Viral: ಪ್ರಧಾನಿ ರೋಹಿತ್‌, ಗೃಹ ಸಚಿವ ಕೊಹ್ಲಿ, ಟೀಮ್‌ ಇಂಡಿಯಾ ಆಟಗಾರರು ಕೇಂದ್ರ ಸಚಿವರಾದ್ರೆ ಹೇಗಿರ್ತಾರೆ ನೋಡಿ…

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 02, 2024 | 2:02 PM

ಇತ್ತೀಚಿಗೆ ಕೃತಕ ಬುದ್ಧಿಮತ್ತೆ ಸಾಧನ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದು, ಹಲವಾರು ಕಲಾವಿದರು ತಮ್ಮ ಕಲ್ಪನೆಯಲ್ಲಿ ಸಿನೆಮಾ ತಾರೆಯರ, ಕ್ರಿಕೆಟಿಗರ ಸುಂದರ ಫೋಟೋಗಳನ್ನು ರಚಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಕಲಾವಿದರೊಬ್ಬರು ಟೀಮ್ ಇಂಡಿಯಾ ಆಟಗಾರರು ಕೇಂದ್ರ ಸಚಿವ ಸಂಪುಟದ ಮಂತ್ರಿಗಳಾದ್ರೆ ಹೇಗಿರುತ್ತಾರೆ ಎಂಬುದನ್ನು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಫೋಟೋ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಪ್ರಧಾನಿ ರೋಹಿತ್‌, ಗೃಹ ಸಚಿವ ಕೊಹ್ಲಿ, ಟೀಮ್‌ ಇಂಡಿಯಾ ಆಟಗಾರರು ಕೇಂದ್ರ ಸಚಿವರಾದ್ರೆ ಹೇಗಿರ್ತಾರೆ ನೋಡಿ…
ವೈರಲ್​​​ ಸುದ್ದಿ
Follow us on

ಈಗಂತೂ ಎಲ್ಲವೂ ಡಿಜಿಟಲ್‌ಮಯ. ಈ ಡಿಜಿಟಲ್‌ ಯುಗದಲ್ಲಿ ಆರ್ಟಿಫೀಷಿಯಲ್‌ ಇಂಟೆಲಿಜೆನ್ಸ್‌ ಬಹಳ ಸದ್ದು ಮಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ತಂತ್ರಜ್ಞಾನ ಗಮನಾರ್ಹ ಪ್ರಭಾವವನ್ನು ಬೀರಿದ್ದು, ಕೃತಕ ಬುದ್ಧಿಮತ್ತೆಯ ಮೂಲಕ ಕಲಾವಿದರುಗಳು ಸಿನೆಮಾ ತಾರೆಯರ, ಕ್ರಿಕೆಟಿಗರ, ರಾಜಕಾರಣಿಗಳ ಫೋಟೋಗಳನ್ನು ಭಿನ್ನ ವಿಭಿನ್ನವಾಗಿ ರಚಿಸಿ ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಲಾವಿದ ಟೀಮ್‌ ಇಂಡಿಯಾ ಕ್ರಿಕೆಟಿಗರು ಕೇಂದ್ರ ಸಚಿವರಾದ್ರೆ ಹೇಗಿರ್ತಾರೆ ಎಂಬುದನ್ನು ಎಐ ಫೋಟೋ ಮೂಲಕ ತೋರಿಸಿಕೊಟ್ಟಿದ್ದು, ಈ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಕಲಾವಿದ ಸಾಹಿದ್‌ (sahixd) ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಟೀಮ್‌ ಇಂಡಿಯಾ ಕ್ರಿಕೆಟಿಗರನ್ನು ಕ್ಯಾಬಿನೆಟ್‌ ಮಂತ್ರಿಗಳನ್ನಾಗಿ ಮರುರೂಪಿಸಿದಾಗ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಫೋಟೋದಲ್ಲಿ ಟೀಮ್‌ ಇಂಡಿಯಾ ಕ್ರಿಕೆಟಿಗರು ಕೇಂದ್ರ ಸಚಿವ ಸಂಪುಟದ ಮಂತ್ರಿಗಳಾದ್ರೆ ಹೇಗಿರುತ್ತೆ ಎಂಬ ಫನ್ನಿ ದೃಶ್ಯವನ್ನು ಕಾಣಬಹುದು. ಈ ಎಐ ಫೋಟೋದಲ್ಲಿ ರೋಹಿತ್‌ ಶರ್ಮಾ ಅವರನ್ನು ಪ್ರಧಾನ ಮಂತ್ರಿಯಾಗಿ, ವಿರಾಟ್‌ ಕೊಹ್ಲಿ ಗೃಹ ಸಚಿವರಾಗಿ, ರವೀಂದ್ರ ಜಡೇಜಾ ಕೃಷಿ ಸಚಿವರಾಗಿ, ಜಸ್‌ಪ್ರೀತ್ ಬುಮ್ರಾ ಅವರನ್ನು ರೈಲ್ವೆ ಮತ್ತು ರಕ್ಷಣಾ ಸಚಿವರಾಗಿ, ಹಾರ್ದಿಕ್‌ ಪಾಂಡ್ಯರನ್ನು ಕ್ರೀಡಾ ಸಚಿವರಾಗಿ, ಕೆಎಲ್‌ ರಾಹುಲ್‌ ವಿತ್ತ ಸಚಿವರಾಗಿ, ಶುಭ್‌ಮನ್‌ ಗಿಲ್‌ ಅವರನ್ನು ವಿದೇಶಾಂಗ ಸಚಿವರನ್ನಾಗಿ ಚಿತ್ರಿಸಲಾಗಿದೆ.

ಇದನ್ನೂ ಓದಿ: ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ, ಸಂಸದೆಯ ಮಾತಿಗೆ ಪಾಕಿಸ್ತಾನ ಸಂಸತ್ತಿನ ಸ್ಪೀಕರ್‌ ಏನಂದ್ರು ನೋಡಿ…

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 57 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ತಮ್ಮ ನೆಚ್ಚಿನ ಆಟಗಾರರನ್ನು ಕೇಂದ್ರ ಸಚಿವ ಸಂಪುಟದ ಸದಸ್ಯರ ಸ್ಥಾನದಲ್ಲಿ ಕಂಡು ನೆಟ್ಟಿಗರು ಖುಷಿ ಪಟ್ಟಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:00 pm, Tue, 2 July 24