Viral: ಅಂದೇ 100 ಕೋಟಿ ಆಸ್ತಿ ಇತ್ತು, 38ನೇ ವಯಸ್ಸಿಗೆ ನಿವೃತ್ತಿ ಪಡೆದ್ರು; ಇನ್ಫೋಸಿಸ್ ಮಾಜಿ ಉದ್ಯೋಗಿಯ ಬದುಕಿನ ಚಿತ್ರಣ ಬಿಚ್ಚಿಟ್ಟ ಆಪ್ತ ವ್ಯಕ್ತಿ

ಸಣ್ಣ ವಯಸ್ಸಿನಲ್ಲಿಯೇ ಈ ವೃತ್ತಿಜೀವನದಲ್ಲಿ ಯಶಸ್ಸು ಕಾಣುವವರು ಕೆಲವೇ ಕೆಲವು ಮಂದಿ. ಅದೃಷ್ಟ ಇರುವವರಿಗೆ ಕೆಲಸಕ್ಕೆ ಸೇರಿದ ಕೆಲವೇ ವರ್ಷಗಳಲ್ಲಿ ಪ್ರಮೋಷನ್ ಸೇರಿದಂತೆ ವೃತ್ತಿ ಬದುಕಿನಲ್ಲಿ ಸಕ್ಸಸ್ ಸಿಗುತ್ತದೆ. ಆದರೆ ಬಳಕೆದಾರರು ತಮ್ಮ ಪರಿಚಯ ವ್ಯಕ್ತಿಯೊಬ್ಬರು ಇನ್ಪೋಸಿಸ್ ಆರಂಭಿಕ ಉದ್ಯೋಗಿಯಾಗಿದ್ದು, 38ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದು, ಅವರು ಶ್ರೀಮಂತ ವ್ಯಕ್ತಿಯಾಗಿದ್ರೂ ಸರಳವಾಗಿ ಹೇಗೆ ಬದುಕುತ್ತಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಅಂದೇ 100 ಕೋಟಿ ಆಸ್ತಿ ಇತ್ತು, 38ನೇ ವಯಸ್ಸಿಗೆ ನಿವೃತ್ತಿ ಪಡೆದ್ರು; ಇನ್ಫೋಸಿಸ್ ಮಾಜಿ ಉದ್ಯೋಗಿಯ ಬದುಕಿನ ಚಿತ್ರಣ ಬಿಚ್ಚಿಟ್ಟ ಆಪ್ತ ವ್ಯಕ್ತಿ
ಸಾಂದರ್ಭಿಕ ಚಿತ್ರ

Updated on: Oct 23, 2025 | 11:47 AM

ಇತ್ತೀಚೆಗಷ್ಟೇ 90ರ ದಶಕದ ಇನ್ಫೋಸಿಸ್ ಕ್ಯಾಂಟಿನ್‌ನಲ್ಲಿನ (Infosys canteen) ವಿಡಿಯೋವೊಂದು ವೈರಲ್ ಆಗಿತ್ತು, ಅಂದು ಇನ್ಫೋಸಿಸ್ ಉದ್ಯೋಗಿಗಳು ಹೇಗಿದ್ದರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿತ್ತು. ಆದ್ರೆ  ಆ ವಿಡಿಯೋದ ಬಳಿಕ ವ್ಯಕ್ತಿಯೊಬ್ಬರು ತಮ್ಮ ಆಪ್ತ ವ್ಯಕ್ತಿಯೂ ಇನ್ಪೋಸಿಸ್ ಆರಂಭಿಕ ಉದ್ಯೋಗಿಯಾಗಿದ್ದು (Infosys early employee), ಆದರೆ ಕೈತುಂಬಾ ಸಂಬಳ ಸಿಗುವ ಉದ್ಯೋಗವನ್ನೇ ತೊರೆದರು. ಸಣ್ಣ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿಯೇ ಬಿಟ್ಟರು ಎಂದು ಅವರ ವೃತ್ತಿಜೀವನದ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬಳಿಕ ಅವರ ಜೀವನ ಹೇಗಿತ್ತು ಎನ್ನುವ ಬಗ್ಗೆ ಉಲ್ಲೇಖಿಸಿದ್ದು, ಸರಳ ಜೀವನ ನಡೆಸುತ್ತಿರುವ ಆ ವ್ಯಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ಫೋಸಿಸ್‌ ಮಾಜಿ ಉದ್ಯೋಗಿಯ ಬದುಕಿನ ಚಿತ್ರಣ ಬಿಚ್ಚಿಟ್ಟ ಆಪ್ತ ವ್ಯಕ್ತಿ

ಲೈಫ್ ಆಫ್ಟರ್ ಎಫ್ ಐ ಹೆಸರಿನಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್ ನಲ್ಲಿ ನನಗೆ ಗೊತ್ತಿರುವ ಒಬ್ಬರು, ಇನ್ಫೋಸಿಸ್‌ನಲ್ಲಿ ಆರಂಭಿಕ ಉದ್ಯೋಗಿಯಾಗಿದ್ದರು. ಇನ್ಪೋಸಿಸ್‌ನ ಆರಂಭಿಕ 5 ಸಾವಿರ ಉದ್ಯೋಗಿಗಳ ಪೈಕಿ ಅವರು ಒಬ್ಬರಾಗಿದ್ದರು. 2006ರಲ್ಲಿ ಅವರು ಇನ್ಪೋಸಿಸ್‌ನಿಂದ ನಿವೃತ್ತಿ ಪಡೆದುಕೊಂಡರು. ಆ ಸಮಯಕ್ಕೆ ಅವರ ಬಳಿ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ವಯಸ್ಸು ಕೇವಲ 38 ಅಷ್ಟೇ ಆಗಿತ್ತು. ಈಗ ನಿವತ್ತಿ ಜೀವನ ನಡೆಸುತ್ತಿದ್ದಾರೆ. ಆದರೆ ನಿವೃತ್ತಿ ಬಳಿಕ ಅವರು ಎಲ್ಲೂ ಕೆಲಸ ಮಾಡಲಿಲ್ಲ. ಅವರ ಬಳಿ ಒಂದು ಫ್ಲ್ಯಾಟ್ ಇದೆ, ಐಷಾರಾಮಿ ಕಾರು ಓಡಿಸುವುದಿಲ್ಲ. ಭೇಟಿಯಾದಾಗ ಅವರು ಒಟ್ಟು 200 ರಿಂದ 300 ಕೋಟಿ ರೂಪಾಯಿ ಒಡೆಯ ಎನ್ನುವುದು ಅರಿವಿಗೆ ಬರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಉದ್ಯೋಗ ಸ್ಥಳದಲ್ಲಿ ತನ್ನನ್ನು ನಡೆಸಿಕೊಳ್ಳುವ ರೀತಿ ಇದು ಎಂದ ವ್ಯಕ್ತಿ
ಹೊಸ ಉದ್ಯೋಗಿಯ ವರ್ತನೆಗೆ ಮ್ಯಾನೇಜರ್ ಶಾಕ್!
ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ವಾರದ ಸಂಪಾದನೆ 21 ಸಾವಿರ ರೂ ಅಂತೆ
ಟಾರ್ಗೆಟ್ ಹೆಚ್ಚಾಗ್ತವೆ, ಸಂಬಳವಲ್ಲ; ಉದ್ಯೋಗಿಯ ರಿಸೈನ್‌ ಲೆಟರ್‌ ವೈರಲ್‌

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ:ದಿನಕ್ಕೆ 12 ಗಂಟೆ ಕೆಲಸ, ಸರಿಯಾಗಿ ಕೆಲ್ಸ ಮಾಡುತ್ತಿಲ್ಲ ಅನ್ನೋ ಆರೋಪ; ಉದ್ಯೋಗ ಸ್ಥಳದ ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ

ಅಕ್ಟೋಬರ್ 19 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ಹಣ ಗಳಿಸಿದ ಬಳಿಕ ಹೆಚ್ಚಿನವರು ಕೆಲಸ ಮಾಡುವುದನ್ನು ಏಕೆ ನಿಲ್ಲಿಸುತ್ತಾರೆ ಎಂದು ಕೇಳಿದ್ದಾರೆ. ಇಂತಹ ಕಥೆಗಳಿಂದ ನಾನು ಬೇಸೆತ್ತು ಹೋಗಿದ್ದೇನೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:45 am, Thu, 23 October 25