Viral : ಮೊದಲ ಹೆಂಡತಿ ಬರುತ್ತಿದ್ದಂತೆ ಆರತಕ್ಷತೆಯಿಂದ ಓಟಕಿತ್ತ ವರ!

Hyderabad : ‘ನಾನೊಬ್ಬ ವೈದ್ಯೆ. COVID-19 ರ ಎರಡನೇ ಅಲೆಯ ಸಮಯದಲ್ಲಿ, ಕೋವಿಡ್ ಪಾಸಿಟಿವ್ ಆಗಿದ್ದ ನನ್ನ ಗಂಡನ ಚಿಕ್ಕಪ್ಪನನ್ನು ನೋಡಿಕೊಂಡಿದ್ದೆ. ನನ್ನ ಉಳಿತಾಯದ ಹಣವನ್ನು ಅವರಿಗೆ ನೀಡಿದ್ದೆ’

Viral : ಮೊದಲ ಹೆಂಡತಿ ಬರುತ್ತಿದ್ದಂತೆ ಆರತಕ್ಷತೆಯಿಂದ ಓಟಕಿತ್ತ ವರ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 06, 2022 | 1:19 PM

Viral : ಮೊದಲ ಹೆಂಡತಿ ಪೊಲೀಸರೊಂದಿಗೆ ಆರತಕ್ಷತೆ ನಡೆಯುತ್ತಿದ್ದ ವೇಳೆ ಬರುತ್ತಿದ್ದಂತೆ ವರ ಅಲ್ಲಿಂದ ಓಟಕಿತ್ತ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ವರನನ್ನು ಸೈಯದ್ ನಝೀರ್ ಎಂದು ಗುರುತಿಸಲಾಗಿದೆ. ಈತನು ತನ್ನ ಹೆಂಡತಿಗೆ ತಿಳಿಸದೆ ಎರಡನೇ ಮದುವೆಯಾಗಲು ಹೊರಟಿದ್ದ. ಆದರೆ, ಆರತಕ್ಷತೆ ಸಂದರ್ಭದಲ್ಲಿ ಆತನ ಹೆಂಡತಿ ಪೊಲೀಸರೊಂದಿಗೆ ಬಂದಾಗ, ನಝೀರ್ ಹಿಂಬಾಗಿಲಿನಿಂದ ಓಡಿಹೋಗುವ ಮೂಲಕ ಅಲ್ಲಿ ಉಂಟಾಗುವ ಗಲಾಟೆಯನ್ನು ತಪ್ಪಿಸಿದ್ದಾನೆ! ಮೊದಲ ಪತ್ನಿ ಡಾ. ಸನಾ ಸಮ್ರೀನ್ ತನ್ನ ಗಂಡನ ವಿರುದ್ಧ ಸಂತೋಷ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೆಪ್ಟೆಂಬರ್ 4 ರಂದು ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಆ ದಿನ ಸೈಯದ್​ ನಝೀರ್ ಎರಡನೇ ಮದುವೆಯ ಆರತಕ್ಷತೆಯಲ್ಲಿ ಸಂತೋಷದಿಂದ ಪಾಲ್ಗೊಂಡ ಸಂದರ್ಭದಲ್ಲಿ ಅಚಾನಕ್ ಆಗಿ ಮೊದಲ ಹೆಂಡತಿಯು ಪೊಲೀಸರೊಂದಿಗೆ ಬಂದಾಗ ಎಚ್ಚೆತ್ತುಕೊಂಡ ವ್ಯಕ್ತಿ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ವರದಿಯ ಪ್ರಕಾರ, ಈತ ತನ್ನ ಮೊದಲ ಪತ್ನಿ ಡಾ. ಸನಾ ಸಮ್ರೀನ್‌ಗೆ, ಎರಡನೇ ಮದುವೆಯಾಗುವ ಬಗ್ಗೆ ತಿಳಿಸಿರಲಿಲ್ಲ. ಆದ್ದರಿಂದ ಸಮ್ರೀನ್ ಈ ಕ್ರಮ ಕೈಗೊಳ್ಳಬೇಕಾಯಿತು. ಈ ಸಂದರ್ಭವನ್ನು ಎದುರಿಸುವುದಕ್ಕಿಂತ ಓಡಿಹೋಗುವುದೇ ಲೇಸೆಂದು ಭಯದಿಂದ ಈ ಉಪಾಯದ ಮೊರೆ ಹೋಗಿದ್ದಾನೆ.

ಈ ಘಟನೆಯ ಕುರಿತು ಸಮ್ರೀನ್ ಅವರ ಸಹೋದರ, ‘ನನ್ನ ಸಹೋದರಿ 2019 ರಲ್ಲಿ ನ್ಯೂಝಿಲೆಂಡ್‌ನಿಂದ ಬಂದ ಕೂಡಲೇ ಸೈಯದ್ ಅವರನ್ನು ವಿವಾಹವಾದರು. COVID-19 ಲಾಕ್‌ಡೌನ್ ಸಮಯದಲ್ಲಿ ನಮ್ಮಲ್ಲಿಯೇ ಉಳಿದರು. ಸೈಯ್ಯದ್ ಅವರನ್ನು ನಾವೇ ನೋಡಿಕೊಂಡೆವು. ರೂ. 15 ಲಕ್ಷ ಬೇಡಿಕೆಯಿಟ್ಟರು, ಆದರೆ ನಾವು ಕೊಡಲಿಲ್ಲ. ಆದಕಾರಣ ನನ್ನ ಸಹೋದರಿಯಿಂದ ದೂರವಿರಲು ಪ್ರಾರಂಭಿಸಿದರು.’ ಎಂದು ಡೆಕ್ಕನ್ ಕ್ರಾನಿಕಲ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಮಧ್ಯೆ, ಹಣಕ್ಕಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದರ ಬಗ್ಗೆ ಸಮ್ರೀನ್ ಮಾತನಾಡುತ್ತಾ, ‘ನಾನೊಬ್ಬ ವೈದ್ಯೆ. COVID-19 ರ ಎರಡನೇ ಅಲೆಯ ಸಮಯದಲ್ಲಿ, ನಾನು ಕೋವಿಡ್ ಪಾಸಿಟಿವ್ ಆಗಿದ್ದ ಸೈಯದ್ ಅವರ ಚಿಕ್ಕಪ್ಪನಿಗೆ ಸೇವೆ ಸಲ್ಲಿಸಿದೆ ಮತ್ತು ಲಾಕ್‌ಡೌನ್ ಸಮಯದಲ್ಲಿ ನನ್ನ ಉಳಿತಾಯದ ಹಣವನ್ನು ಅವರಿಗೆ ನೀಡಿದ್ದೆ’ ಎಂದಿದ್ದಾರೆ.

ಎರಡನೇ ಮದುವೆಯ ಘಟನೆಯ ಬಗ್ಗೆ ಮಾತನಾಡುತ್ತಾ, ‘ತನ್ನ ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಯಸಿದ್ದೆ. ಆದರೆ ಆತ ತಪ್ಪಿಸಿಕೊಂಡಿದ್ದರಿಂದ ಸಂತೋಷ್ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಬೇಕಾಯಿತು ಎಂದಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:18 pm, Tue, 6 September 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್