ಮಕ್ಕಳ ನಡವಳಿಕೆಗೆ ನೊಂದು ಸಾಕು ಪ್ರಾಣಿಯ ಹೆಸರಿಗೆ ಕೋಟಿಗಟ್ಟಲೆ ಆಸ್ತಿ ವರ್ಗಾವಣೆ ಮಾಡಿದ ವೃದ್ಧೆ

|

Updated on: Jan 26, 2024 | 11:39 AM

ಮಕ್ಕಳ ವರ್ತನೆಯಿಂದ ನೊಂದಿದ್ದ ವೃದ್ಧೆ ತನ್ನ ಒಟ್ಟು 23 ಕೋಟಿ ರೂ. ಆಸ್ತಿಯನ್ನು ತಾನು ಮುದ್ದಿನಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿದ್ದಾರೆ.

ಮಕ್ಕಳ ನಡವಳಿಕೆಗೆ ನೊಂದು ಸಾಕು ಪ್ರಾಣಿಯ ಹೆಸರಿಗೆ ಕೋಟಿಗಟ್ಟಲೆ ಆಸ್ತಿ ವರ್ಗಾವಣೆ ಮಾಡಿದ ವೃದ್ಧೆ
ಸಾಂದರ್ಭಿಕ ಚಿತ್ರ
Image Credit source: Pinterest
Follow us on

ಲಿಯು ಎಂಬ ವಯೋವೃದ್ಧೆ ತನ್ನ ಮಕ್ಕಳಿಗೆ ಪಾಠ ಕಲಿಸಲು ತನ್ನ 23 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ತನ್ನ ಸಾಕುನಾಯಿ, ಬೆಕ್ಕಿನ ಹೆಸರಿಗೆ ವರ್ಗಾಯಿಸಿದ್ದಾರೆ. ಈ ಆಘಾತಕಾರಿ ಪ್ರಕರಣ ಚೀನಾದ ಶಾಂಘೈನಲ್ಲಿ ನಡೆದಿದೆ. ಕೆಲ ದಿನಗಳಿಂದ ವೃದ್ಧೆ ಅನಾರೋಗ್ಯದಿಂದ ಬಳುತ್ತಿದ್ದರೂ ಕೂಡ ಆಕೆಯ ಮಕ್ಕಳು ಭೇಟಿಯಾಗಲು ಬಂದಿಲ್ಲ,ಫೋನ್‌ನಲ್ಲಿಯೂ ಮಾತನಾಡಿರಲ್ಲಿಲ್ಲ. ಈ ಕಾರಣದಿಂದ ನೊಂದಿದ್ದ ವೃದ್ಧೆ ತನ್ನ ಒಟ್ಟು 23 ಕೋಟಿ ರೂ. ಆಸ್ತಿಯನ್ನು ತಾನು ಮುದ್ದಿನಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪ್ರಾಣಿಗಳ ಹೆಸರಿನಲ್ಲಿ ಉಯಿಲು ಬಿಡಲು ಚೀನಾದಲ್ಲಿ ಯಾವುದೇ ಕಾನೂನು ಇಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ, ಅಧಿಕಾರಿಗಳ ಸಲಹೆಯ ಮೇರೆಗೆ, ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಆಸ್ತಿ ವರ್ಗಾವಣೆ ಮಾಡಲಾಗುತ್ತದೆ. ಈ ಮೂಲಕ ವೃದ್ಧೆಯ ಮರಣದ ನಂತರ ಆಕೆಯ ಸಾಕುಪ್ರಾಣಿಗಳನ್ನು ಪಶುವೈದ್ಯಕೀಯ ಚಿಕಿತ್ಸಾಲಯ ನೋಡಿಕೊಳ್ಳುವ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸಿನಿಮಾ ಹೀರೋಯಿನ್​​; ವಿಡಿಯೋ ವೈರಲ್​​

‘ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ನನ್ನ ಯೋಗಕ್ಷೇಮವನ್ನೂ ಕೇಳಲಿಲ್ಲ. ಭೇಟಿಯಾಗಲು ಬರದಿದ್ದರೆ, ಕನಿಷ್ಠ ಫೋನ್‌ನಲ್ಲಿ ಮಾತನಾಡಬಹುದಿತ್ತು. ಆದರೆ ಅದನ್ನೂ ಮಾಡಲಿಲ್ಲ. ಪ್ರತೀ ಕ್ಷಣ ನನಗೆ ಸಂತೋಷ ಕೊಡುವುದು ನಾನು ಸಾಕಿದ ನನ್ನ ನಾಯಿ, ಬೆಕ್ಕು. ಈ ಮೂಕ ಜೀವಿ ಸದಾ ನನ್ನೊಂದಿಗೆ ಇರುತ್ತದೆ. ಆದ್ದರಿಂದ ಸಂಪೂರ್ಣ ಆಸ್ತಿಯನ್ನು ಈ ಮೂಕ ಜೀವಿಯ ಹೆಸರಿಗೆ ವರ್ಗಾವಣೆ ಮಾಡುತ್ತಿದ್ದೇನೆ. ತನ್ನ ನಾಯಿ ,ಬೆಕ್ಕನ್ನು ಸಾಕುವವರಿಗೆ ಈ ಆಸ್ತಿ ಸೇರುತ್ತದೆ ಎಂದು ವಿಲ್​​ನಲ್ಲಿ ಬರೆದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:39 am, Fri, 26 January 24