಷ್ಟಪಟ್ಟಿದ್ದಾರೆ. ಈ ವಿಡಿಯೋ 5.8 ಮಿಲಿಯನ್ ಸದಸ್ಯರನ್ನು ಹೊಂದಿರುವ r/AnimalsBeingBros ಎಂಬ ಸಬ್‌ರೆಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ರಸ್ತೆಯಲ್ಲಿ ಯಾರೋ ಎಸೆದ ಬಾಟಲಿಯನ್ನು ಈ ನಾಯಿಯು ಬಾಯಿಯಲ್ಲಿ ಕಚ್ಚಿಕೊಂಡು ಡಸ್ಟ್​ಬಿನ್​ ಇದ್ದಲ್ಲಿಗೆ ಓಡುತ್ತಿದೆ. ಅದರ ಪೋಷಕಿಯು ಅದರೊಂದಿಗೆ ಸಾಗುತ್ತಿದ್ದಾರೆ. ‘ನನ್ನ ನಾಯಿ ತನ್ನ ನೆರೆಹೊರೆಯ ಪ್ರದೇಶವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಮತ್ತೊಂದು ವಿಡಿಯೋ’ ಎಂಬ ಶೀರ್ಷಿಕೆ ಈ ವಿಡಿಯೋಗಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎಂಥಾ ಒಳ್ಳೆಯ ನಾಯಿ ಇದು. ಇವಳ ಬೆನ್ನಿನ ಮೇಲೆ ಕೈಯ್ಯಾಡಿಸಬೇಕೆನ್ನಿಸುತ್ತಿದೆ ಎಂದು ರೆಡ್ಡಿಟ್ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ‘ಸ್ವೀಟ್​ ಬೇಬಿ! ಅದರ ಬಾಲವೇ ಎಲ್ಲವನ್ನೂ ಹೇಳುತ್ತದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಮಕ್ಕಳನ್ನು ಬೆಳೆಸುವಂತೆ ಜೋಪಾನವಾಗಿ ಪ್ರಜ್ಞೆಯಿಂದ ಬೆಳೆಸಿದರೆ ನಾಯಿಗಳೂ ಶಿಸ್ತನ್ನು ಕಲಿಯುವಲ್ಲಿ ಸಂದೇಹವೇ ಇಲ್ಲ. ಆದರೆ ಎಲ್ಲವನ್ನೂ ನಿಭಾಯಿಸುವ ತಾಳ್ಮೆ ಸಾಕುವವರಿಗೆ ಇರಬೇಕಷ್ಟೇ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:52 pm, Tue, 6 September 22