Goat in School Dress: ಸರ್ಕಾರಿ ಶಾಲೆಯ ಸಮವಸ್ತ್ರ ಧರಿಸಿ ಹುಲ್ಲು ಮೇಯುತ್ತಿರುವ ಮೇಕೆಗಳು

ಪಶ್ಚಿಮ ಬಂಗಾಳದ ಪುರುಲಿಯಾದ ಬಾಗ್ಮುಂಡಿಯಲ್ಲಿ ಶಾಲಾ ಸಮವಸ್ತ್ರ ಧರಿಸಿ ಮೇಕೆಗಳು ಹುಲ್ಲು ಮೇಯಿಯುತ್ತಿರುವ ದೃಶ್ಯ ಕಂಡುಬಂದಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗಿದೆ.

Follow us
ಅಕ್ಷತಾ ವರ್ಕಾಡಿ
|

Updated on: Jan 26, 2024 | 2:57 PM

ಪಶ್ಚಿಮ ಬಂಗಾಳದ ಪುರುಲಿಯಾದ ಬಾಗ್ಮುಂಡಿಯಲ್ಲಿ ಶಾಲಾ ಸಮವಸ್ತ್ರ ಧರಿಸಿ ಮೇಕೆಗಳು ಹುಲ್ಲು ಮೇಯಿಯುತ್ತಿರುವ ದೃಶ್ಯ ಕಂಡುಬಂದಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರವನ್ನು ನೀಡಿದರೆ, ಮಕ್ಕಳ ಬದಲಾಗಿ ಸಮವಸ್ತ್ರವನ್ನು ಮೇಕೆಗಳಿಗೆ ಹಾಕಿ ಪೋಷಕರು ಅಗೌರವ ತೋರುತಿದ್ದಾರೆ. ಜೊತೆಗೆ ಈ ಘಟನೆಗೆ ಶಾಲೆಯ ಅಸಡ್ಡೆಯೇ ಕಾರಣ ಎಂದು ಸ್ಥಳೀಯ ನಿವಾಸಿ ದಿಲೀಪ್ ಪ್ರಮಾಣಿಕ್ ಬಾಗ್ಮುಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಬಾಗಮುಂಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜನ್ ಮಜಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದಿಲೀಪ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಳಿ ತಾಳಲಾರದೆ ಬಾಣಲೆಯಲ್ಲಿ ಕೆಂಡ ಹಾಕಿ ಬೈಕ್​​ ಸವಾರಿ ಮಾಡಿದ ಮಹಿಳೆ

ಸರ್ಕಾರಿ ಶಾಲೆಯ ಸಮವಸ್ತ್ರ ಧರಿಸಿ ಹುಲ್ಲು ಮೇಯುತ್ತಿರುವ ಮೇಕೆಗೆ ಸಂಬಂಧಿಸಿದಂತೆ ತನ್ನ ಮೇಲೆ ಆರೋಪದ ಹೊರಿಸುವುದು ಸರಿಯಲ್ಲ ಎಂದು ಶಿಕ್ಷಕ ರಂಜನ್ ಹೇಳಿದ್ದಾರೆ. ನೀಲಿ ಬಟ್ಟೆ ಹಳೆಯ ಸಮವಸ್ತ್ರ,ಈಗ ಶಾಲಾ ಹೊಸ ಸಮವಸ್ತ್ರದ ಬಣ್ಣ ಬಿಳಿ. ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಬರುತ್ತಿದ್ದಾರೆ. ಸಮವಸ್ತ್ರವನ್ನು ಮೇಕೆಗೆ ತೊಡಿಸಿರುವುದರ ಬಗ್ಗೆ ನಮಗೆ ಯಾವುದೇ ಮಾಹಿತಿ ತಿಳಿದಿಲ್ಲ. ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿ ಎಂದು ಶಿಕ್ಷಕ ರಂಜನ್ ದೂರಿನ ವಿರುದ್ಧ ಪ್ರತ್ಯುತ್ತರ ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ