Viral Video : ಕಾನ್ಸಸ್‌ನ ವಿಚಿತಾದಲ್ಲಿರುವ ಸೆಡ್ಗ್‌ವಿಕ್ ಕೌಂಟಿ ಮೃಗಾಲಯದಲ್ಲಿ ಈ ಹೃದಯಸ್ಪರ್ಶಿಯಾದ ಘಟನೆ ನಡೆದಿದೆ. ಹೆತ್ತಮೇಲೆ ಮಗು ಅಮ್ಮನ ಮಡಿಲಲ್ಲೇ ಇರಬೇಕಲ್ಲ? ಅಷ್ಟು ವರ್ಷ ಅದರ ಒಡಲಲ್ಲಿ ಬೆಚ್ಚಗಿದ್ದ ಕೂಸಿಗೆ ಇದ್ದಕ್ಕಿದ್ದ ಹಾಗೆ ಜಗತ್ತಿಗೆ ಬಂದಮೇಲೆಯೂ ಅಮ್ಮನ ಮಡಿಲು ಬೇಕೇಬೇಕು. ಹಾಗೇ ತಾಯಿಯೂ ಮಗುವನ್ನು ಬಿಟ್ಟು ಅರೆಗಳಿಗೆ ಇರಲಾರಳು. ಆದರೆ ತಾಯಿಚಿಂಪಾಂಜಿಗೆ ಇಲ್ಲಿ ಸಿ ಸೆಕ್ಷನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಹುಟ್ಟಿದ ತಕ್ಷಣ ಮಗುವಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಹಾಗಾಗಿ ಎರಡು ದಿನಗಳ ಕಾಲ ವೈದ್ಯರ ನಿಗಾದಲ್ಲಿ ಇರಬೇಕಾದ ಅನಿವಾರ್ಯತೆ ಉಂಟಾಗಿದೆ.
ಎರಡು ದಿನಗಳ ಬಳಿಕ ಮಗುವಿನ ಬಳಿ ತಾಯಿ ಚಿಂಪಾಂಜಿ ಬಂದಾಗಿನ ವಿಡಿಯೋ ಇದು. ಒಂದು ಕ್ಷಣ ಸುಮ್ಮನೇ ನಿಲ್ಲುತ್ತದೆ ತಾಯಿಚಿಂಪಾಂಜಿ. ಮಗುಚಿಂಪಾಂಜಿಗೆ ತನ್ನ ತಾಯಿ ಎಂದು ತಿಳಿದ ತಕ್ಷಣವೇ ಕೈ ಎತ್ತುತ್ತದೆ. ಅಪ್ಪಿಕೊಂಡು ಮುದ್ದಾಡುತ್ತದೆ ತಾಯಿಚಿಂಪಾಂಜಿ. ಎಂಥ ಮಧುರ ಘಳಿಗೆಗಳು ಅಲ್ಲವಾ?
ಈ ವಿಡಿಯೋ ಅನ್ನು ಈತನಕ 70,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದಕ್ಕಿಂತ ಮುದ್ದಾದ ವಿಡಿಯೋ ಮತ್ತೊಂದಿಲ್ಲ. ಪಶುವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಎಂದಿದ್ದಾರೆ ಹಲವರು.
ಇದನ್ನು ನೋಡಿ ನಾನು ದಿನವಿಡೀ ಅತ್ತಿದ್ದೇನೆ ಎಂದಿದ್ದಾರೆ ಒಬ್ಬರು. ತಾಯಿಪ್ರೀತಿಗೆ ಎಂದಾದರೂ ಕೊನೆಯುಂಟೇ ಎಂದಿದ್ದಾರೆ ಕೆಲವರು. ಆ ಬಂಧವೇ ಹಾಗಲ್ಲವಾ?
ಏನನ್ನಿಸುತ್ತಿದೆ ಇದನ್ನು ನೋಡಿದ ನಿಮಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:32 pm, Sat, 19 November 22