ಚೆನ್ನೈ: ಅಕ್ಟೋಬರ್ 4, ಮಂಗಳವಾರದಂದು ಆಯುಧ ಪೂಜೆಯನ್ನು ದೇಶದದ್ಯಾಂತ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಆದರೆ ತಮಿಳುನಾಡಿನಲ್ಲಿ ಆಯುಧ ಪೂಜೆಯನ್ನು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿರುವ ವಿಶ್ವವಿದ್ಯಾನಿಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ನಡೆಸಿದ ಆಯುಧ ಪೂಜಾ ಸಮಾರಂಭದಲ್ಲಿ ರೋಬೋಟ್‌ಗಳು ಸಹಾಯ ಮಾಡಿದೆ.
ಇದೀಗ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ರೋಬೋಟ್ ಗಂಟೆ ಬಾರಿಸುತ್ತಿರುವುದನ್ನು ಕಾಣಬಹುದು. ಮತ್ತೊಂದು ರೋಬೋಟ್ ಆಯುಧ ಪೂಜಾ ಸಮಾರಂಭದಲ್ಲಿ ಸಹಾಯ ಮಾಡಲು ಆರತಿ ತೆಗೆದುಕೊಳ್ಳುವುದನ್ನು ಕಾಣಬಹುದು. ಇದೀಗ ಈ ವಿಡಿಯೋವನ್ನು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ.
#Vellore #VIT This is known as Innovation. #BJP #modiji pic.twitter.com/W7llAuvqQc
— Lakshmi (@lakshmibjpwomen) October 4, 2022
ವೆಲ್ಲೂರಿನ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಸಲು ಫ್ಯಾನುಕ್ M-6iB ಮತ್ತು RJ3iC ಎಂಬ ಎರಡು ರೋಬೋಟ್‌ಗಳನ್ನು ಬಳಸಲಾಗುತ್ತದೆ. ಆದರೆ, ಆಯುಧ ಪೂಜೆಯ ಸಂದರ್ಭದಲ್ಲಿ, ಸಮಾರಂಭಗಳನ್ನು ನಡೆಸಲು ಸಿಬ್ಬಂದಿಗೆ ಸಹಾಯ ಮಾಡಲು ಬಳಸಲಾಯಿತು. ಇಲಾಖೆಯ ಸಿಬ್ಬಂದಿ ಕೂಡ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋದಲ್ಲಿ ಕಾಣಬಹುದು.
Published On - 1:08 pm, Wed, 5 October 22